ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shankara Narayanan: ಮಗಳನ್ನು ಅತ್ಯಾಚಾರಗೈದು ಕೊಂದಿದ್ದ ಹಂತಕನನ್ನು ಹತ್ಯೆ ಮಾಡಿ ಸಂಚಲನ ಮೂಡಿಸಿದ್ದ ಶಂಕರನಾರಾಯಣನ್‌ ನಿಧನ

Shankara Narayanan: 2001 ಫೆಬ್ರವರಿ 9 ರಂದು ನಡೆದ ಈ ಸುದ್ದಿ ಕೇಳಿದ್ರೆ ಎಂಥವರಿಗೂ ಕರುಳು ಚುರುಕು ಎನ್ನುತ್ತದೆ, ಏನು ಅರಿಯದ, ಮುಂದೆ ಬಾಳಿ ಬದುಕಬೇಕಿದ್ದ ಶಂಕರನಾರಾಯಣರ ಪುತ್ರಿ ಕೃಷ್ಣಪ್ರಿಯ(13)ಳನ್ನು ಮುಹಮ್ಮದ್ ಕೋಯ ಎಂಬಾತ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಅತ್ಯಾಚಾರ ನಡೆಸಿ ಕೊಲೆಗೈದಿದ್ದನು. ಇದರಿಂದ ಹತಾಶೆಗೊಂಡ ತಂದೆ ಮಗಳ ಸಾವಿಗೆ ನ್ಯಾಯ ದೊರಕಿಸಲು ಕೊಲೆ ಪ್ರಕರಣದ ಆರೋಪಿಯನ್ನು ಕೊಂದಿದ್ದರು.

ಮಗಳ ಹಂತಕನನ್ನು ಕೊಂದ ತಂದೆ ಶಂಕರನಾರಾಯಣನ್‌ ಇನ್ನಿಲ್ಲ!

ಶಂಕರನಾರಾಯಣನ್

Profile Sushmitha Jain Apr 9, 2025 4:54 PM

ಮಲಪ್ಪುರಂ: ತನ್ನ 13 ವರ್ಷದ ಮಗಳನ್ನು ಅತ್ಯಾಚಾರ ಮಾಡಿ, ಕ್ರೂರವಾಗಿ ಕೊಲೆ(raping and murdering) ಮಾಡಿದ ಪಾಪಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಮಂಜೇರಿ‌ ನಿವಾಸಿ ಶಂಕರನಾರಾಯಣನ್(Shankara Narayanan) (75) ಇಹಲೋಕ ತ್ಯಜಿಸಿದ್ದಾರೆ. ಕೇರಳದಲ್ಲಿ ಕೃಷ್ಣಪ್ರಿಯ(krishnapriya)ಳ ತಂದೆ ಎಂದೇ ಖ್ಯಾತಿ ಪಡೆದಿದ್ದ ಮಲಪ್ಪುರಂ ಮಂಚೇರಿ ಚಾರಂಗಾವ್ ಚೆನೋಟುಕುನ್ನುವಿನ ಪೂವಂಚೇರಿ ತೇಕೆವೀಟಿಲ್ ಶಂಕರನಾರಾಯಣನ್ ವಯೋಸಹಜ ಕಾಯಿಲೆಂದ ಬಳಲುತ್ತಿದ್ದು, ಅವರು ಮಗಳ ನೆನಪಿನಲ್ಲಿಯೇ ಅಸುನೀಗಿದ್ದಾರೆ. ತಮ್ಮ ಹದಿಮೂರು ವರ್ಷದ ಮಗಳನ್ನು ನಿರ್ದಯಿಯಾಗಿ ಚಿತ್ರಿಸಿ ಹಿಂಸಿಸಿ ಕೊಂದವನಿಗೆ ಅಂತ್ಯ ಹಾಡಿ, ಮಗಳ ಸಾವಿಗೆ ನ್ಯಾಯ ದೊರಕಿಸಿದ್ದೇನೆ ಎಂಬ ತೃಪ್ತಿಯಲ್ಲಿಯೇ ಕೊನೆಯುಸಿರು ಎಳೆದಿದ್ದಾರೆ.

