ರಸ್ತೆ ನಿರ್ಮಿಸದಿದ್ದರೆ ಮತ ನೀಡುವುದಿಲ್ಲ ಎಂದವನಿಗೆ ಖಡಕ್ ಉತ್ತರ ನೀಡಿದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ
ಮಧ್ಯಪ್ರದೇಶದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ರಸ್ತೆ ಕಾಮಗಾರಿಯ ಕುರಿತು ಸ್ಥಳೀಯರು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ವಾಹನಗಳನ್ನು ತಡೆದು ರಸ್ತೆ ನಿರ್ಮಿಸದಿದ್ದರೆ ಮತ ನೀಡುವುದಿಲ್ಲ ಎಂದರು. ಇದಕ್ಕೆ ಸಚಿವರು ಖಡಕ್ ಪ್ರತಿಕ್ರಿಯೆಯನ್ನು ನೀಡಿದರು. ಇದರ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ.
ಸಂಗ್ರಹ ಚಿತ್ರ -
ಮಧ್ಯಪ್ರದೇಶ: ರಸ್ತೆ ನಿರ್ಮಿಸದಿದ್ದರೆ ಮತ ನೀಡುವುದಿಲ್ಲ ಎಂದವರಿಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Union Minister Jyotiraditya Scindia) ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇದರ ವಿಡಿಯೊ (Viral video) ಸಾಮಾಜಿಕ ಮಾಧ್ಯಮಗಳಲ್ಲಿ ಈಗ ವೈರಲ್ ಆಗಿದೆ. ಸಚಿವ ಸಿಂಧಿಯಾ ಅವರ ಸಂಸದೀಯ ಕ್ಷೇತ್ರ ಮಧ್ಯಪ್ರದೇಶದ (Madhya Pradesh) ಗುಣಾಕ್ಕೆ (Guna district) ಅವರು ಭೇಟಿ ನೀಡಿದ್ದ ವೇಳೆ ಸ್ಥಳೀಯರು ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಅವರ ವಾಹನವನ್ನು ತಡೆದರು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ರಸ್ತೆ ನಿರ್ಮಾಣ ಮಾಡದಿದ್ದರೆ ಮತದಾನ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದು ಸಿಂಧಿಯಾ ಅವರನ್ನು ಕೆರಳಿಸಿದೆ.
ದೀರ್ಘಕಾಲದಿಂದ ಬಾಕಿ ಉಳಿದಿರುವ ರಸ್ತೆ ಕಾಮಗಾರಿ ಕುರಿತು ಸ್ಥಳೀಯರು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ವಾಹನಗಳನ್ನು ತಡೆದು ಕೂಡಲೇ ರಸ್ತೆ ನಿರ್ಮಿಸದಿದ್ದರೆ ಮತದಾನ ಮಾಡುವುದಿಲ್ಲ ಎಂದು ಹೇಳಿರುವುದಕ್ಕೆ ಗಂಭೀರ ಮುಖಭಾವದಿಂದ ಸಿಂಧಿಯಾ ಅವರು ಪ್ರತಿಕ್ರಿಯಿಸಿ ಈ ರೀತಿ ಬೆದರಿಕೆಯೊಡ್ಡುವ ಧೋರಣೆಯನ್ನು ವಿರೋಧಿಸಿದರು. ಸಂಬಂಧ ಪಟ್ಟ ಅಧಿಕಾರಿಗಳಿಗೆ ವಿನಂತಿಯನ್ನು ಸಲ್ಲಿಸಿ. ಕೆಲಸವನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ನನಗೆ ಬಿಡಿ ಎಂದು ಹೇಳಿದರು.
