Operation Sindoor: ಆಪರೇಷನ್ ಸಿಂದೂರ್‌ನಲ್ಲಿ ಪ್ರತಿಧ್ವನಿಸಿದ ಶಿವ ತಾಂಡವ್ ಸ್ತೋತ್ರ ; ವಿಡಿಯೋ ನೋಡಿ
ಆಪರೇಷನ್ ಸಿಂದೂರ್ ಕುರಿತಾದ ಮಾಹಿತಿಯನ್ನು ನೀಡಲು ಭಾರತೀಯ ಸೇನೆ ಕರೆದಿದ್ದ ಪತ್ರಿಕಾಗೋಷ್ಠಿಯು ಶಿವ ತಾಂಡವ ಸ್ತೋತ್ರದ ಮೂಲಕ ಪ್ರಾರಂಭ ಮಾಡಲಾಗಿದೆ. ಲಂಕಾ ರಾಜ ರಾವಣನಿಂದ ರಚಿಸಲ್ಪಟ್ಟಿದೆ ಎಂದು ಹೇಳಲಾದ ಈ ಶ್ಲೋಕ ಶಿವನ ನೃತ್ಯವನ್ನು ಒಳಗೊಂಡಿದೆ.


ನವದೆಹಲಿ: ಆಪರೇಷನ್ ಸಿಂದೂರ್ (Operation Sindoor) ಕುರಿತಾದ ಮಾಹಿತಿಯನ್ನು ನೀಡಲು ಭಾರತೀಯ ಸೇನೆ ಕರೆದಿದ್ದ ಪತ್ರಿಕಾಗೋಷ್ಠಿಯು ಶಿವ ತಾಂಡವ ಸ್ತೋತ್ರದ (Shiv Tandav Stotram) ಮೂಲಕ ಪ್ರಾರಂಭ ಮಾಡಲಾಗಿದೆ. ಲಂಕಾ ರಾಜ ರಾವಣನಿಂದ ರಚಿಸಲ್ಪಟ್ಟಿದೆ ಎಂದು ಹೇಳಲಾದ ಈ ಶ್ಲೋಕ ಶಿವನ ನೃತ್ಯವನ್ನು ಒಳಗೊಂಡಿದೆ. ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಲೆಫ್ಟಿನೆಂಟ್ ಜನೆರಲ್ ರಾಜೀವ್ ಘಾಯ್ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಮೊದಲು ಈ ಸ್ತುತಿಗೀತೆಯನ್ನು ಹಾಕಲಾಯಿತು. ಶಿವ ತಾಂಡವ ಸ್ತೋತ್ರವು ಸೃಷ್ಟಿ ಮತ್ತು ವಿನಾಶ ಎರಡನ್ನೂ ನೃತ್ಯ ಮಾಡುವ ಶಿವನನ್ನು ಸ್ತುತಿಸುವ ಸ್ತೋತ್ರವಾಗಿದೆ. ಇದು ಜನರಿಗೆ ಶಕ್ತಿ, ಸಮತೋಲನ ಮತ್ತು ಉದ್ದೇಶವನ್ನು ನೆನಪಿಸುವ ಬಲವಾದ ಮತ್ತು ತೀವ್ರವಾದ ಪ್ರಾರ್ಥನೆಯಾಗಿದೆ.
ಈ ಸ್ತುತಿಗೀತೆ ನುಡಿಸುವಾಗ, ಹಳೆಯ ಯುದ್ಧಗಳಿಂದ ಹಿಡಿದು ಇತ್ತೀಚಿನ ಕಾರ್ಯಾಚರಣೆಗಳವರೆಗೆ ಭಾರತದ ಮಿಲಿಟರಿ ಶಕ್ತಿಯ ದೃಶ್ಯಗಳನ್ನು ವೀಡಿಯೊ ತೋರಿಸಿತು. ಪ್ರತಿಯೊಂದು ಕ್ಲಿಪ್ ಭಾರತೀಯ ಪಡೆಗಳ ಯೋಜನೆ ಮತ್ತು ಕೌಶಲ್ಯಗಳನ್ನು ತೋರಿಸಿತು. ಭಾರತವು ಶಾಂತಿಯುತವಾಗಿದೆ, ಆದರೆ ಅಗತ್ಯವಿದ್ದರೆ, ಅದು ದೃಢವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಸಂದೇಶವನ್ನು ಅದು ಜಗತ್ತಿಗೆ ನೀಡಿದೆ.
