Pak Air Space: ಭಾರತೀಯ ವಿಮಾನಗಳಿಗೆ ಪಾಕಿಸ್ತಾನದ ವಾಯುಪ್ರದೇಶ ನಿರ್ಬಂಧ ಆಗಸ್ಟ್ 24ರವರೆಗೆ ವಿಸ್ತರಣೆ
ಭಾರತೀಯ ವಿಮಾನಗಳಿಗೆ ಪಾಕಿಸ್ತಾನದ ವಾಯುಪ್ರದೇಶ ನಿರ್ಬಂಧವನ್ನು ಆಗಸ್ಟ್ 24ರವರೆಗೆ ವಿಸ್ತರಿಸಲಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಯಾವುದೇ ವಿಮಾನಗಳು, ಭಾರತದ ಒಡೆತನದಲ್ಲಿರುವ ಅಥವಾ ಗುತ್ತಿಗೆ ಪಡೆದಿರುವ ಮಿಲಿಟರಿ ಮತ್ತು ನಾಗರಿಕ ವಿಮಾನಗಳಿಗೆ ಆಗಸ್ಟ್ 24ರವರೆಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಅನುಮತಿಸಲಾಗುವುದಿಲ್ಲ ಎಂದು ಪಾಕಿಸ್ತಾನದ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಸಾಂದರ್ಭಿಕ ಚಿತ್ರ.

ಇಸ್ಲಾಮಾಬಾದ್: ಭಾರತೀಯ ವಿಮಾನಗಳಿಗೆ (Indian airlines) ಪಾಕಿಸ್ತಾನದ ವಾಯುಪ್ರದೇಶ (Pakistan air space) ನಿರ್ಬಂಧವನ್ನು ಆಗಸ್ಟ್ 24ರವರೆಗೆ ವಿಸ್ತರಿಸಲಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಯಾವುದೇ ವಿಮಾನಗಳು, ಭಾರತದ ಒಡೆತನದಲ್ಲಿರುವ ಅಥವಾ ಗುತ್ತಿಗೆ ಪಡೆದಿರುವ ಮಿಲಿಟರಿ ಮತ್ತು ನಾಗರಿಕ ವಿಮಾನಗಳಿಗೆ (Military and civilian flights) ಆಗಸ್ಟ್ 24ರವರೆಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಅನುಮತಿಸಲಾಗುವುದಿಲ್ಲ ಎಂದು ಪಾಕಿಸ್ತಾನದ ವಿಮಾನ ನಿಲ್ದಾಣ ಪ್ರಾಧಿಕಾರ (Pakistan Airports Authority) ತಿಳಿಸಿದೆ. ಈ ಕುರಿತು ಭಾರತೀಯ ವಾಯುಪಡೆಗೆ ಸೂಚನೆ ನೀಡಲಾಗಿದೆ.
ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದರಿಂದ ಭಾರತೀಯ ವಿಮಾನಗಳಿಗೆ ಪಾಕಿಸ್ತಾನದ ವಾಯುಪ್ರದೇಶ ಬಳಕೆಯನ್ನು ನಿರ್ಬಂಧಿಸಲಾಗಿತ್ತು. ಇದೀಗ ಈ ನಿರ್ಬಂಧ ಆಗಸ್ಟ್ 24ರವರೆಗೆ ವಿಸ್ತರಿಸಲಾಗಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಯಾವುದೇ ವಿಮಾನಗಳು, ಭಾರತದ ಒಡೆತನದಲ್ಲಿರುವ ಅಥವಾ ಗುತ್ತಿಗೆ ಪಡೆದಿರುವ ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಅನುಮತಿಸಲಾಗುವುದಿಲ್ಲ ಎಂದು ವಾಯುಪಡೆ ಸೂಚನೆ ತಿಳಿಸಿದೆ.
Pakistan has issued a new NOTAM extending its airspace ban on Indian flights until August 24, 2025, amid ongoing tensions from the April Pahalgam attack and May's Operation Sindoor strikes. This restricts routes, likely for military readiness. India reciprocates the ban.
— Grok (@grok) July 19, 2025
ಈ ಕುರಿತು ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ(PAA)ವು ಆದೇಶ ನೀಡಿದ್ದು, ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಆಗಸ್ಟ್ 24 ರವರೆಗೆ ಮುಚ್ಚಲಿದೆ ಎಂದು ಹೇಳಿದೆ.
ಭಾರತೀಯ ಸಮಯ ಶುಕ್ರವಾರ ಮಧ್ಯಾಹ್ನ 3.50ರಿಂದ ಇದು ಜಾರಿಗೆ ಬಂದಿದೆ. ನೋಟಾಮ್ (ವಾಯುಪಡೆ ಸೂಚನೆ) ಪ್ರಕಾರ, ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಯಾವುದೇ ವಿಮಾನಗಳು ಆಗಸ್ಟ್ 24 ರವರೆಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಅನುಮತಿಸಲಾಗುವುದಿಲ್ಲ. ಆಗಸ್ಟ್ 24 ರ ಬೆಳಗ್ಗೆ 5.19 ರವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ ಎಂದು ಪಿಎಎ ತಿಳಿಸಿದೆ.
ಇದನ್ನೂ ಓದಿ: Viral Video: ಸ್ಮಾರ್ಟ್‍ಫೋನ್ ಬಳಕೆದಾರರೇ ಎಚ್ಚರ; ಇಲ್ಲಿದೆ ನೋಡಿ ಒಂದು ಶಾಕಿಂಗ್ ಸುದ್ದಿ!
ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏಪ್ರಿಲ್ 22ರಂದು ನಾಲ್ಕೈದು ಮಂದಿ ಭಯೋತ್ಪಾದಕರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಸರ್ಕಾರವು ಭಯೋತ್ಪಾದಕರನ್ನು ಪೋಷಿಸುವ ಪಾಕಿಸ್ತಾನದ ವಿರುದ್ಧ ತೆಗೆದುಕೊಂಡ ಕ್ರಮಗಳ ಭಾಗವಾಗಿ ಏಪ್ರಿಲ್ 30ರಿಂದ ಜುಲೈ 24 ರವರೆಗೆ ಭಾರತದ ವಾಯುಪ್ರದೇಶವು ಎಲ್ಲ ಪಾಕಿಸ್ತಾನಿ ವಿಮಾನಗಳಿಗೆ ಮುಚ್ಚಲ್ಪಟ್ಟಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಕೂಡ ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತು ಮತ್ತು ಎರಡೂ ರಾಷ್ಟ್ರಗಳು ಟ್ಯಾಟ್-ಫಾರ್-ಟ್ಯಾಟ್ ನಿರ್ಬಂಧಗಳನ್ನು ಹಲವು ಬಾರಿ ವಿಸ್ತರಣೆ ಮಾಡಿವೆ.