Viral News: ಅಪ್ಪನ 62 ವರ್ಷದ ಹಳೆಯ ಬ್ಯಾಂಕ್ ಪಾಸ್‌ಬುಕ್ ಸಿಕ್ತು... ರಾತ್ರೋರಾತ್ರಿ ಮಗ ಕೋಟ್ಯಧಿಪತಿ!
Hidden Fortune Revealed: ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಕಸ ಎಂದು ಎಸೆಯುವ ಅಭ್ಯಾಸ ನಿಮಗಿದೆಯಾ? ಹಾಗಿದ್ದರೆ ಈ ಸ್ಟೋರಿ ಓದಲೇಬೇಕು. ಹಳೆಯ ಕಾಗದಗಳನ್ನು ಕಸ ಎಂದು ಎಸೆಯದೆ ಹಾಗೆಯೇ ಇಟ್ಟರೆ ಮುಂದೊಂದು ದಿನ ನಿಮ್ಮ ಲಕ್ ಬದಲಾಗಬಹುದು. ಚಿಲಿಯಲ್ಲಿ ವಾಸಿಸುತ್ತಿರುವ ಎಕ್ಸೆಸೈಲ್ ಹಿನೊಹೊಸಾ ಎಂಬ ವ್ಯಕ್ತಿಗೆ ಇದೇ ಘಟನೆ ಸಂಭವಿಸಿದೆ. ಮೃತ ತಂದೆಯ 62 ವರ್ಷದ ಹಿಂದಿನ ಬ್ಯಾಕ್ ಪಾಸ್‍ಬುಕ್ ಅವರ ಜೀವನವನ್ನೇ ಬದಲಾಯಿಸಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಈ ಆಕಸ್ಮಿಕವಾಗಿ ಸಿಕ್ಕ ಬ್ಯಾಂಕ್ ಪಾಸ್‍ಬುಕ್ ಅವರಿಗೆ ಅನಿರೀಕ್ಷಿತ ಭಾಗ್ಯವನ್ನು ತಂದುಕೊಟ್ಟಿತು.
-
Priyanka P
Nov 1, 2025 3:37 PM
ಸ್ಯಾಂಟಿಯಾಗೋ: ಮನೆಯಲ್ಲಿ ಕಸವೆಂದು ಕಂಡುಬರುವ ಹಳೆಯ ವಸ್ತುಗಳು ಕೆಲವೊಮ್ಮೆ ವ್ಯಕ್ತಿಯ ಜೀವನದ ಭಾಗ್ಯವನ್ನೇ ಬದಲಾಯಿಸಬಹುದು. ಚಿಲಿಯಲ್ಲಿ (Chile) ವಾಸಿಸುತ್ತಿರುವ ಎಕ್ಸೆಸೈಲ್ ಹಿನೊಹೊಸಾ ಎಂಬ ವ್ಯಕ್ತಿಗೆ ಅಂಥದ್ದೇ ಒಂದು ಘಟನೆ ಸಂಭವಿಸಿತು. ಸಾಮಾನ್ಯವಾಗಿ ಮನೆಯಲ್ಲಿ ಕಾಗದಗಳು ಅಥವಾ ಕಾಗದದ ತುಂಡುಗಳು ಎಲ್ಲೆಂದರಲ್ಲಿ ಚದುರಿರುತ್ತದೆ. ಮೇಜಿನ ಮೇಲೆ, ಹಾಸಿಗೆಯ ಕೆಳಗೆ ಅಥವಾ ಸೋಫಾದ ಕೆಳಭಾಗದಲ್ಲೂ ಕಾಣಬಹುದು ಚದುರಿರುವ ಕಾಗದದ ತುಂಡುಗಳನ್ನು ಕಾಣಬಹುದು. ಆದರೆ, ಇಂತಹ ಸಣ್ಣ ಕಾಗದದ ತುಂಡುಗಳು ಕೆಲವೊಮ್ಮೆ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವ ಶಕ್ತಿ ಹೊಂದಿರುತ್ತವೆ (Viral News).
ಹಿನೊಹೊಸಾ ಅವರು ಆಕಸ್ಮಿಕವಾಗಿ ಡಸ್ಟ್‌ಬಿನ್‍ನಲ್ಲಿ ತಮ್ಮ ತಂದೆಯ ಹಳೆಯ ಬ್ಯಾಂಕ್ ಪಾಸ್‌ಬುಕ್‌ನ್ನು ಕಂಡುಹಿಡಿದರು. ತಂದೆಯು ಅದಾಗಲೇ ನಿಧನ ಹೊಂದಿದ್ದರು. ಇದು ಅವರ ಜೀವನವನ್ನು ಸಂಪೂರ್ಣವಾಗಿ ಬದಲಿಸಿತು. ಅದೇ ಅವರಿಗೆ ಕೋಟ್ಯಾದಿಪತಿಯಾಗುವುದಕ್ಕೆ ಕಾರಣವಾಯಿತು. ಅಚ್ಚರಿಯೆನಿಸಿದರೂ ಇದು ಸತ್ಯ.
