ತಿರುಪ್ಪರಂಕುಂಡ್ರಂ ಬೆಟ್ಟದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಸಕಲ ತಯಾರಿ; ದರ್ಗಾಕ್ಕೆ ಭಾರೀ ಸಂಖ್ಯೆಯಲ್ಲಿ ಕೇರಳ ಮುಸ್ಲಿಂ ಭಕ್ತರ ಭೇಟಿ
ತಮಿಳುನಾಡಿನ ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ ದೀಪತೂಣ್ ಕಂಬದ ಮೇಲೆ ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಕಾರ್ತಿಕ ದೀಪವನ್ನು ಬೆಳಗಿಸಲು ಸಕಲ ಸಿದ್ಧತೆ ನಡೆಸಲಾಗಿದ್ದು, ಬೆಟ್ಟದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅರುಲ್ಮಿಗು ಸುಬ್ರಮಣಿಯ ಸ್ವಾಮಿ ದೇವಸ್ಥಾನ ಮತ್ತು ಹಜರತ್ ಸುಲ್ತಾನ್ ಸಿಕಂದರ್ ಬಾದುಶಾ ಔಲಿಯಾ ದರ್ಗಾ ಎರಡನ್ನೂ ಹೊಂದಿರುವ ಈ ಬೆಟ್ಟದಲ್ಲಿ ಭದ್ರತೆಯ ಹೊಣೆಯನ್ನು ಸುಪ್ರೀಂ ಕೋರ್ಟ್ ಕೇಂದ್ರ ಮೀಸಲು ಪೊಲೀಸ್ ಪಡೆಗೆ (CRPF) ವಹಿಸಿದೆ.
ಸಂಗ್ರಹ ಚಿತ್ರ -
ಚೆನ್ನೈ: ತಮಿಳುನಾಡಿನ ಮಧುರೈನ ತಿರುಪ್ಪರಂಕುಂಡ್ರಂ ಬೆಟ್ಟದ ಮೇಲಿರುವ ದೀಪತೂಣ್ ಕಂಬದ ಮೇಲೆ ಸುಪ್ರೀಂ ಕೋರ್ಟ್ ಆದೇಶದಂತೆ (Karthigai Deepam) ಇಂದು ಕಾರ್ತಿಕ ದೀಪವನ್ನು ಬೆಳಗಿಸಲು ಸಕಲ ಸಿದ್ಧತೆ ನಡೆಸಲಾಗಿದ್ದು, ಬೆಟ್ಟದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅರುಲ್ಮಿಗು ಸುಬ್ರಮಣಿಯ ಸ್ವಾಮಿ ದೇವಸ್ಥಾನ ಮತ್ತು ಹಜರತ್ ಸುಲ್ತಾನ್ ಸಿಕಂದರ್ ಬಾದುಶಾ ಔಲಿಯಾ ದರ್ಗಾ ಎರಡನ್ನೂ ಹೊಂದಿರುವ ಈ ಬೆಟ್ಟದಲ್ಲಿ ಭದ್ರತೆಯ ಹೊಣೆಯನ್ನು ಸುಪ್ರೀಂ ಕೋರ್ಟ್ ಕೇಂದ್ರ ಮೀಸಲು ಪೊಲೀಸ್ ಪಡೆಗೆ (CRPF) ವಹಿಸಿದೆ. ಬೆಟ್ಟಕ್ಕೆ ಆಗಮಿಸಿದ ಸಿಆರ್ಪಿಎಫ್ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (RAF) ಸಿಬ್ಬಂದಿ ಹಾಗೂ ವಾಹನಗಳ ಮೇಲೆ ಸ್ಥಳೀಯರು ಮತ್ತು ಹಿಂದೂ ಭಕ್ತರು ಪುಷ್ಪವೃಷ್ಟಿ ಸುರಿಸುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ಮತ್ತೊಂದೆಡೆ, ಕೇರಳದಿಂದ ಆಗಮಿಸಿದ ಯಾತ್ರಾರ್ಥಿಗಳು ಸೇರಿದಂತೆ 100ಕ್ಕೂ ಹೆಚ್ಚು ಮುಸ್ಲಿಂ ಭಕ್ತರು ಬೆಳಿಗ್ಗೆ 6.15ರ ಸುಮಾರಿಗೆ ಬೆಟ್ಟದ ತಪ್ಪಲಿನಲ್ಲಿ ಜಮಾಯಿಸಿ, ಭದ್ರತಾ ತಪಾಸಣೆಯ ಬಳಿಕ ದರ್ಗಾಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದರ್ಗಾದ ವಾರ್ಷಿಕ ಉರುಸ್ ಉತ್ಸವವು ಡಿಸೆಂಬರ್ 10ರಂದು ನಡೆಯಲಿದ್ದು, ಇಂದು ಪ್ರಾರ್ಥನೆಗೆ ಬರುವ ಮುಸ್ಲಿಂ ಭಕ್ತರಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ಸಿಆರ್ಪಿಎಫ್ಗೆ ನ್ಯಾಯಾಲಯ ನಿರ್ದೇಶಿಸಿದೆ. ಅದರಂತೆ ತಮಿಳುನಾಡು ಪೊಲೀಸರು ಬೆಟ್ಟದ ತಪ್ಪಲಿನಲ್ಲಿ ಭಕ್ತರ ವಿವರಗಳನ್ನು ನೋಂದಾಯಿಸಿಕೊಂಡು ಎರಡೂ ಧಾರ್ಮಿಕ ಸ್ಥಳಗಳಿಗೆ ಸುಗಮ ಪ್ರವೇಶ ಕಲ್ಪಿಸುತ್ತಿದ್ದಾರೆ.
