ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆಯಲ್ಲಿ ಸಮಾನ ಹಕ್ಕುಗಳಿಗೆ ಭಾರತ ಆಗ್ರಹ
ಚೀನಾ, ಫ್ರಾನ್ಸ್, ರಷ್ಯಾ, ಯುಕೆ, ಯುಎಸ್ ಸೇರಿದಂತೆ 15 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯಲ್ಲಿ ಸಮಾನ ವೀಟೋ ಹಕ್ಕುಗಳಿಗಾಗಿ ಭಾರತ ಆಗ್ರಹಿಸಿದೆ. ಸದ್ಯ ಖಾಯಂ ಐದು ರಾಷ್ಟ್ರಗಳಲ್ಲಿ ವೀಟೋ ಅಧಿಕಾರವಿದ್ದು, ಇದರಿಂದ ನಿರ್ಧಾರ ತೆಗೆದುಕೊಳ್ಳುವ ನಿಯಂತ್ರಣ ಕೇವಲ ಆ ಐದು ರಾಷ್ಟ್ರಗಳಿಗೆ ಸಿಗುತ್ತದೆ ಎಂದು ಭಾರತ ಹೇಳಿದೆ.
ಸಂಗ್ರಹ ಚಿತ್ರ -
ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UN Security Council) ಸುಧಾರಣೆಯಲ್ಲಿ ಸಮಾನ ಹಕ್ಕುಗಳು (Equal Veto Right) ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಸಿಗಬೇಕು ಎಂದು ಭಾರತ (india) ಆಗ್ರಹಿಸಿದೆ. ಸಮಾನ ವೀಟೋ ಅಧಿಕಾರವಿಲ್ಲದ ಹೊಸ ವರ್ಗದ ಖಾಯಂ ಸದಸ್ಯರನ್ನು (second-class status) ಮಾಡುವುದರಿಂದ ಅಂತಹ ಸದಸ್ಯ ರಾಷ್ಟ್ರಗಳನ್ನು ದ್ವಿತೀಯ ದರ್ಜೆ ಸ್ಥಾನಮಾನಕ್ಕೆ ತಳ್ಳಿದಂತಾಗುತ್ತದೆ. ಇದರಿಂದ ಭದ್ರತಾ ಮಂಡಳಿ ಸುಧಾರಣೆಯ ಕುರಿತು ನಿರ್ಧಾರ ಕೈಗೊಳ್ಳುವ ನಿಯಂತ್ರಣ ಈಗಿರುವ ಐದು ಖಾಯಂ ಸದಸ್ಯ ರಾಷ್ಟ್ರಗಳಿಗೆ (five nations permanent power) ದೊರೆತಂತಾಗುತ್ತದೆ ಎಂದು ಭಾರತ ಪ್ರತಿಪಾದಿಸಿದೆ.
ಚೀನಾ, ಫ್ರಾನ್ಸ್, ರಷ್ಯಾ, ಯುಕೆ, ಯುಎಸ್ ಸೇರಿದಂತೆ ಒಟ್ಟು 15 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವೀಟೋ ಅಧಿಕಾರ ಸದ್ಯ ಕೇವಲ ಖಾಯಂ ಐದು ರಾಷ್ಟ್ರಗಳಲ್ಲಿ ಇದೆ. ಹೀಗಾಗಿ ಈ ಐದು ರಾಷ್ಟ್ರಗಳು ಮಾತ್ರ ಈ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲು ಸಾಧ್ಯವಿದೆ ಎಂದು ಭಾರತ ಹೇಳಿದೆ.
ಮುಂಬೈ ನಾಡಿಮಿಡಿತ ಲೋಕಲ್ ರೈಲು ಸಂಚಾರದಲ್ಲಿ ವ್ಯತ್ಯಯ; ಹಳಿಯಲ್ಲಿ ನಡೆಯುತ್ತಿದ್ದ ಮೂವರ ಸಾವು
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್ 15 ಸದಸ್ಯ ರಾಷ್ಟ್ರಗಳ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳಾಗಿವೆ. ಇವುಗಳೊಂದಿಗೆ ಮಂಡಳಿಯಲ್ಲಿ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುವ 10 ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳು ಇವೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೋಮವಾರ ಈ ಕುರಿತು ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಹರೀಶ್ ಪರ್ವತನೇನಿ, ವೀಟೋ ಅಧಿಕಾರವು ಮಂಡಳಿಯ ಎಲ್ಲಾ ಖಾಯಂ ಸದಸ್ಯ ರಾಷ್ಟ್ರಗಳಿಗೂ ಸಿಗಬೇಕು. ನ್ಯಾಯ ಮತ್ತು ಸಮಾನತೆಯ ದೃಷ್ಟಿಯಿಂದ ಎಲ್ಲಾ ಖಾಯಂ ಸದಸ್ಯ ರಾಷ್ಟ್ರಗಳಿಗೆ ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳು ಇರಬೇಕು. ಈ ನಿಟ್ಟಿನಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ. ಅದು ಎಲ್ಲರಿಗೂ ತಿಳಿದಿದೆ ಎಂದು ಅವರು ತಿಳಿಸಿದರು.
