ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಡಿ ವಿರುದ್ಧ ಮಮತಾ ಕಿಡಿ; ಬಂಗಾಳದಾದ್ಯಂತ ಭಾರೀ ಪ್ರತಿಭಟನೆಗೆ ಕರೆ

ಐ-ಪ್ಯಾಕ್ ಮುಖ್ಯಸ್ಥ ಮತ್ತು ಟಿಎಂಸಿಯ ಐಟಿ ಸೆಲ್ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಇಡಿ ಗುರುವಾರ ದಾಳಿ ನಡೆಸಿತ್ತು. ಆ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಕೇಂದ್ರ ತನಿಖಾ ಸಂಸ್ಥೆ ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತನಿಖಾ ಪ್ರಕ್ರಿಯೆಗೆ "ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇಡಿ ವಿರುದ್ಧ ಬಂಗಾಳದಾದ್ಯಂತ ಭಾರೀ ಪ್ರತಿಭಟನೆಗೆ ಮಮತಾ ಕರೆ

ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -

Vishakha Bhat
Vishakha Bhat Jan 9, 2026 9:31 AM

ಕೊಲ್ಕತ್ತಾ: ಐ-ಪ್ಯಾಕ್ ಮುಖ್ಯಸ್ಥ ಮತ್ತು ಟಿಎಂಸಿಯ ಐಟಿ ಸೆಲ್ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಇಡಿ ಗುರುವಾರ ದಾಳಿ ನಡೆಸಿತ್ತು. ಆ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಕೇಂದ್ರ ತನಿಖಾ ಸಂಸ್ಥೆ (ED) ಗುರುವಾರ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ತನಿಖಾ ಪ್ರಕ್ರಿಯೆಗೆ "ಅಡ್ಡಿಪಡಿಸಿದ್ದಾರೆ" ಮತ್ತು ಪ್ರಮುಖ ಸಾಕ್ಷ್ಯಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದೆ. ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ಸಿಎಂ ತಮ್ಮ ಸಾಂವಿಧಾನಿಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಐ-ಪ್ಯಾಕ್ ಮುಖ್ಯಸ್ಥರ ನಿವಾಸ ಪ್ರವೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ಮೇಲಿನ ಆರೋಪದ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಪ್ರತಿಭಟನಾ ರ್ಯಾಲಿಯ ನೇತೃತ್ವ ವಹಿಸಲಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಜಾದವ್‌ಪುರ 8 ಬಿ ಬಸ್ ನಿಲ್ದಾಣದಿಂದ ಹಜ್ರಾ ಕ್ರಾಸಿಂಗ್‌ವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಿದ್ದಾರೆ ಎಂದು ವರದಿಯಾಗಿದೆ ಮತ್ತು 5 ಕಿ.ಮೀ.ಗೂ ಹೆಚ್ಚು ಉದ್ದದ ರ್ಯಾಲಿಯಲ್ಲಿ ಜನರು ಭಾಗವಹಿಸುವಂತೆ ಅವರು ಒತ್ತಾಯಿಸಿದ್ದಾರೆ. ತಮ್ಮ ಪಕ್ಷದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಐಟಿ ಸೆಲ್‌ನ ಉಸ್ತುವಾರಿ ಪ್ರತೀಕ್ ಜೈನ್ ಎಂದು ಬ್ಯಾನರ್ಜಿ ಉಲ್ಲೇಖಿಸಿದ್ದಾರೆ. ಇಡಿ ದಾಳಿಗಳು "ರಾಜಕೀಯ ಸೇಡಿನ" ಭಾಗವಾಗಿದ್ದು, ಇಡಿ ಅವುಗಳನ್ನು ಡೇಟಾ, ಸಮೀಕ್ಷೆ ತಂತ್ರಗಳು ಮತ್ತು ಮಾಹಿತಿಯನ್ನು ತನ್ನ ವ್ಯವಸ್ಥೆಗೆ ಸೇರಿಸಲು ಬಳಸಿಕೊಂಡಿದೆ ಎಂದು ಅವರು ಹೇಳಿದರು.

ಏನಾಯಿತು ಎಂಬುದರ ಕುರಿತು ಇಡಿ ಮತ್ತು ಮಮತಾ ಬ್ಯಾನರ್ಜಿ ಇಬ್ಬರೂ ಪರಸ್ಪರ ವಿರುದ್ಧವಾದ ವಿವರಣೆಗಳನ್ನು ನೀಡಿದ್ದಾರೆ . ತನಿಖಾ ಸಂಸ್ಥೆ ಮುಖ್ಯಮಂತ್ರಿ ನಿವಾಸಕ್ಕೆ ನುಗ್ಗಿ ಪ್ರಮುಖ ಸಾಕ್ಷ್ಯಗಳನ್ನು ಕದ್ದಾಲಿಸಿರುವುದಾಗಿ ಆರೋಪಿಸಿದರೆ, ಟಿಎಂಸಿ ಮುಖ್ಯಸ್ಥೆ ಪಕ್ಷದ ಪ್ರಮುಖ ದಾಖಲೆಗಳಾದ ಹಾರ್ಡ್ ಡಿಸ್ಕ್, ಹಣಕಾಸು ದಾಖಲೆಗಳು ಮತ್ತು ರಾಜಕೀಯ ದಾಖಲೆಗಳನ್ನು ಇಡಿ ಕದ್ದಾಲಿಸಿರುವುದಾಗಿ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಇಡಿ ದಾಳಿ: ಕೋಲ್ಕತ್ತಾದಲ್ಲಿ ಹೈಡ್ರಾಮಾ, ಟಿಎಂಸಿ ಚುನಾವಣಾ ತಂತ್ರವನ್ನು ಬಿಜೆಪಿ ಕದ್ದಿದೆ ಎಂದ ಮಮತಾ ಬ್ಯಾನರ್ಜಿ

ಐ-ಪ್ಯಾಕ್ ಕಂಪನಿಯ ವಿರುದ್ಧ ಗಂಭೀರ ಆರೋಪಗಳಿದ್ದು, ಕಲ್ಲಿದ್ದಲು ಕಳ್ಳಸಾಗಣೆಗೆ ಸಂಬಂಧಿಸಿದ ಹವಾಲಾ ನಿರ್ವಾಹಕನೊಬ್ಬ ನೋಂದಾಯಿತ ಕಂಪನಿಯಾದ ಇಂಡಿಯನ್ ಪಿಎಸಿ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಹತ್ತಾರು ಕೋಟಿ ರೂಪಾಯಿಗಳ ವಹಿವಾಟನ್ನು ಸುಗಮಗೊಳಿಸಿದ್ದಾನೆ ಎಂದು ಇಡಿ ಆರೋಪಿಸಿದೆ. ಮಮತಾ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರ ಕ್ರಮಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA)ಯ ನಿಬಂಧನೆಗಳ ಪ್ರಕಾರ ನಡೆಯುತ್ತಿರುವ ತನಿಖೆ ಮತ್ತು ಪ್ರಕ್ರಿಯೆಗಳಿಗೆ "ಅಡ್ಡಿಪಡಿಸಿದ್ದಾರೆ" ಎಂದು ಇಡಿ ಆರೋಪಿಸಿದೆ.