ವಿಡಿಯೋ ನೋಡಿ
at #Thirupparankundram, devotees are only lighting the Karthigai Deepam for Lord Murugan- a purely #Sanatan ritual at a sacred #Hindu abode. If it is our God and our tradition, why there be mass gatherings of muslims #KarthigaiDeepam . https://t.co/ft0ooQROzr
— Neelesh (@theNilesh_) November 28, 2026
ಕಳೆದ ನವೆಂಬರ್ 20ರಂದು ದೀಪತೂಣ್ ಕಂಬದ ಮೇಲೆ ದೀಪ ಬೆಳಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಆದರೆ ನವೆಂಬರ್ 24ರಂದು ನಡೆದ ವಾರ್ಷಿಕ ಕಾರ್ತಿಕ ದೀಪೋತ್ಸವದಂದು ಅಲ್ಲಿ ದೀಪ ಬೆಳಗದೆ, ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಬಳಿ ದೀಪ ಬೆಳಗಲಾಗಿತ್ತು. ನ್ಯಾಯಾಲಯದ ಆದೇಶ ಪಾಲಿಸದ ಕಾರಣ ಅರ್ಜಿದಾರ ರಾಮ ರವಿಕುಮಾರ್ ಅವರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠವು, ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. "ರಾಜಕೀಯ ನಾಯಕರ ಸೂಚನೆಯಂತೆ ಅಧಿಕಾರಿಗಳು ನಡೆದುಕೊಂಡಿರುವ ಸಾಧ್ಯತೆಯಿದೆ" ಎಂದು ಅಭಿಪ್ರಾಯಪಟ್ಟ ಪೀಠವು, ತಮಿಳುನಾಡು ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್, ಡಿಜಿಪಿ ಮಹೇಶ್ ಅಗರ್ವಾಲ್ ಸೇರಿದಂತೆ 15 ಅಧಿಕಾರಿಗಳು ಹಾಗೂ ದೇವಸ್ಥಾನದ ಪದಾಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿ, ಡಿಸೆಂಬರ್ 15ರಂದು ಖುದ್ದು ಹಾಜರಾಗುವಂತೆ ಸೂಚಿಸಿದೆ.
ತಿರುಪ್ಪರಂಕುಂದ್ರಂ ಬೆಟ್ಟಕ್ಕೆ ಸಿಆರ್ಪಿಎಫ್ ಭದ್ರತೆ: ಇಂದು ದೀಪಸ್ತಂಭದಲ್ಲಿ ಬೆಳಗಲಿದೆ ಕಾರ್ತಿಕ ದೀಪ
ಇನ್ನು ಬೆಟ್ಟದ ಸುತ್ತ ಮುತ್ತ ಬಿಗಿ ಭದ್ರತೆ ಒದಗಿಸಲಾಗಿದ್ದು, ಬೆಟ್ಟದ ತಪ್ಪಲಿನಲ್ಲಿ ತಮಿಳುನಾಡು ಪೊಲೀಸರನ್ನು ನಿಯೋಜಿಸಲಾಗಿದ್ದು, ದೇವಸ್ಥಾನ ಮತ್ತು ದರ್ಗಾಕ್ಕೆ ತೆರಳುವ ಭಕ್ತರ ವಿವರಗಳನ್ನು ನೋಂದಾಯಿಸಿಕೊಂಡು ಭದ್ರತಾ ತಪಾಸಣೆಯ ನಂತರವಷ್ಟೇ ಮೇಲಕ್ಕೆ ಬಿಡಲಾಗುತ್ತಿದೆ. ಸಂಜೆ 5 ಗಂಟೆಗೆ ದೀಪತೂಣ್ ಕಂಬದ ಮೇಲೆ ದೀಪ ಬೆಳಗಲು ಸಿದ್ಧತೆ ನಡೆದಿದ್ದು, ದೀಪ ಬೆಳಗಿಸಲು ಅಗತ್ಯವಿರುವ ಮೂರು ಮಣ್ಣಿನ ದೀಪಗಳು, ತುಪ್ಪ ಮತ್ತು ಬಟ್ಟೆಯನ್ನು ದೇವಸ್ಥಾನದ ಅಧಿಕಾರಿಗಳು ಬಿಗಿ ಭದ್ರತೆಯ ನಡುವೆ ಬೆಟ್ಟದ ಮೇಲಿರುವ ದೀಪತೂಣ್ ಸ್ತಂಭದ ಬಳಿ ಕೊಂಡೊಯ್ದಿದ್ದಾರೆ.