ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆಯೂ ಶೇಕಡಾ 7.7 ಬೆಳವಣಿಗೆ ದರ ಕಾಯ್ದುಕೊಂಡ ಭಾರತʼʼ: ಪ್ರಧಾನಿ ನರೇಂದ್ರ ಮೋದಿ ಹರ್ಷ

India Maintains 7.7 % Growth: ಪಶ್ಚಿಮ ಏಷ್ಯಾ ಯುದ್ಧವು ಭಾರತದಂತಹ ರಾಷ್ಟ್ರಗಳಿಗೆ ದೊಡ್ಡ ಬಿಕ್ಕಟ್ಟನ್ನು ತಂದಿತ್ತಿದೆ. ಈ ಸಂಕಷ್ಟದ ನಡುವೆಯೂ ಭಾರತವು ಶೇ. 7.7ರಷ್ಟು ಆರ್ಥಿಕ ಬೆಳವಣಿಗೆ ದರವನ್ನು ಕಾಯ್ದುಕೊಂಡಿದ್ದು, ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಶೇ. 7.7 ಬೆಳವಣಿಗೆ ದರ ಕಾಯ್ದುಕೊಂಡ ಭಾರತ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -

Priyanka P
Priyanka P Jul 20, 2026 4:31 PM

ನವದೆಹಲಿ, ಜು. 20: ಮಧ್ಯಪ್ರಾಚ್ಯ ಬಿಕ್ಕಟ್ಟಿನ (Middle east crisis) ಹೊರತಾಗಿಯೂ ಭಾರತವು ಶೇಕಡಾ 7.7 ಬೆಳವಣಿಗೆ ದರವನ್ನು ಕಾಯ್ದುಕೊಳ್ಳುವುದು ಭಾರತದ ಅಂತರ್ಗತ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಈ ಸಾಧನೆಯು ಹೊಸ ಮೈಲಿಗಲ್ಲುಗಳನ್ನು ತಲುಪುವ ಭಾರತದ ಉತ್ಸಾಹ, ಸಂಕಲ್ಪ ಮತ್ತು ಚೈತನ್ಯವನ್ನು ಪ್ರತಿಫಲಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

ಸಂಸತ್ತಿನ ಮಳೆಗಾಲದ ಅಧಿವೇಶನದ ಆರಂಭದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ವಿವಿಧ ಪ್ರದೇಶಗಳಲ್ಲಿ ಯುದ್ಧದ ಬೆದರಿಕೆಯ ಬಗ್ಗೆ ಎಲ್ಲರಿಗೂ ತಿಳಿದಿದ್ದು, ಜಗತ್ತು ಕಳವಳ ವ್ಯಕ್ತಪಡಿಸಿದೆ. ಮಧ್ಯಪ್ರಾಚ್ಯದಲ್ಲಿನ ಯುದ್ಧವು ಭಾರತದಂತಹ ರಾಷ್ಟ್ರಗಳಿಗೆ ದೊಡ್ಡ ಬಿಕ್ಕಟ್ಟನ್ನು ತಂದಿದೆ. ಅದು ತನ್ನ ಇಂಧನ ಅಗತ್ಯಗಳಾದ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ರಸಗೊಬ್ಬರಗಳು ಮತ್ತು ರಾಸಾಯನಿಕಗಳಿಗಾಗಿ ಬೇರೆ ದೇಶವನ್ನು ಅವಲಂಬಿಸಿದೆ. ಈ ಸಂಕಷ್ಟದ ನಡುವೆಯೂ ಭಾರತವು ಶೇಕಡಾ 7.7ರಷ್ಟು ಆರ್ಥಿಕ ಬೆಳವಣಿಗೆ ದರವನ್ನು ಕಾಯ್ದುಕೊಂಡಿದ್ದು, ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ಹೋಟೆಲ್‌ಗೆ ನುಗ್ಗಿದ ಪ್ರತಿಭಟನಾಕಾರ

