IAF: ಹೊಸ ವಿಡಿಯೊ ರಿಲೀಸ್ ಮಾಡಿ ಸೇನೆಯ ಸಾಮರ್ಥ್ಯ ಅನಾವರಣಗೊಳಿಸಿದ ಭಾರತೀಯ ವಾಯುಪಡೆ
ಭಾರತೀಯ ವಾಯುಪಡೆ ಭಾರತದ ಸಶಸ್ತ್ರ ಪಡೆಗಳ ಶೌರ್ಯ, ಪರಾಕ್ರಮವನ್ನು ಬಿಂಬಿಸುವ ಹೊಸ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಆ ಮೂಲಕ ʼʼಪಾಕಿಸ್ತಾನದ ಮೇಲಿನ ದಾಳಿಯಲ್ಲಿ ಭಾರತದ ಎಷ್ಟು ಯುದ್ಧ ವಿಮಾನಗಳಿಗೆ ಹಾನಿಯಾಗಿದೆ?ʼʼ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್ ರಾಹುಲ್ ಗಾಂಧಿ ಅವರಿಗೆ ಭರ್ಜರಿಯಾಗಿ ತಿರುಗೇಟು ನೀಡಿದೆ.


ಹೊಸದಿಲ್ಲಿ: ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಹೊಡೆದುರುಳಿಸಿ, ಅವರ ನೆಲೆಯನ್ನು ನಾಶಗೊಳಿಸಿ ಯಶಸ್ಸು ಸಾಧಿಸಿ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯ ಬಗ್ಗೆ ಹಲವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಜತೆಗೆ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿದ ಭಾರತೀಯ ಸೇನೆಯ ಪರಾಕ್ರಮಕ್ಕೆ ಹೆಮ್ಮೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ನಾಯಕರು ಆಪರೇಷನ್ ಸಿಂದೂರ್ ಬಗ್ಗೆ ಸಂಶಯವನ್ನು ವ್ಯಕ್ತಪಡಿ ಕೀಳು ರಾಜಕೀಯವನ್ನು ಮುಂದುವರಿಸಿದ್ದಾರೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಂತೆ ಭಾರತೀಯ ವಾಯುಪಡೆ (IAF) ಭಾರತದ ಸಶಸ್ತ್ರ ಪಡೆಗಳ ಶೌರ್ಯ, ಪರಾಕ್ರಮವನ್ನು ಬಿಂಬಿಸುವ ಹೊಸ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಆ ಮೂಲಕ ʼʼಪಾಕಿಸ್ತಾನದ ಮೇಲಿನ ದಾಳಿಯಲ್ಲಿ ಭಾರತದ ಎಷ್ಟು ಯುದ್ಧ ವಿಮಾನಗಳಿಗೆ ಹಾನಿಯಾಗಿದೆ?ʼʼ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್ ರಾಹುಲ್ ಗಾಂಧಿ ಅವರಿಗೆ ಭರ್ಜರಿಯಾಗಿ ತಿರುಗೇಟು ನೀಡಿದೆ.
ಐಎಎಫ್‌ನ ವಿಡಿಯೊ ಬಿಡುಗಡೆಯ ಹಿಂದೆ ಹಲವು ಕಾರಣಗಳಿವೆ. ಇದು ಭಾರತೀಯ ಸೇನೆಯು ವಿಶೇಷವಾಗಿ ಫ್ರಾನ್ಸ್‌ನಿಂದ ತರಿಸಿಕೊಂಡ ರಫೇಲ್ ಜೆಟ್‌ಗಳ ಪರಾಕ್ರಮವನ್ನು ಎತ್ತಿ ತೋರಿಸುತ್ತದೆ. ಈ ಜೆಟ್‌ಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಭಾರತದ ರಕ್ಷಣಾ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ಎನಿಸಿಕೊಂಡಿವೆ. ವಿಶೇಷವಾಗಿ ಪ್ರಾದೇಶಿಕ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ ಐಎಎಫ್‌ನ ಕಾರ್ಯಾಚರಣೆಯ ಸಿದ್ಧತೆ ಮತ್ತು ಪರಿಣಾಮಕಾರಿತ್ವವನ್ನು ಪ್ರದರ್ಶಿಸುವ ಗುರಿಯನ್ನು ಈ ವಿಡಿಯೊ ಹೊಂದಿದೆ. ಜತೆಗೆ ಚೀನಾ-ಪಾಕಿಸ್ತಾನ ನಿರ್ಮಿತ ಜೆಎಫ್-17 ಫೈಟರ್ ಜೆಟ್ ಅನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ. ಈ ವಿಚಾರವನ್ನೂ ತಿಳಿಸಲಾಗಿದೆ.
