India-Pakistan War: ಒಂದು ಗಂಟೆ ಹಾರಲು ರಫೇಲ್ ಜೆಟ್‌ಗೆ ಎಷ್ಟು ಇಂಧನ ಬೇಕಾಗುತ್ತೆ?
Rafale Jet: ಭಾರತವು ಪಾಕಿಸ್ತಾನದ ಒಳಗಿನ ಭಯೋತ್ಪಾದಕ ಶಿಬಿರಗಳ ಮೇಲೆ ಅತ್ಯಂತ ನಿಖರ ದಾಳಿ ನಡೆಸಿ ಅವುಗಳನ್ನುನಾಶಪಡಿಸಿದೆ. ಈ ಕಾರ್ಯಾಚರಣೆಯ ಹಿಂದಿನ ಶಕ್ತಿಯಾದ ಆಧುನಿಕ ಯುದ್ಧ ತಂತ್ರಜ್ಞಾನದ ಬಗ್ಗೆ ಜನರ ಕುತೂಹಲ ಹೆಚ್ಚಾಗಿದೆ. ಈ ಯಶಸ್ಸಿನ ಕೇಂದ್ರಬಿಂದು ಆಗಿರುವುದು ರಫೇಲ್ ಯುದ್ಧ ವಿಮಾನಗಳು. ಇದರ ಕುರಿತಾದ ವಿವರ ಇಲ್ಲಿದೆ.

ರಫೇಲ್ ಯುದ್ಧ ವಿಮಾನ.

ಹೊಸದಿಲ್ಲಿ: ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ಮತ್ತೊಮ್ಮೆ ಯುದ್ಧದ ಕಾವು ಜೋರಾಗಿದೆ. ಭಾರತ 'ಆಪರೇಷನ್ ಸಿಂಧೂರ್' (Operation Sindhu) ಕಾರ್ಯಾಚರಣೆ ಮೂಲಕ ಪಾಕಿಸ್ತಾನದ ಒಳಗಿನ ಭಯೋತ್ಪಾದಕ ಶಿಬಿರಗಳ (Terrorist Camps) ಮೇಲೆ ಅತ್ಯಂತ ನಿಖರ ದಾಳಿ ನಡೆಸಿ ಅವುಗಳನ್ನುನಾಶಪಡಿಸಿದೆ (India-Pakistan War). ಈ ಕಾರ್ಯಾಚರಣೆಯ ಹಿಂದಿನ ಶಕ್ತಿಯಾದ ಆಧುನಿಕ ಯುದ್ಧ ತಂತ್ರಜ್ಞಾನದ ಬಗ್ಗೆ ಜನರ ಕುತೂಹಲ ಹೆಚ್ಚಾಗಿದೆ. ಈ ಯಶಸ್ಸಿನ ಕೇಂದ್ರಬಿಂದು ಆಗಿರುವುದು ರಫೇಲ್ (Rafale Jet) ಯುದ್ಧ ವಿಮಾನಗಳು.
2020ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ರಫೇಲ್, ಫ್ರಾನ್ಸ್‌ನ MBDA ಸ್ಕಾಲ್ಪ್ ಕ್ರೂಸ್ ಕ್ಷಿಪಣಿಗಳು ಮತ್ತು ಭಾರತದ ಸ್ವದೇಶಿ ಕ್ಷಿಪಣಿಗಳಿಂದ ಸುಸಜ್ಜಿತವಾಗಿದೆ. ಈ ವಿಮಾನವು ಅತ್ಯಾಧುನಿಕ ರಾಡಾರ್ ವ್ಯವಸ್ಥೆಗಳು ಮತ್ತು ಶಸ್ತ್ರಾಸ್ತ್ರಗಳಿಂದ ಕೂಡಿದ್ದು, ವಿಶ್ವದ ಅತ್ಯಂತ ಶಕ್ತಿಶಾಲಿ ಯುದ್ಧವಿಮಾನಗಳಲ್ಲಿ ಒಂದಾಗಿದೆ.