ಹೌದು 2001 ಫೆಬ್ರವರಿ 9 ರಂದು ನಡೆದ ಈ ಸುದ್ದಿ ಕೇಳಿದ್ರೆ ಎಂತವರಿಗೂ ಕರುಳು ಚುರುಕು ಎನ್ನುತ್ತದೆ, ಏನು ಅರಿಯದ, ಮುಂದೆ ಬಾಳಿ ಬದುಕಬೇಕಿದ್ದ ಶಂಕರನಾರಾಯಣರ ಪುತ್ರಿ ಕೃಷ್ಣಪ್ರಿಯ(13)ಳನ್ನು ಮುಹಮ್ಮದ್ ಕೋಯ ಎಂಬಾತ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಅತ್ಯಾಚಾರ ನಡೆಸಿ ಕೊಲೆಗೈದಿದ್ದನು.

ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿದ್ದ ಕೃಷ್ಣಪ್ರಿಯಾಳನ್ನು ಅಡ್ಡ ಹಾಕಿ, ರೇಪ್ ಮಾಡಿದ್ದ ಆರೋಪಿ ಅತ್ಯಾಚಾರಗೈದ ನಂತರ ಬರ್ಬರವಾಗಿ ಕೊಲಯಗೈದಿದ್ದನು. ಘಟನೆ ಬೆಳಕಿಗೆ ಬರುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು ಮುಹಮ್ಮದ್ ಕೋಯ ಎಡೆಮುರಿ ಕಟ್ಟಿದರು. ಸಾಕ್ಷ್ಯಾಧಾರಗಳನ್ನು ನೀಡಿ ಆರೋಪಿಗೆ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿತು. ಆದ್ರೆ ಕೃಷ್ಣಪ್ರಿಯಳನ್ನು ಕೊಂದಿದ್ದ ಮುಹಮ್ಮದ್ ಕೋಯಾ ಒಂದು ವರ್ಷದ ಒಳಗೆಯೇ ಅಂದ್ರೆ 2002 ಜುಲೈ 27 ರಂದು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾನೆ. ಇಲ್ಲಿಯೂ ನಮ್ಮ ನ್ಯಾಯಾಲಯದಿಂದ ಒಂದು ಹೆಣ್ಣುಮಗುವಿಗೆ ಮತ್ತೇ ಅನ್ಯಾಯ ಆಯಿತು ಎಂದುಕೊಳ್ಳುವಷ್ಟರಲ್ಲಿಯೇ ಶಂಕರನಾರಾಯಣರರು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡುತ್ತಾರೆ.

ಹೌದು ಇತ್ತ ಜೀವಕ್ಕೆ ಜೀವದಂತಿದ್ದ ಮಗಳನ್ನು ಕಳೆದುಕೊಂಡ ನೆನಪು ಮಾಸುವ ಮುನ್ನವೇ ಮುಹಮ್ಮದ್ ಬಿಡುಗಡೆಗೊಂಡಿದ್ದು, ಶಂಕರನಾರಾಯಣನ್ ಅವರನ್ನು ಕೆರಳಿಸಿತ್ತು. ತಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಬೇಕೆಂದು ಮುಹಮ್ಮದ್ ಅನ್ನು ಹತ್ಯೆ ಮಾಡಲು ಮುಂದಾಗುತ್ತಾರೆ. ಅಂದುಕೊಂಡಂತೆ ಮಹಮ್ಮದ್ ಕೋಯಾ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗೆ ಬರುತ್ತಿದ್ದಂತೆ ಗುಂಡಿಕ್ಕಿ ಕೊಲ್ಲುತ್ತಾರೆ.

