ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Ranveer Allahbadia: ಇಂಡಿಯಾಸ್ ಗಾಟ್ ಲೇಟೆಂಟ್ ವಿವಾದ: ಸುಪ್ರೀಂ ಕೋರ್ಟ್ ಇಂದು ರಣವೀರ್ ಅಲ್ಲಾಬಾಡಿಯಾ ಅರ್ಜಿ ವಿಚಾರಣೆ

ಇಂಡಿಯಾಸ್ ಗಾಟ್ ಲ್ಯಾಟೆಂಟ್ ನಲ್ಲಿಅಶ್ಲೀಲ ಹೇಳಿಕೆಗಳನ್ನು ಹೇಳಿಕೆ ಹೇಳಿದ ಆರೋಪ ಮೇಲೆ ಯೂಟ್ಯೂಬರ್ ರಣವೀರ್‌ ಅಲ್ಲಾಬಾಡಿಯಾ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಲಿದೆ.

ಸುಪ್ರೀಂ ಕೋರ್ಟ್ ಇಂದು ರಣವೀರ್ ಅಲ್ಲಾಬಾಡಿಯಾ ಅರ್ಜಿ ವಿಚಾರಣೆ

ರಣವೀರ್‌ ಅಲ್ಲಾಬಾಡಿಯಾ

Profile Vishakha Bhat Feb 18, 2025 8:59 AM

ನವದೆಹಲಿ: ಕಾಮಿಡಿಯನ್‌ ಸಮಯ್ ರೈನಾ ಅವರ ಯೂಟ್ಯೂಬ್ ಕಾರ್ಯಕ್ರಮ 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ನಲ್ಲಿ( India's Got Latent Show) ಅಶ್ಲೀಲ ಹೇಳಿಕೆಗಳನ್ನು ಹೇಳಿಕೆ ನೀಡಿದ ಆರೋಪ ಮೇಲೆ ಯೂಟ್ಯೂಬರ್ ರಣವೀರ್‌ ಅಲ್ಲಾಬಾಡಿಯಾ (Ranveer Allahbadia) ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಲಿದೆ.

ಶುಕ್ರವಾರ, ಮಾಜಿ ಸಿಜೆಐ ಡಿವೈ ಚಂದ್ರಚೂಡ್ ಅವರ ಪುತ್ರ ಅಭಿನವ್‌ ಚಂದ್ರಚೂಡ ತಮ್ಮ ಕಕ್ಷೀದಾರ ಅವರು ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯವನ್ನು ತುರ್ತು ವಿಚಾರಣೆಗೆ ಒಳಪಡಿಸುವಂತೆ ಕೋರಿದ್ದರು. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು ಈ ಅರ್ಜಿಗಳನ್ನು ಒಪ್ಪಿಕೊಂಡಿತು ಆದರೆ ತುರ್ತು ವಿಚಾರಣೆಯನ್ನು ನೀಡಲು ನಿರಾಕರಿಸಿತು, ಅರ್ಜಿಯನ್ನು ಎರಡು ಮೂರು ದಿನಗಳಲ್ಲಿ ವಿಚಾರಣೆಗೆ ನಿಗದಿಪಡಿಸಲಾಗುವುದು ಹೇಳಿತ್ತು. ಇದೀಗ ಅರ್ಜಿ ವಿಚಾರಣೆ ನಡೆಯಲಿದೆ.

ಏನಿದು ವಿವಾದ?

ರಣವೀರ್ ಅಲ್ಲಾಬಾಡಿಯಾ ಅವರು ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ತಮಾಷೆಯಾಗಿ ಮಾತನಾಡುವ ಭರದಲ್ಲಿ ಅವರು ಪೋಷಕರ ಲೈಂಗಿಕ ಕ್ರಿಯೆ ಬಗ್ಗೆ ಮಾತಾಡಿದ್ದರು. ನಿಮ್ಮ ಪೋಷಕರು ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡ್ತೀರಾ? ? ಅಥವಾ ಒಮ್ಮೆ ಈ ಸೆಕ್ಸ್‌ನಲ್ಲಿ ಭಾಗಿಯಾಗುವ ಮೂಲಕ ಅವರ ನಡುವಿನ ಸೆಕ್ಸ್‌ಅನ್ನು ಶಾಶ್ವತವಾಗಿ ಬಂದ್‌ ಮಾಡಲು ಇಷ್ಟಪಡುತ್ತೀರಾ? ಎಂದು ಕೇಳಿದ್ದರು. ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ರಣವೀರ್ ಅಲ್ಲಾಬಾಡಿಯಾ, ಸಮಯ್‌ ರೈನಾ, ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಅಪೂರ್ವ ಮಖಿಜಾ ಮೇಲೆ ದೂರು ದಾಖಲಾಗಿತ್ತು.

ಇಂಡಿಯಾಸ್ ಗಾಟ್ ಲೇಟೆಂಟ್' ಪ್ರಕರಣಕ್ಕೆ ಸಂಬಂಧಿಸಿದಂತೆ ಇವರ ಮೇಲೆ ಮಹಾರಾಷ್ಟ್ರ ಸೈಬರ್ ಇಲಾಖೆ, ಗುವಾಹಟಿ, ಜೈಪುರ ಸೇರಿದಂತೆ ಹಲವು ಕಡೆ ಎಫ್‌ಐಆರ್‌ ದಾಖಲಾಗಿದೆ. ಮಹಾರಾಷ್ಟ್ರ ಸೈಬರ್ ಸೆಲ್ ಅಲ್ಲಾಬಾಡಿಯಾಗೆ ಸಮನ್ಸ್ ಜಾರಿ ಮಾಡಿದ್ದು, ಫೆಬ್ರವರಿ 24 ರಂದು ತನ್ನ ಮುಂದೆ ಹಾಜರಾಗುವಂತೆ ಸೂಚಿಸಿದೆ.

ಈ ಸುದ್ದಿಯನ್ನೂ ಓದಿRanveer Allahbadia: ವಿಚಾರಣೆಗೆ ಹಾಜರಾಗದ ಯೂಟ್ಯೂಬರ್‌ ರಣವೀರ್‌ ತಂಡ: ಮತ್ತೆ ಸಮನ್ಸ್‌ ಜಾರಿ!

ಮಹಿಳಾ ಆಯೋಗ ಫೆಬ್ರುವರಿ 17 ರಂದು ಮಧ್ಯಾಹ್ನ 12 ಗಂಟೆಗೆ ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ವೈಯಕ್ತಿಕ ಸುರಕ್ಷತೆ, ದೂರ ಪ್ರಯಾಣ ಹೀಗೆ ಸಾಕಷ್ಟು ಕಾರಣಗಳನ್ನು ನೀಡುವ ಮೂಲಕ ಅನೇಕರು ಆಯೋಗದ ಮುಂದೆ ಹಾಜರಾಗಲು ವಿಫಲರಾಗಿದ್ದಾರೆ ಎಂದು NCW ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಮತ್ತೊಮ್ಮೆ ಸಮನ್ಸ್‌ ಜಾರಿಯಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ವಿಚಾರಣೆಯನ್ನು ಮಾರ್ಚ್ 6 ಮತ್ತು 11 ರಂದು ನಿಗದಿಪಡಿಸಿದೆ.