ಈ ಸುದ್ದಿಯನ್ನೂ ಓದಿ: Fact Check: 2-3 ದಿನ ಎಟಿಎಂ ಬಂದ್ ಆಗುತ್ತ? ಇಲ್ಲಿದೆ ವೈರಲ್ ಸುದ್ದಿಯ ಅಸಲಿಯತ್ತು
ರಫೇಲ್‌ನ ವಿಶೇಷತೆಗಳು
ರಫೇಲ್, ಫ್ರೆಂಚ್ ಭಾಷೆಯಲ್ಲಿ 'ಗಾಳಿಯ ರಭಸ’ ಎಂಬ ಅರ್ಥವನ್ನು ಹೊಂದಿದೆ. ಇದನ್ನು ಎರಡು M88-2 ಎಂಜಿನ್‌ಗಳು ಚಾಲನೆ ಮಾಡುತ್ತವೆ, ಪ್ರತಿಯೊಂದೂ 16,850 ಪೌಂಡ್-ಫೋರ್ಸ್ ತಾಕತ್ತು ಉತ್ಪಾದಿಸುತ್ತದೆ. ಈ ವಿಮಾನವು ಗಂಟೆಗೆ 2,222 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲದು.
ಪ್ರಮುಖ ವಿವರಗಳು
ಗರಿಷ್ಠ ವೇಗ: ಗಂಟೆಗೆ 2,222 ಕಿ.ಮೀ .
ಪ್ರಯಾಣ ವ್ಯಾಪ್ತಿ: 3,700 ಕಿ.ಮೀ
ಲ್ಯಾಂಡಿಂಗ್ ರನ್: 450 ಮೀಟರ್
ರೆಕ್ಕೆಯ ವಿಸ್ತಾರ: 10.9 ಮೀಟರ್
ಉದ್ದ: 15.3 ಮೀಟರ್
ಎತ್ತರ: 5.3 ಮೀಟರ್
ಖಾಲಿ ತೂಕ: 10 ಟನ್
ಗರಿಷ್ಠ ಟೇಕ್-ಆಫ್ ತೂಕ: 24.5 ಟನ್
ಬಾಹ್ಯ ಲೋಡ್ ಸಾಮರ್ಥ್ಯ: 9.5 ಟನ್
ಇಂಧನ ಸಾಮರ್ಥ್ಯ: 11.4 ಟನ್
ಗರಿಷ್ಠ ಎತ್ತರ: 50,000 ಅಡಿ
ಇಂಧನ ಬಳಕೆ
ಕ್ರೂಸಿಂಗ್ ಸಂದರ್ಭದಲ್ಲಿ ರಫೇಲ್ ಗಂಟೆಗೆ 2,500 ಲೀಟರ್ ಇಂಧನವನ್ನು ಬಳಸುತ್ತದೆ. ಆದರೆ ತೀವ್ರ ಚಾಲನೆ ಅಥವಾ ಆಫ್ಟರ್‌ಬರ್ನರ್ ಬಳಕೆಯಲ್ಲಿ ಇದು ಗಂಟೆಗೆ 9,000 ಲೀಟರ್‌ವರೆಗೂ ಹೆಚ್ಚಾಗಬಹುದು. ಫ್ರಾನ್ಸ್‌ನ ಡಸ್ಸಾಲ್ಟ್ ಏವಿಯೇಷನ್ ತಯಾರಿಸಿದ ರಫೇಲ್, ಇರಾಕ್, ಸಿರಿಯಾ, ಆಫ್ಘಾನಿಸ್ತಾನ, ಮಾಲಿ, ಲಿಬಿಯಾದಂತಹ ಯುದ್ಧಭೂಮಿಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಮೂರು ಡ್ರಾಪ್ ಟ್ಯಾಂಕ್‌ಗಳೊಂದಿಗೆ ರಫೇಲ್ 3,700 ಕಿ.ಮೀ. ದೂರದವರೆಗೆ ಪ್ರಯಾಣಿಸಬಲ್ಲದು. ಈ ವಿಮಾನವು ಭಾರತದ ಸೇನಾ ಕಾರ್ಯತಂತ್ರದಲ್ಲಿ ಪ್ರಮುಖ ಆಸ್ತಿಯಾಗಿದೆ.