Indira Kit: ಅಕ್ಕಿಯ ಜೊತೆಗೆ ಇಂದಿರಾ ಕಿಟ್: ಸರ್ಕಾರದ ಘೋಷಣೆ ಮೇಲೆ ಜನರ ಕಣ್ಣು
ಸಚಿವರ ಮಾಹಿತಿಯಂತೆ ಕಿಟ್ ವಿತರಣೆಗೆ ಸಂಬಂಧಿಸಿದ ಮರು ಟೆಂಡರ್ ಪ್ರಕ್ರಿಯೆ ಅಂತಿಮ ಹಂತ ದಲ್ಲಿದ್ದು, ಶೀಘ್ರದಲ್ಲೇ ಜಿಲ್ಲೆಗಳಿಗೆ ಸರಬರಾಜು ಆರಂಭವಾಗಲಿದೆ. ಇಂದಿರಾ ಕಿಟ್‌ನಲ್ಲಿ ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ ಹಾಗೂ ಉಪ್ಪು ಸೇರಿರಲಿದ್ದು, ಬಡ ಕುಟುಂಬಗಳಿಗೆ ಇದು ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.
ರೇಷನ್ ಪಡೆಯುತ್ತಿರುವ ಪಡಿತರದಾರರ ಚಿತ್ರ... -
ಶಿಡ್ಲಘಟ್ಟ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕಿಟ್ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಬಿಪಿಎಲ್ ಕುಟುಂಬಗಳಿಗೆ ಅಗತ್ಯ ದಿನಸಿ ವಸ್ತುಗಳನ್ನು ಒದಗಿಸುವ ಉದ್ದೇಶದಿಂದ ಘೋಷಿಸಲಾದ ಈ ಯೋಜನೆ ಹಲವು ತಿಂಗಳು ಕಳೆದರೂ ಜಾರಿಗೆ ಬರದ ಹಿನ್ನೆಲೆ ಸಾರ್ವಜನಿಕ ರಲ್ಲಿ ಪ್ರಶ್ನೆಗಳು ಮೂಡಿದ್ದವು. ಇದೀಗ ಜೂನ್ ತಿಂಗಳಿನಿಂದ ಅಕ್ಕಿ ವಿತರಣೆಯೊಂದಿಗೆ ಇಂದಿರಾ ಕಿಟ್ ವಿತರಣೆಯೂ ಆರಂಭವಾಗಲಿದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ(Food Minister K.H. Muniyappa) ತಿಳಿಸಿದ್ದಾರೆ.
ಸಚಿವರ ಮಾಹಿತಿಯಂತೆ ಕಿಟ್ ವಿತರಣೆಗೆ ಸಂಬಂಧಿಸಿದ ಮರು ಟೆಂಡರ್ ಪ್ರಕ್ರಿಯೆ ಅಂತಿಮ ಹಂತ ದಲ್ಲಿದ್ದು, ಶೀಘ್ರದಲ್ಲೇ ಜಿಲ್ಲೆಗಳಿಗೆ ಸರಬರಾಜು ಆರಂಭವಾಗಲಿದೆ. ಇಂದಿರಾ ಕಿಟ್‌ನಲ್ಲಿ ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ ಹಾಗೂ ಉಪ್ಪು ಸೇರಿರಲಿದ್ದು, ಬಡ ಕುಟುಂಬಗಳಿಗೆ ಇದು ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.
ಕುಟುಂಬದ ಸದಸ್ಯರ ಸಂಖ್ಯೆಯನ್ನು ಆಧರಿಸಿ ಕಿಟ್ ವಿತರಣೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಕಡಿಮೆ ಸದಸ್ಯರಿರುವ ಕುಟುಂಬಗಳಿಗೆ ಕಡಿಮೆ ಪ್ರಮಾಣದಲ್ಲಿ, ಹೆಚ್ಚಿನ ಸದಸ್ಯರಿರುವ ಕುಟುಂಬಗಳಿಗೆ ಹೆಚ್ಚು ಪ್ರಮಾಣದಲ್ಲಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: Shidlaghatta News: ಖಾಸಗಿ ಬೋರ್‌ವೆಲ್ ಮಾಲೀಕರು ನಗರಸಭೆಗೆ ಸಹಕರಿಸಿ : ಸಾರ್ವಜನಿಕರಿಗೆ ನೀರು ಮಿತ ಬಳಕೆಗೆ ಮನವಿ
ರಾಜ್ಯದ ಜಿಲ್ಲೆಗಳನ್ನು ಐದು ವಿಭಾಗಗಳಾಗಿ ವಿಂಗಡಿಸಿ ಪ್ರತಿ ವಿಭಾಗಕ್ಕೆ ಪ್ರತ್ಯೇಕ ಬಣ್ಣದ ಬ್ಯಾಗ್ ವಿತರಿಸುವ ಯೋಜನೆಯೂ ಸಿದ್ಧವಾಗಿದೆ. ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ವಿಭಾಗದ ಜಿಲ್ಲೆಗಳಿಗೆ ತಿಳಿ ನೀಲಿ ಬಣ್ಣದ ಬ್ಯಾಗ್ ವಿತರಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇದ್ರಲ್ಲದೆ, ಯೋಜನೆ ಘೋಷಣೆಯಾಗಿ ಹಲವು ತಿಂಗಳು ಕಳೆದರೂ ವಿತರಣೆ ಆರಂಭವಾಗದಿರು ವುದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ರಾಜಕೀಯ ಪ್ರಭಾವ ಹಾಗೂ ಒಳ ಒಪ್ಪಂದಗಳ ಆರೋಪಗಳು ಕೇಳಿಬರುತ್ತಿದ್ದು, ಸರ್ಕಾರ ಪಾರದರ್ಶಕವಾಗಿ ಯೋಜನೆ ಜಾರಿಗೊಳಿಸಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಒಟ್ಟಾರೆ, ಇಂದಿರಾ ಕಿಟ್ ಯೋಜನೆ ಬಡ ಕುಟುಂಬಗಳಿಗೆ ಸಹಾಯಕವಾಗುವ ನಿರೀಕ್ಷೆ ಮೂಡಿಸಿ ದ್ದರೂ, ಅದು ನೆಲಮಟ್ಟದಲ್ಲಿ ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಜನರು ಕಾದುನೋಡುತ್ತಿದ್ದಾರೆ.