2002 ಜುಲೈ 27 ರಂದು ಮಹಮ್ಮದ್ ಶವ ಪತ್ತೆಯಾಗುತ್ತದೆ. ಈ ಕೊಲೆಯನ್ನು ಶಂಕರನಾರಾಯಣ ಹಾಗೂ ಅವರ ಸಂಬಂಧಿಕರಾದ ಇಬ್ಬರು ಸೇರಿ ಮಾಡಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಂಕರನಾರಾಯಣ ಸೇರಿದಂತೆ ಮತ್ತಿಬ್ಬರನ್ನು ಬಂಧಿಸುತ್ತಾರೆ. ವಿಚಾರಣೆ ನಡೆಸಿದ ಕೇರಳದ ಮಂಚೇರಿ ಸೆಷನ್ಸ್ ನ್ಯಾಯಾಲಯವು ಶಂಕರನಾರಾಯಣನ್ ಮತ್ತು ಇತರ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುತ್ತದೆ.

ಈ ಸುದ್ದಿಯನ್ನು ಓದಿ: TTD: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ ನ್ಯೂಸ್! ವಾಟ್ಸಾಪ್‌ ಮೂಲಕವೇ ದರ್ಶನ ಟಿಕೆಟ್‌ ಬುಕಿಂಗ್‌

ಆದರೆ ಶಂಕರನಾರಾಯಣನ್ ಅವರು ಮಾಡಿದ್ದು ಕೊಲೆ ಅಲ್ಲ ತಮ್ಮ ಮಗಳ ಸಾವಿಗೆ ಒದಗಿಸಿದ ನ್ಯಾಯ ಎಂದು ದೇವರಿಗೂ ಅನ್ನಿಸಿರಬೇಕು. ಅದಕ್ಕೆ 2006 ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಹೈಕೋರ್ಟ್ ಶಂಕರನಾರಾಯಣನ್ ಅವರನ್ನು ಖುಲಾಸೆಗೊಳಿಸುತ್ತದೆ. ಅಲ್ಲದೇ ಮೃತದೇಹವನ್ನು ಮರಳಿ ಪಡೆಯುವಲ್ಲಿ ಪೊಲೀಸರು ವಿಫಲರಾಗಿದ್ದು, ಕ್ರಿಮಿನಲ್ ಹಿನ್ನೆಲೆಯುಳ್ಳ ಆರೋಪಿ ಮುಹಮ್ಮದ್ ಕೋಯಾಗೆ ಇತರ ಶತ್ರುಗಳಿಂದ ಕೊಲೆಯಾಗಿರಬಹುದು ಎಂದ ನ್ಯಾಯಾಲಯ ಅಂದು ಶಂಕರನಾರಾಯಣನ್ ಅವರನನ್ನು ಬಿಡುಗಡೆ ಮಾಡುತ್ತದೆ.

ಆದ್ರೆ ಕೃಷ್ಣಪ್ರಿಯಳನ್ನು ಕಳೆದುಕೊಂಡ ದಿನದಿಂದ ತಾವು ಕಣ್ಣು ಮುಚ್ಚುವವರೆಗೂ ಶಂಕರನಾರಾಯಣ ಅವರ ಪ್ರತಿ ದಿನವೂ ಕಣ್ಣೀರಿನಲ್ಲೇ ಕೈ ತೊಳಿದಿದ್ದು, ಸಾಯುವವರೆಗೂ ತನ್ನ ಮುದ್ದಿನ ಮಗಳು ಕೃಷ್ಣಪ್ರಿಯಳ ಬಗ್ಗೆಯೇ ಮಾತನಾಡುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ. ಸುಮಾರು ಇಪ್ಪತ್ತು ಮೂರು ವರ್ಷಗಳು ಕಳೆದರೂ ಈ ಘಟನೆಯನ್ನು ಕೇರಳದ ಜನರ ಮನಸ್ಸಲ್ಲಿ ಹಚ್ಚ ಅಳಿಯದಂತೆ ಉಳಿದಿದ್ದು, ಶಂಕರನಾರಾಯಣ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.