ತಮ್ಮ ಮನೆಯಲ್ಲಿ ಕಸವನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ, ಹಿನೊಹೊಸಾ ಅವರು ಹಲವು ದಶಕಗಳ ಹಳೆಯ ಬ್ಯಾಂಕ್ ಪಾಸ್‌ಬುಕ್‌ನ್ನು ಪತ್ತೆಹಚ್ಚಿದರು. ಈ ಆಕಸ್ಮಿಕವಾಗಿ ಸಿಕ್ಕ ಬ್ಯಾಂಕ್ ಪಾಸ್‍ಬುಕ್ ಅವರಿಗೆ ಅನಿರೀಕ್ಷಿತ ಭಾಗ್ಯವನ್ನು ತಂದುಕೊಟ್ಟಿತು. 62 ವರ್ಷದ ಹಿಂದಿನ ಆ ಪಾಸ್‌ಬುಕ್‌ನಲ್ಲಿ ಇಂದಿನ ಮೌಲ್ಯದಲ್ಲಿ ಕೋಟ್ಯಂತರ ರೂಪಾಯಿಗಳಿಗೆ ಸಮಾನವಾದ ಠೇವಣಿ ಮೊತ್ತ ಜಮೆಯಾಗಿತ್ತು. ಅವರ ತಂದೆ 1960 ಮತ್ತು 1970ರ ದಶಕಗಳಲ್ಲಿ ಸುಮಾರು ರೂ. 1.40 ಲಕ್ಷವನ್ನು ಸಂಗ್ರಹಿಸಿದ್ದರು. ಭವಿಷ್ಯದಲ್ಲಿ ಒಂದು ಮನೆ ಖರೀದಿಸುವ ಕನಸಿನಿಂದ ಅವರು ಹಣ ಸಂಗ್ರಹಿಸಿದ್ದರು.
ಇದನ್ನೂ ಓದಿ: Viral News: ಟೋಕಿಯೊದಲ್ಲಿ ವಿಚಿತ್ರವಾಗಿ ವರ್ತಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಆದರೀಗ ಅದು ದೊಡ್ಡ ಮೊತ್ತವಾಗಿತ್ತು. ಹಿನೊಹೊಸಾ ಅವರ ತಂದೆ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಕುಟುಂಬದ ಯಾರಿಗೂ ಆ ಬ್ಯಾಂಕ್ ಖಾತೆಯ ಬಗ್ಗೆ ಗೊತ್ತಿರಲಿಲ್ಲ. ಆರಂಭದಲ್ಲಿ, ಬ್ಯಾಂಕ್ ಈಗಾಗಲೇ ಮುಚ್ಚಿ ಹೋಗಿರುವುದರಿಂದ, ಹಿನೊಹೊಸಾ ಅವರು ಪಾಸ್‌ಬುಕ್ ಅನ್ನು ಪ್ರಮುಖವೆಂದು ಭಾವಿಸಿರಲಿಲ್ಲ. ಆದರೂ, ಪಾಸ್‌ಬುಕ್‌ನಲ್ಲಿನ ಒಂದೇ ಸಾಲು ಹಿನೊಹೊಸಾ ಅವರ ಭಾಗ್ಯವನ್ನು ಬದಲಿಸಿತು.
ಇದನ್ನೂ ಓದಿ: Bangladesh National Anthem: ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ರಾಷ್ಟ್ರಗೀತೆ: ಬಿಜೆಪಿಯಿಂದ ತರಾಟೆ
ಪಾಸ್‌ಬುಕ್‌ನಲ್ಲಿ ‘ಸ್ಟೇಟ್ ಗ್ಯಾರಂಟಿ’ ಎಂಬ ಪದವು ಅವರ ಗಮನ ಸೆಳೆಯಿತು. ಬ್ಯಾಂಕ್ ದಿವಾಳಿಯಾಗುವ ಸಂದರ್ಭದಲ್ಲಿಯೂ ಸರ್ಕಾರ ಹಣವನ್ನು ಮರುಪಾವತಿ ಮಾಡುವ ಹೊಣೆಗಾರಿಕೆಯನ್ನು ತೆಗೆದುಕೊಂಡಿದೆ ಎಂಬುದು ಇದರಿಂದ ಅರ್ಥವಾಗಿದೆ. ಈ ವಿಷಯವನ್ನು ಅರಿತಾಗ ಹಿನೊಹೊಸಾ ಅತ್ಯಂತ ಸಂತೋಷಗೊಂಡರು.
ಹೀಗಾಗಿ ವಾದಿಸಿದ ಹಿನೊಹೊಸಾ ಅವರ, ಹಣವನ್ನು ತಮ್ಮ ತಂದೆ ಅತ್ಯಂತ ಶ್ರಮಪಟ್ಟು ಸಂಪಾದಿಸಿದ್ದರು. ಬ್ಯಾಂಕ್ ನಷ್ಟವಾದರೂ ಸರ್ಕಾರ ಅದಕ್ಕಾಗಿ ಹೊಣೆಗಾರರಾಗಿದೆ. ಆದ್ದರಿಂದ ಆ ಹಣವನ್ನು ನ್ಯಾಯಯುತ ವಾರಸುದಾರರಿಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂಬಂಧ ಕೋರ್ಟ್ ಮೆಟ್ಟಿಲೇರಿದರು. ನಂತರ ನ್ಯಾಯಾಲಯವು ಆ ಹಣವನ್ನು ಬಡ್ಡಿಯೊಂದಿಗೆ ನೀಡುವಂತೆ ಆದೇಶಿಸಿತು. ಹೀಗಾಗಿ 9 ಕೋಟಿ ರೂ. ಹಣ ಹಿನೊಹೊಸಾ ಅವರಿಗೆ ಸಿಕ್ಕಿದೆ. ಇದರಿಂದ ಅವರ ಲಕ್ ಬದಲಾಗಿದೆ. ತಂದೆ ಕಷ್ಟಪಟ್ಟು ಕೂಡಿಟ್ಟ ದುಡ್ಡು ಎಷ್ಟೋ ವರ್ಷಗಳ ಬಳಿಕ ಮಗನ ಪಾಲಾಗಿದೆ.