ನೀಟ್ ಪರೀಕ್ಷೆ: ಮಾಸಾಂತ್ಯಕ್ಕೆ ನಿಲೇಕಣಿ ʼಸುಧಾರಣಾʼ ವರದಿ
ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಮಧ್ಯಪ್ರದೇಶದ ಗುಣಾದಲ್ಲಿ ಸಿಂಧಿಯಾ ಅವರ ವಾಹನಗಳನ್ನು ತಡೆದು ಸ್ಥಳೀಯರು ಪ್ರತಿಭಟನೆ ನಡೆಸಿದರು. ಸಿಂಧಿಯಾ ಅವರು ಹತ್ತಿರದ ಗ್ರಾಮವೊಂದಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಬೆಂಗಾವಲು ಪಡೆಯ ವಾಹನಗಳೊಂದಿಗೆ ಸಿಂಧಿಯಾ ಅವರ ವಾಹನಗಳ ಸಾಲನ್ನು ತಡೆದ ಪ್ರತಿಭಟನಾಕಾರರು ಫಲಕಗಳನ್ನು ಹಿಡಿದು "ರಸ್ತೆ ಇಲ್ಲದಿದ್ದರೆ ಮತವಿಲ್ಲ" ಎಂದು ಘೋಷಣೆ ಕೂಗಿರುವುದನ್ನು ಕಾಣಬಹುದು.
🚨Union Minister Jyotiraditya Scindia faces backlash after he was seen using offensive language against people who asked him to get a road repaired, warning that they would not vote for him if the road was not built pic.twitter.com/2o6PKRJh0y
— The Tatva (@thetatvaindia) September 19, 2026
ಅಲ್ಲದೇ ಈ ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಈ ಬಾರಿ ರಸ್ತೆ ನಿರ್ಮಿಸಬೇಕೆಂಬುದು ನಮ್ಮ ವಿನಂತಿ. ಇಲ್ಲದಿದ್ದರೆ ಮತದಾನದ ಸಮಯದಲ್ಲಿ ನೀವು ಬಂದಾಗ ನಾವು ಮತವನ್ನೇ ಹಾಕುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸಿಂಧಿಯಾ., ನನ್ನೊಂದಿಗೆ ಎಂದಿಗೂ ಇಂತಹ ಭಾಷೆಯನ್ನು ಬಳಸಬೇಡಿ. ಅರ್ಥವಾಯಿತೇ? ನಾನು ಎಲ್ಲರೊಂದಿಗೂ ಮಾತನಾಡುತ್ತಿದ್ದೇನೆ. ನೀವು ಬಂದು ವಿನಂತಿಯನ್ನು ಸಲ್ಲಿಸಿ. ಕೆಲಸವನ್ನು ಪೂರ್ಣಗೊಳಿಸುವುದು ನನ್ನ ಜವಾಬ್ದಾರಿ. ಸರಿನಾ? ಎಂದು ಹೇಳಿದ್ದಾರೆ.
ಭಾರತ–ಬಾಂಗ್ಲಾದೇಶ ಸಂಬಂಧಕ್ಕೆ ಹೊಸ ತಿರುವು; ನವೆಂಬರ್‌ನಲ್ಲಿ ತಾರಿಕ್ ರೆಹಮಾನ್ ದೆಹಲಿ ಭೇಟಿ ಸಾಧ್ಯತೆ
ಇದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. ಇದರ ಬಳಿಕ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಧಿಯಾ, ರಸ್ತೆ ನಿರ್ಮಾಣಕ್ಕಾಗಿ 3 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವುದಾಗಿ ಘೋಷಿಸಿದರು. ಈ ಮೊತ್ತವನ್ನು ಗುಣಾ ಕ್ಷೇತ್ರದ ಶಾಸಕ ಪನ್ನಾಲಾಲ್ ಶಾಕ್ಯಾ ಅವರ ಶಾಸಕರ ನಿಧಿಯಿಂದ ಅನುಮೋದಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೇ ಮಳೆಗಾಲದ ಅನಂತರ ರಸ್ತೆ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಅವರು ಸೂಚನೆಯನ್ನು ಕೂಡ ನೀಡಿದರು ಎನ್ನಲಾಗಿದೆ.