ಭಾರತೀಯ ವಾಯುಪಡೆ ಹಂಚಿಕೊಂಡ ವಿಡಿಯೊ:
#IndianAirForce@PMOIndia@rajnathsingh@DefenceMinIndia@SpokespersonMoD @HQ_IDS_India @adgpi @indiannavy@IndiannavyMedia @PIB_India @MIB_India pic.twitter.com/xXnycOOXva
— Indian Air Force (@IAF_MCC) May 20, 2025
ಈ ಸುದ್ದಿಯನ್ನೂ ಓದಿ: all-party delegation: ಆಪರೇಷನ್ ಸಿಂದೂರ್ ನಿಯೋಗದಲ್ಲಿ ಟಿಎಂಸಿಯಿಂದ ಅಭಿಷೇಕ್ ಬ್ಯಾನರ್ಜಿ ಆಯ್ಕೆ
ಈಗಾಗಲೇ ಪಾಕಿಸ್ತಾನ ಖರೀದಿಸಿದ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳು ವಿಫಲವಾಗಿ ಟೀಕೆಗೆ ಗುರಿಯಾಗಿದೆ. ಈ ವಿಚಾರವನ್ನು ಪ್ರಸ್ತಾವಿಸಲಾಗಿದೆ. ಜತೆಗೆ ರಫೇಲ್ ಜೆಟ್‌ಗಳು ಜೆಎಫ್-17ಗಿಂತ ಉತ್ತಮವಾಗಿವೆ ಎನ್ನುವುದನ್ನು ತಿಳಿಸಲಾಗಿದೆ. ಈ ಪ್ರದೇಶದಲ್ಲಿನ ಭಾರತದ ಮಿಲಿಟರಿ ಶ್ರೇಷ್ಠತೆಯನ್ನು ವಿವರಿಸಲಾಗಿದೆ. ಈ ವಿಡಿಯೊ ಮಿಲಿಟರಿ ಸಾಮರ್ಥ್ಯಗಳ ಪ್ರಾಬಲ್ಯ ಮತ್ತು ಪ್ರಭಾವವನ್ನು ಪ್ರತಿಪಾದಿಸಲಾಗುತ್ತದೆ. ಜತೆಗೆ ಮಹಿಳಾ ಅಧಿಕಾರಿಗಳ ಕೊಡುಗೆಯನ್ನೂ ಪ್ರಸ್ತಾವಿಸುತ್ತದೆ. ಪರ್ವತಗಳ ಮೇಲೆ ಘರ್ಜಿಸುತ್ತಿರುವ ರಫೇಲ್, ಸು -30 ಎಂಕೆಐ ಮತ್ತು ತೇಜಸ್‌ನಂತಹ ಮುಂಚೂಣಿಯ ವಿಮಾನಗಳ ವಿವರಗಳನ್ನೂ ಇದು ಒಳಗೊಂಡಿದೆ.
ʼಆರಂಭ್ ಹೈ ಪ್ರಚಂಡ್ʼ ಎಂಬ ಗೀತೆಯೊಂದಿಗೆ ಈ ವಿಡಿಯೊ ಸಾಗುತ್ತದೆ. ಈ ವಿಡಿಯೊ ಫೈಟರ್ ಜೆಟ್‌ಗಳು, ನಿಖರವಾದ ದಾಳಿ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತದೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು, ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ.
ಭಾರತದಲ್ಲಿನ ಮಿಲಿಟರಿ ಸಾಮರ್ಥ್ಯಗಳು, ರಾಜಕೀಯ ಪೈಪೋಟಿ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಈ ವಿಡಿಯೊ ಚರ್ಚೆ ಆರಂಭವಾಗಿದೆ. ಹಲವರು ಈ ವಿಡಿಯೊವನ್ನು ಹಂಚಿಕೊಂಡು ರಾಹುಲ್ ಗಾಂಧಿ ಇದನ್ನು ನೋಡದೇ ಇರುವುದು ಉತ್ತಮ ಎಂದೆಲ್ಲ ಕಾಲೆಳೆದಿದ್ದಾರೆ. ಈ ವಿಡಿಯೊ ವೀಕ್ಷಿಸಿದ ಕೆಲವರು ಭಾರತೀಯ ಸೇನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಹಲವರ ದೇಶಭಕ್ತಿ ಭಾವನೆಯನ್ನು ಬಡಿದೆಬ್ಬಿಸಲು ನೆರವಾಗಿದೆ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.