ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡರು”: ಜಿ-7 ಶೃಂಗಸಭೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಸಮ್ಮುಖದಲ್ಲೇ ಅಮೆರಿಕಕ್ಕೆ ನರೇಂದ್ರ ಮೋದಿ ತಿರುಗೇಟು

PM Modi Calls for Maritime Safety: ಹೊರ್ಮುಜ್ ಜಲಸಂಧಿ ಸಂಕಷ್ಟದಿಂದಾಗಿ ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿರುವುದನ್ನು ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ಹೊರ್ಮುಜ್ ಜಲಸಂಧಿ ಮೂಲಕ ನಡೆಯುವ ಸಮುದ್ರ ವ್ಯಾಪಾರದಲ್ಲಿ ಉಂಟಾದ ಅಡಚಣೆಗಳು ಜಾಗತಿಕ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಜಿ-7 ಶೃಂಗಸಭೆಯಲ್ಲಿ ಕಡಲ ಸುರಕ್ಷತೆಗೆ ಪ್ರಧಾನಿ ಮೋದಿ ಕರೆ

ಸಾಂದರ್ಭಿಕ ಚಿತ್ರ -

Priyanka P
Priyanka P Jun 17, 2026 1:14 PM

ನವದೆಹಲಿ, ಜೂ.17: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೇರಿದಂತೆ ಜಿ7 ನಾಯಕರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ಅಮೆರಿಕದ ಮಿಲಿಟರಿ ದಾಳಿಯಲ್ಲಿ (US military strike) ಭಾರತೀಯ ನಾವಿಕರ ಸಾವುನೋವುಗಳ ಕುರಿತು ಮಾತನಾಡಿದರು. ಹೊರ್ಮುಜ್ ಜಲಸಂಧಿ ಸಂಕಷ್ಟದಿಂದಾಗಿ ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿರುವುದನ್ನೂ ಅವರು ಪ್ರಸ್ತಾಪಿಸಿದರು. ಸಮುದ್ರ ಮಾರ್ಗಗಳು ಸುರಕ್ಷಿತವಾಗಿರಬೇಕು. ನಾವಿಕರು ಭಯವಿಲ್ಲದೆ ತಮ್ಮ ಕರ್ತವ್ಯ ನಿರ್ವಹಿಸುವಂತಾಗಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ನಡೆಯುತ್ತಿರುವ ಪ್ರಯತ್ನಗಳಲ್ಲಿ ಆಗಿರುವ ಪ್ರಗತಿಯನ್ನು ನಾವು ಸ್ವಾಗತಿಸುತ್ತೇವೆ. ಈ ಸಂಘರ್ಷವು ಆ ಪ್ರದೇಶದಲ್ಲಿರುವ ನಮ್ಮ ಸ್ನೇಹಪರ ರಾಷ್ಟ್ರಗಳಲ್ಲಿ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟಕ್ಕೆ ಕಾರಣವಾಗಿದೆ. ಹೊರ್ಮುಜ್ ಜಲಸಂಧಿ ಮೂಲಕ ನಡೆಯುವ ಸಮುದ್ರ ವ್ಯಾಪಾರದಲ್ಲಿ ಉಂಟಾದ ಅಡಚಣೆಗಳು ಜಾಗತಿಕ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಹಲವಾರು ಭಾರತೀಯ ನಾಗರಿಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. "ಜಾಗತಿಕ ಸಮುದ್ರ ವ್ಯಾಪಾರದ ಮೂಲಕ ರಾಷ್ಟ್ರಗಳನ್ನು ಸಂಪರ್ಕಿಸುವ ನಾವಿಕರ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಮುದ್ರ ಮಾರ್ಗಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು ಹಾಗೂ ನಾವಿಕರು ಯಾವುದೇ ಭಯವಿಲ್ಲದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವಂತಾಗಬೇಕು ಎಂದು ನಾವಿಕರ ಸುರಕ್ಷತೆಯ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಜಿ7 ಶೃಂಗಸಭೆಯಲ್ಲಿ ಮತ್ತೆ ಸದ್ದು ಮಾಡಿದ ‘ಮೆಲೋಡಿ’ ಜೋಡಿ; "ಇನ್ಸ್ಟಾಗ್ರಾಂ ಫೇವರೆಟ್ ಕಪಲ್‌" ಎಂದ ಮೆಲೋನಿ!

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ವಿಶ್ವದ ತೈಲ ಮತ್ತು ವಾಣಿಜ್ಯ ಸರಕು ಸಾಗಣೆಯ ಪ್ರಮುಖ ಭಾಗವನ್ನು ಹೊತ್ತೊಯ್ಯುವ ಸಮುದ್ರ ಮಾರ್ಗಗಳ ಭದ್ರತೆ ಕುರಿತು ಆತಂಕಗಳು ಹೆಚ್ಚುತ್ತಿರುವ ಸಮಯದಲ್ಲಿ, ಜಿ7 ರಾಷ್ಟ್ರಗಳ ನಾಯಕರ ಸಮ್ಮುಖದಲ್ಲಿ ಪ್ರಧಾನಿ ಮೋದಿ ಈ ಹೇಳಿಕೆಗಳನ್ನು ನೀಡಿದರು.

