ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಭಾರತದ ವಿರುದ್ಧ ಪಾಕಿಸ್ತಾನದಿಂದ ʻಆಪರೇಷನ್‌ ಬುನ್ಯಾನ್‌ ಉಲ್‌ ಮರ್ಸೂಸ್‌ʼ; ಮತ್ತೆ ಮಿಸೈಲ್‌ ಅಟ್ಯಾಕ್‌

Operation Bunyan ul Marsoos: ಭಾರತದ ಆಪರೇಷನ್‌ ಸಿಂದೂರ್‌ಗೆ ಪ್ರತಿಯಾಗಿ ಪಾಕಿಸ್ತಾನ ಕೂಡ ಆಪರೇಷನ್‌ ಬುನ್ಯಾನ್‌ ಉಲ್‌ ಮರ್ಸೂಸ್‌ ಎಂಬ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಜಮ್ಮು, ಪಂಜಾಬ್‌ ಗಡಿ ಪ್ರದೇಶದಲ್ಲಿ ದಾಳಿ ಮುಂದುವರಿಸಿದೆ. ಭದ್ರತಾ ಮೂಲಗಳ ಪ್ರಕಾರ ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್, ರಾವಲ್ಪಿಂಡಿ ಮತ್ತು ಲಾಹೋರ್ ಸೇರಿದಂತೆ ಪಾಕಿಸ್ತಾನಿ ನಗರಗಳನ್ನು ಗುರಿಯಾಗಿಸಿಕೊಂಡು ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡ ನಂತರ ಇದು ಸಂಭವಿಸಿದೆ.

ಭಾರತದ ವಿರುದ್ಧ ಪಾಕಿಸ್ತಾನದಿಂದ ʻಆಪರೇಷನ್‌ ಬುನ್ಯಾನ್‌ ಉಲ್‌ ಮರ್ಸೂಸ್‌ʼ

Profile Rakshita Karkera May 10, 2025 5:52 AM

ನವದೆಹಲಿ: ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ಕ್ಷಿಪಣಿ, ಡ್ರೋನ್‌ ದಾಳಿ ನಡೆಸಿ ಭಾರತ ತಿರುಗೇಟು ಕೊಟ್ಟರೂ ಸುಮ್ಮನೆ ಕೂರದ ಪಾಕಿಸ್ತಾನ ಮತ್ತೆ ಭಾರತ ಮೇಲೆ ದಾಳಿ(india-pak conflict) ನಡೆಸಿದೆ. ಭಾರತದ ಆಪರೇಷನ್‌ ಸಿಂದೂರ್‌ಗೆ ಪ್ರತಿಯಾಗಿ ಪಾಕಿಸ್ತಾನ ಕೂಡ ಆಪರೇಷನ್‌ ಬುನ್ಯಾನ್‌ ಉಲ್‌ ಮರ್ಸೂಸ್‌(Operation Bunyan ul Marsoos) ಎಂಬ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಜಮ್ಮು, ಪಂಜಾಬ್‌ ಗಡಿ ಪ್ರದೇಶದಲ್ಲಿ ದಾಳಿ ಮುಂದುವರಿಸಿದೆ. ಭದ್ರತಾ ಮೂಲಗಳ ಪ್ರಕಾರ ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್, ರಾವಲ್ಪಿಂಡಿ ಮತ್ತು ಲಾಹೋರ್ ಸೇರಿದಂತೆ ಪಾಕಿಸ್ತಾನಿ ನಗರಗಳನ್ನು ಗುರಿಯಾಗಿಸಿಕೊಂಡು ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವುದಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡ ನಂತರ ಇದು ಸಂಭವಿಸಿದೆ. ಪಂಜಾಬ್‌ನ ಸಿರ್ಸಾವನ್ನು ಗುರಿಯಾಗಿಸಿ ಪಾಕಿಸ್ತಾನ ಫತೇಹ್-2 ಕ್ಷಿಪಣಿ ದಾಳಿ ನಡೆಸಿದ್ದು, ಅದನ್ನು ಹೊಡೆದುರುಳಿಸುವಲ್ಲಿ ಭಾರತ ಯಶಸ್ವಿಯಾಗಿದೆ.

ಮತ್ತೊಂದೆಡೆ ಜಮ್ಮು ಮತ್ತು ಬಾರಾಮುಲ್ಲಾದಲ್ಲೂ ಸ್ಫೋಟಗಳು ವರದಿಯಾಗಿವೆ. ಉರಿ, ಪೂಂಚ್ ಮತ್ತು ಕರ್ನಾದಲ್ಲಿ ಭಾರೀ ಕದನ ವಿರಾಮ ಉಲ್ಲಂಘನೆಗಳು ನಡೆದಿವೆ ಎನ್ನಲಾಗಿದೆ. ಇನ್ನು ಪಾಕಿಸ್ತಾನದ ಸಿಂಧ್‌ನಲ್ಲಿರುವ ಸುಕ್ಕೂರ್ ವಿಮಾನ ನಿಲ್ದಾಣದ ಮೇಲೆ ಭಾರತ ದಾಳಿ ಮಾಡಿದ್ದು, ರಾವಲ್ಪಿಂಡಿಯಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ರಕ್ಷಣಾ ಮೂಲಗಳ ಪ್ರಕಾರ ಭಾರತ ಈಗ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸುಕ್ಕೂರ್ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದೆ. ಪಾಕಿಸ್ತಾನದ ಪ್ರಮುಖ ನಗರಗಳ ಮೇಲೆ ಭಾರತ ಡ್ರೋನ್ ದಾಳಿ ನಡೆಸುತ್ತಿದ್ದಂತೆ ರಾವಲ್ಪಿಂಡಿಯಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ: India-Pak Tensions: ಭಾರತದ ಕ್ಷಿಪಣಿ ದಾಳಿಗೆ ಪಾಕ್‌ನ ಮೂರು ವಾಯುನೆಲೆಗಳು ಧ್ವಂಸ!