ಮಿತಿ ಮೀರಿದ ರೀಲ್ಸ್ ಹುಚ್ಚಾಟ: ಫ್ಲೈಓವರ್‌ನಲ್ಲಿ ಅಪಾಯಕಾರಿ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ
ಉತ್ತರ ಪ್ರದೇಶದ ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೌರಿಯಾ ರೈಲ್ವೆ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಬಳಿ 22 ವರ್ಷದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ರಿಚೋಲಾ ಗ್ರಾಮದ 22 ವರ್ಷದ ಮೊಹಮ್ಮದ್ ಫೈಜಾನ್ ಎಂಬ ಯುವಕ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.
ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ -
ಲಖನೌ, ಫೆ. 2: ಇತ್ತೀಚೆಗೆ ರೀಲ್ಸ್ ಕ್ರೇಜ್ ಅನ್ನೋದು ಮಿತಿ ಮೀರಿ ಹೋಗಿದೆ. ಅಪಾಯಕಾರಿ ಸ್ಟಂಟ್ ಮಾಡುವುದು, ವಾಹನಗಳಲ್ಲಿ ವಿಲ್ಹಿಂಗ್ ಮಾಡುವುದು ಹೀಗೆ ವೈರಲ್ ಆಗಲು ನಾನಾ ಸಾಹಸ ಮಾಡುತ್ತಲೇ ಇರುತ್ತಾರೆ. ಇಂತಹ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡವರು ಅನೇಕರು ಇದ್ದಾರೆ. ಇದೀಗ ರೀಲ್ಸ್ ಗೀಳಿನಿಂದಾಗಿ ಯುವಕನೊಬ್ಬ ಮೃತ ಪಟ್ಟಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೇಲಿ ಸಮೀಪದ ನವಾಬ್‌ಗಂಜ್ ಪೊಲೀಸ್ ವ್ಯಾಪ್ತಿಯಲ್ಲಿ ಈ ಭೀಕರ ದುರಂತ ನಡೆದಿದೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದೆ.
ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜೌರಿಯಾ ರೈಲ್ವೆ ನಿಲ್ದಾಣದ ಬಳಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಬಳಿ 22 ವರ್ಷದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ರಿಚೋಲಾ ಗ್ರಾಮದ ಮೊಹಮ್ಮದ್ ಫೈಜಾನ್ ಎಂಬ ಯುವಕ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದು ಕೊಂಡವನು. ಮೊಹಮ್ಮದ್ ಫೈಜಾನ್ ಶುಕ್ರವಾರ (ಜನವರಿ 31) ಸಂಜೆ ತನ್ನ ಸ್ನೇಹಿತ ಅನುಜ್‌ನೊಂದಿಗೆ ಹೊರಗೆ ಬಂದಿದ್ದು, ಇಬ್ಬರು ನಿಲ್ದಾಣದ ಸಮೀಪವಿರುವ ನಿರ್ಮಾಣ ಹಂತದ ಫ್ಲೈಓವರ್ ಬಳಿ ರೀಲ್ಸ್ ಮಾಡಲು ಹೋಗಿದ್ದಾರೆ.
ವಿಡಿಯೊ ನೋಡಿ:
उत्तर प्रदेश के बरेली में 22 साल के फैज़ान की मौत हो गई। वो अंडर कंस्ट्रक्शन पुल पर रील बना रहा था। अचानक बैलेंस बिगड़ने से नीचे गिरा और भारी भरकम सीमेंटेड वॉल उसके ऊपर आ गिरी। नीचे दबकर मौत हो गई। pic.twitter.com/JstnGBsbHa
— Sachin Gupta (@SachinGuptaUP) January 31, 2026
ರಸ್ತೆ ಬದಿಯಲ್ಲಿ ದೊಡ್ಡ ಕಾಂಕ್ರೀಟ್ ಚಪ್ಪಡಿಗಳನ್ನು ಜೋಡಿಸಲಾಗಿದ್ದ ನಿರ್ಮಾಣ ಸ್ಥಳದ ಬಳಿ ಇಬ್ಬರೂ ರೀಲ್ಸ್ ಮಾಡಲು ನಿರ್ಧರಿಸಿದ್ದಾರೆ. ಫೈಜಾನ್ ಚಪ್ಪಡಿಗಳ ಮೇಲೆ ಹತ್ತಿದ್ದು ಆದಾಗ್ಯೂ, ಆತ ಸಮತೋಲನ ಕಳೆದುಕೊಂಡು ಜಾರಿ ಬಿದ್ದಿದ್ದಾನೆ. ಬೀಳುವ ಸಮಯದಲ್ಲಿ ಭಾರವಾದ ಕಾಂಕ್ರೀಟ್ ಚಪ್ಪಡಿಗಳಲ್ಲಿ ಒಂದು ಅಸ್ಥಿರವಾಗಿ ಕುಸಿದು ಬಿದ್ದು ತಲೆಗೆ ಬಡಿದಿದೆ. ಸ್ಲ್ಯಾಬ್ ನೇರವಾಗಿ ತಲೆಗೆ ಬಡಿದ ಪರಿಣಾಮ, ಫೈಜಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮದುವೆಗೆ ನಿರಾಕರಿಸಿದ್ದ ಪ್ರೇಯಸಿ: ವಿದ್ಯುತ್ ಟವರ್ ಏರಿದ ಪಾಗಲ್ ಪ್ರೇಮಿಯ ವಿಡಿಯೋ ವೈರಲ್
ವಿಡಿಯೊ ಚಿತ್ರೀಕರಿಸುವ ಉದ್ದೇಶದಿಂದ ಫೈಜಾನ್ ಆ ಸ್ಲ್ಯಾಬ್‌ಗಳ ಮೇಲೆ ಏರಿದ್ದ. ಈ ಘಟನೆಯನ್ನು ನೋಡಿದ ದಾರಿಹೋಕರು ಮತ್ತು ಹತ್ತಿರದ ನಿವಾಸಿಗಳು ಸ್ಥಳಕ್ಕೆ ಧಾವಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ವಲ್ಪ ಸಮಯದ ನಂತರ ಆಗಮಿಸಿ ಫೈಜಾನ್ ಅವರ ಕುಟುಂಬಕ್ಕೆ ಮಾಹಿತಿ ನೀಡಿದರು. ಸದ್ಯ ಮಗನ ಹಠಾತ್ ಸಾವು ಕುಟುಂಬವನ್ನು ತೀವ್ರ ಶೋಕ ಸಾಗರದಲ್ಲಿ ಮುಳುಗಿಸಿದೆ. ಈ ಹೃದಯವಿದ್ರಾವಕ ಘಟನೆಯು ಹೆಚ್ಚುತ್ತಿರುವ ರೀಲ್ಸ್ ಅಪಾಯ ಎತ್ತಿ ತೋರಿಸುತ್ತದೆ.