ಪರ್ಷಿಯನ್ ಕೊಲ್ಲಿಯನ್ನು ಅಂತಾರಾಷ್ಟ್ರೀಯ ಸಮುದ್ರ ಪ್ರದೇಶಗಳೊಂದಿಗೆ ಸಂಪರ್ಕಿಸುವ ಹೊರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ಮಹತ್ವದ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಸೂಕ್ಷ್ಮವಾದ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ.

ಒಮಾನ್ ಕೊಲ್ಲಿಯಲ್ಲಿ ಸಂಚರಿಸುತ್ತಿದ್ದ ಪಲಾವ್ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ಸೆಟ್ಟೆಬೆಲ್ಲೋ ಮೇಲೆ ಅಮೆರಿಕದ ಪಡೆಗಳು ದಾಳಿ ನಡೆಸಿದ ಪರಿಣಾಮ ಮೂವರು ಭಾರತೀಯರು ಮೃತಪಟ್ಟ ಕೆಲವೇ ದಿನಗಳ ನಂತರ ಪ್ರಧಾನಿ ಮೋದಿ ಈ ಹೇಳಿಕೆಗಳನ್ನು ನೀಡಿದರು. ಸಮುದ್ರ ಮಾರ್ಗಗಳ ಭದ್ರತೆ ಮತ್ತು ಭಾರತೀಯ ನಾವಿಕರ ಸುರಕ್ಷತೆ ಕುರಿತು ಹೆಚ್ಚಿದ ಆತಂಕದ ನಡುವೆಯೇ ಈ ಘಟನೆ ನಡೆದಿದೆ.

ಯುದ್ಧ ಕೊನೆಗೊಳಿಸಲು ಮುಂದಾದ ಅಮೆರಿಕ- ಇರಾನ್: ಪ್ರಧಾನಿ ನರೇಂದ್ರ ಮೋದಿ ಸಂತಸ

ಈ ವಾರದ ಆರಂಭದಲ್ಲಿ ಸೆಟ್ಟೆಬೆಲ್ಲೊಗೆ ಸಂಬಂಧಿಸಿದ ಘಟನೆ ಸಂಭವಿಸಿದೆ. ಹಡಗಿನಲ್ಲಿ 24 ಭಾರತೀಯ ಪ್ರಜೆಗಳು ಮತ್ತು ಇತರ ನಾಲ್ವರು- ಇಬ್ಬರು ಪಾಕಿಸ್ತಾನಿಗಳು, ಒಬ್ಬ ಉಕ್ರೇನಿಯನ್ ಮತ್ತು ಒಬ್ಬ ರಷ್ಯನ್ ಸೇರಿದಂತೆ 28 ಜನ ಸಿಬ್ಬಂದಿ ಇದ್ದರು. ಸೂಚನೆಗಳನ್ನು ಪಾಲಿಸಲು ವಿಫಲವಾದ ಮತ್ತು ಅಮೆರಿಕದ ದಿಗ್ಬಂಧನವನ್ನು ಉಲ್ಲಂಘಿಸಿ ಇರಾನ್‌ನಿಂದ ತೈಲವನ್ನು ಸಾಗಿಸುತ್ತಿದೆ ಎಂದು ಹೇಳಲಾದ ನಂತರ ಯುಎಸ್ ಪಡೆಗಳು ಟ್ಯಾಂಕರ್ ಮೇಲೆ ದಾಳಿ ಮಾಡಿತು.

ಭಾರತೀಯ ಸಿಬ್ಬಂದಿಯೊಂದಿಗೆ ವ್ಯಾಪಾರಿ ಹಡಗುಗಳ ಮೇಲೆ ದಾಳಿ ಮಾಡಿದ ಮೂರು ಪ್ರತ್ಯೇಕ ಘಟನೆಗಳಲ್ಲಿ ಇದೂ ಒಂದು. ಮೂವರು ಭಾರತೀಯ ಪ್ರಜೆಗಳ ಸಾವಿಗೆ ಕಾರಣವಾದ ಇತ್ತೀಚಿನ ಘಟನೆಯನ್ನು ಪ್ರಧಾನಿ ನೇರವಾಗಿ ಉಲ್ಲೇಖಿಸದಿದ್ದರೂ, ಅವರ ಹೇಳಿಕೆಗಳು ಸಂಘರ್ಷ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಿಕ ಸಿಬ್ಬಂದಿಯ ಸುರಕ್ಷತೆ ಮತ್ತು ಸಮುದ್ರ ವಾಣಿಜ್ಯಕ್ಕೆ ಅಡ್ಡಿಪಡಿಸುವುದರಿಂದ ಉಂಟಾಗುವ ಆರ್ಥಿಕ ಪರಿಣಾಮಗಳ ಬಗ್ಗೆ ಭಾರತದ ಕಳವಳಗಳನ್ನು ಒತ್ತಿಹೇಳುತ್ತವೆ.