ಈ ಮಧ್ಯೆ ಮಳೆಗಾಲದ ಅಧಿವೇಶನ ಪ್ರಾರಂಭವಾಗುತ್ತಿದೆ. ದೇಶವು ವೇಗವನ್ನು ಪಡೆದುಕೊಂಡಿದೆ. ಸಂಸತ್ತಿನ ಉತ್ಸಾಹವು ಆ ವೇಗಕ್ಕೆ ಹೊಸ ಶಕ್ತಿಯನ್ನು ತುಂಬುತ್ತದೆ. ದೇಶದ ಗುರಿಯನ್ನು ಸಾಧಿಸಲು ಸಕಾರಾತ್ಮಕ ಮನೋಭಾವವು ಬಹಳ ಅವಶ್ಯ. ನಮ್ಮ ಸಂಸತ್ತು ಪಕ್ಷದ ಹೊರತಾಗಿ ಅನೇಕ ಅನುಭವಿ ಸಂಸದರನ್ನು ಹೊಂದಿದೆ. ಇಂತಹ ಸಮಯದಲ್ಲಿ, ಸಂಸತ್ತು ಮತ್ತು ರಾಷ್ಟ್ರ ಎರಡಕ್ಕೂ ಅವರ ಅನುಭವ ಮತ್ತು ಜ್ಞಾನದ ಅಗತ್ಯವಿದೆ. ಆದ್ದರಿಂದ, ಸಂಸತ್ತಿನ ಕಾರ್ಯನಿರ್ವಹಣೆ, ಅರ್ಥಪೂರ್ಣ ಚರ್ಚೆಗಳು ಮತ್ತು ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಸಂಕಲ್ಪವು ಅಗತ್ಯ ಎಂದು ಅವರು ತಿಳಿಸಿದ್ದಾರೆ.

ಇಂದಿನ ಅಗತ್ಯವೆಂದರೆ ದೇಶಭಕ್ತಿ ಹಾಗೂ ದೇಶಸೇವೆಯ ಮನೋಭಾವದಿಂದ ಕಾರ್ಯನಿರ್ವಹಿಸುವವರ ಧ್ವನಿಗೆ ಸಂಸತ್ತಿನಲ್ಲಿ ಸೂಕ್ತ ವೇದಿಕೆ ದೊರೆಯಬೇಕು. ಅವರು ದೇಶಕ್ಕೆ ದಿಕ್ಕು ತೋರಿಸುವ ವಿಚಾರಗಳನ್ನು ಸದನದಲ್ಲಿ ಮಂಡಿಸಬೇಕು. ಸತ್ಯ ಮತ್ತು ತರ್ಕ ಇರುವಲ್ಲಿ ಅನಗತ್ಯ ಗದ್ದಲ ಅಥವಾ ಗೊಂದಲ ಸೃಷ್ಟಿಸಲು ಅವಕಾಶ ಇರಬಾರದು ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಾದಗಳು ಮತ್ತು ಸಾಕ್ಷ್ಯಾಧಾರಗಳು ದೃಢವಾಗಿದ್ದರೆ, ತಮ್ಮ ಸಂದೇಶವನ್ನು ಶಾಂತ ಹಾಗೂ ಸಂಯಮದಿಂದಲೂ ಪರಿಣಾಮಕಾರಿಯಾಗಿ ಮಂಡಿಸಬಹುದು. ಸದನದ ಚರ್ಚೆಗಳು ತರ್ಕ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಡೆಯಲಿ ಎಂದು ನಾನು ಆಶಿಸುತ್ತೇನೆ. ಪ್ರತಿಯೊಬ್ಬರ ಮಾತಿಗೂ ಅವಕಾಶ ದೊರೆಯಬೇಕು. ಪ್ರತಿಯೊಂದು ವಿಚಾರಕ್ಕೂ ಗೌರವ ಸಿಗಬೇಕು. ಎಲ್ಲ ಸಂಸದರು ಸಂಪೂರ್ಣ ಬದ್ಧತೆಯಿಂದ ಸದನದ ಕಲಾಪಗಳಲ್ಲಿ ಭಾಗವಹಿಸಬೇಕು ಎಂದು ನಾನು ಪ್ರೋತ್ಸಾಹಿಸುತ್ತೇನೆ ಎಂದು ಪ್ರಧಾನಿ ವಿವರಿಸಿದ್ದಾರೆ.