अविचल संकल्प, निर्णायक प्रतिकार।
— ADG PI - INDIAN ARMY (@adgpi) May 11, 2025
Unwavering Resolve,
Decisive Action.#OperationSindoor#JusticeServed#IndianArmy pic.twitter.com/R5oE173WIn
ಇದು ಕೇವಲ ಬಲವನ್ನು ಪ್ರದರ್ಶಿಸುವುದರ ಬಗ್ಗೆ ಅಲ್ಲ; ಭಾರತದ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಶಿಸ್ತು ಅದರ ಮಿಲಿಟರಿ ಶಕ್ತಿಯ ಭಾಗವಾಗಿದೆ ಎಂಬುದನ್ನು ಇಂದಿನ ಸಭೆಯಲ್ಲಿ ತೋರಿಸಲಾಗಿದೆ. ಮೇ 7 ರಂದು ಪಿಒಜೆಕೆ ಮತ್ತು ಇತರ ಪ್ರದೇಶಗಳಲ್ಲಿನ ಭಯೋತ್ಪಾದಕ ನೆಲೆಯನ್ನು ಗುರಿಯಾಗಿಸಿಕೊಂಡು ಭಾರತ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ನಡೆಸಿತ್ತು. ನಂತರ ಉಭಯ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಘರ್ಷದ ಸಮಯದಲ್ಲಿ ವಾಯು ರಕ್ಷಣಾ ವ್ಯವಸ್ಥೆಯಿಂದ ನಾಶವಾದ ಪಾಕಿಸ್ತಾನಿ ಮಿರಾಜ್ ಯುದ್ಧವಿಮಾನದ ಅವಶೇಷಗಳನ್ನು ಇಂದು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ ನಲ್ಲಿ DGMO ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾಹಿತಿ ನೀಡಿದರು.
ಈ ಸುದ್ದಿಯನ್ನೂ ಓದಿ: Operation Sindoor: ಪಾಕಿಸ್ತಾನದ ಕುತಂತ್ರ ಬಯಲು; ರಜೌರಿಯ ನಾಗರಿಕ ಪ್ರದೇಶದಲ್ಲಿ ಜೀವಂತ ಶೆಲ್ ಪತ್ತೆ
ವೀಡಿಯೊದ ಆರಂಭದಲ್ಲಿಯೇ, ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಮಿರಾಜ್ ಯುದ್ಧವಿಮಾನವು ತುಂಡು ತುಂಡಾಗಿರುವುದನ್ನು ಕಾಣಬಹುದು. ಏರ್ ಫೈನ್ಸ್ ಫೈಟರ್ ಮಿಸೈಲ್ ಬಳಸಿ ದಾಳಿ ಮಾಡಿದ್ದೇವೆ. ಸರ್ಫೇಸ್ ಟು ಸರ್ಫೇಸ್ ಟು ಮೂಲಕ ದಾಳಿ ಮಾಡಿದ್ದೇವೆ. ಪಾಕಿಸ್ತಾನ ಸೇನೆಯು ಉಗ್ರರಿಗೆ ಸಹಕಾರ ಮತ್ತು ನೆರವು ನೀಡುತ್ತಿದೆ, ಉಗ್ರರ ನೆಲೆಗಳನ್ನು ಹುಡುಕಿ ನಾವು ಹೊಡೆದಿದ್ದೇವೆ. ಭಾರತೀಯ ಸೇನೆಯ ಹೋರಾಟ ಉಗ್ರರ ವಿರುದ್ಧ ಮಾತ್ರ. ಚೀನಾದ ಪಿ ಎಲ್-15 ಮಿಸೆಲ್ ಬಳಸಿ ಪಾಕಿಸ್ತಾನ ದಾಳಿ ನಡೆಸಿತ್ತು. ಭಾರತದ ರೋಬೋಟ್ ಸಿಸ್ಟಮ್ ನಿಂದ ತಕ್ಕ ಪ್ರತ್ಯುತ್ತರ ನೀಡಿದ್ದು, ಚೀನಾ ನಿರ್ಮಿತ ಪಾಕಿಸ್ತಾನದ ಕ್ಷಿಪಣಿಯನ್ನು ಧ್ವಂಸಗೊಳಿಸಿದ್ದೇವೆ ಎಂದು ಸೇನೆ ಹೇಳಿದೆ.