ವೀಟೋ ಅಧಿಕಾರವಿಲ್ಲದೆ ಭದ್ರತಾ ಮಂಡಳಿಯಲ್ಲಿ ಸದಸ್ಯರನ್ನು ಕೂರಿಸುವುದರಿಂದ ಅವರನ್ನು ದ್ವಿತೀಯ ದರ್ಜೆಯವರನ್ನಾಗಿ ಮಾಡಿದಂತಾಗುತ್ತದೆ. ಅಲ್ಲದೇ ಇದರಿಂದ ಸಂಪೂರ್ಣ ಅಧಿಕಾರ ಐದು ಖಾಯಂ ಸದಸ್ಯ ರಾಷ್ಟ್ರಗಳ ಬಳಿಯೇ ಉಳಿದಂತಾಗುತ್ತದೆ. ಇದರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಭಾರತವು ನಿರಂತರವಾಗಿ ಖಾಯಂ ಮತ್ತು ಖಾಯಂ ಅಲ್ಲದ ಸದಸ್ಯತ್ವವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸುತ್ತಿದ್ದು, ಸುಧಾರಣಾ ಪ್ರಯತ್ನಗಳಲ್ಲಿ ಕೇವಲ ಖಾಯಂ ಅಲ್ಲದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಕಡೆಗೆ ಮಾತ್ರ ಗಮನಹರಿಸಿದರೆ ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅವರು ಎಚ್ಚರಿಸಿದರು.
ವಿಶ್ವ ಸಂಸ್ಥೆ ಭದ್ರತಾ ಮಂಡಳಿಯು 1945ರಲ್ಲಿ ಸ್ಥಾಪನೆಯಾಗಿದ್ದು, ಇಂದು ಇಂದಿನ ಭೌಗೋಳಿಕ-ರಾಜಕೀಯ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ. ಹೀಗಾಗಿ ಈ ಮಂಡಳಿಯಲ್ಲಿ ಸುಧಾರಣೆ ತರಲು ನಡೆಯುತ್ತಿರುವ ದೀರ್ಘಕಾಲದ ಪ್ರಯತ್ನಗಳಲ್ಲಿ ನವದೆಹಲಿ ಕೂಡ ಮುಂಚೂಣಿಯಲ್ಲಿ ನಿಲ್ಲುವ ಪ್ರಯತ್ನ ಮಾಡುತ್ತಿದೆ. ಖಾಯಂ ಸ್ಥಾನಕ್ಕಾಗಿ ಪ್ರತಿಪಾದಿಸುತ್ತಿದೆ.
ರಾಹುಲ್ ಗಾಂಧಿ ಸಹವಾಸದಿಂದ ಮಲ್ಲಿಕಾರ್ಜುನ ಖರ್ಗೆಯೂ ಅಪ್ರಬುದ್ಧರಾಗಿದ್ದಾರೆ: ಪ್ರಲ್ಹಾದ್ ಜೋಶಿ ಕಿಡಿ
2028-29ರ ಅವಧಿಯ ಖಾಯಂ ಅಲ್ಲದ ಸದಸ್ಯ ಸ್ಥಾನಗಳಿಗೆ ಮುಂದಿನ ವರ್ಷದ ಜೂನ್ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಏಷ್ಯಾ-ಪೆಸಿಫಿಕ್ ಗುಂಪಿಗೆ ಮೀಸಲಾದ ಏಕೈಕ ಸ್ಥಾನಕ್ಕಾಗಿ ಭಾರತ ಮತ್ತು ತಜಕಿಸ್ತಾನ ಕಣದಲ್ಲಿದೆ. ಸದ್ಯ ಭಾರತವು ಎಂಟನೇ ಬಾರಿಗೆ ಈ ಸ್ಥಾನದಲ್ಲಿದ್ದು, ಮುಂದಿನ ಚುನಾವಣೆಯಲ್ಲಿ ಆಯ್ಕೆಯಾದರೆ ಅದು ಒಂಬತ್ತನೇ ಬಾರಿಗೆ ಅಧಿಕಾರ ಪಡೆದಂತಾಗುತ್ತದೆ.