ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Narendra Modi : ಗಿರ್‌ನಲ್ಲಿ ಪ್ರಧಾನಿ ಮೋದಿ ಲಯನ್‌ ಸಫಾರಿ; ಸಿಂಹಗಳ ಫೊಟೋ ಕ್ಲಿಕ್‌- ವಿಡಿಯೊ ಇದೆ

ವಿಶ್ವ ವನ್ಯಜೀವಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಿಗ್ಗೆ ಗುಜರಾತ್‌ನ ಜುನಾಗಢದ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಲಯನ್‌ ಸಫಾರಿ ಮಾಡಿದ್ದಾರೆ. ಈ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಗಿರ್‌ನಲ್ಲಿ ಪ್ರಧಾನಿ ಮೋದಿ ಲಯನ್‌ ಸಫಾರಿ! ವಿಡಿಯೊ ವೈರಲ್‌

ಲಯನ್‌ ಸಫಾರಿಯಲ್ಲಿ ಮೋದಿ

Profile Vishakha Bhat Mar 3, 2025 12:42 PM

ಗಾಂಧಿ ನಗರ: ವಿಶ್ವ ವನ್ಯಜೀವಿ ದಿನದ (World Wildlife Day) ಅಂಗವಾಗಿ ಪ್ರಧಾನಿ ನರೇಂದ್ರ (Narendra Modi) ಮೋದಿ ಸೋಮವಾರ ಬೆಳಿಗ್ಗೆ ಗುಜರಾತ್‌ನ ಜುನಾಗಢದ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಲಯನ್‌ ( Lion Safari ) ಸಫಾರಿಗೆ ಮಾಡಿದ್ದಾರೆ. ಜೀಪ್ ಸಫಾರಿಯ ಸಮಯದಲ್ಲಿ, ಅವರೊಂದಿಗೆ ಕೆಲವು ಸಚಿವರು ಮತ್ತು ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು. ಪ್ರಧಾನಿ ಸಿಂಹಗಳ ಫೋಟೋವನ್ನು ಸೆರೆ ಹಿಡಿದಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ವಿಶ್ವ ವನ್ಯ ಜೀವಿ ದಿನದ ಶುಭಾಶಯವನ್ನು ಕೋರಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು ಇಂದು ಬೆಳಿಗ್ಗೆ, ವಿಶ್ವ ವನ್ಯಜೀವಿ ದಿನದಂದು, ನಾನು ಗಿರ್‌ನಲ್ಲಿ ಸಫಾರಿಗೆ ತೆರಳಿದ್ದೆ, ಎಲ್ಲರಿಗೂ ತಿಳಿದಿರುವಂತೆ, ಗಿರ್‌ ಏಷ್ಯಾಟಿಕ್ ಸಿಂಹಗಳ ನೆಲೆಯಾಗಿದೆ. ಗಿರ್‌ಗೆ ಬಂದಿರುವುದು ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ನಾವು ಸಾಮೂಹಿಕವಾಗಿ ಮಾಡಿದ ಕೆಲಸದ ನೆನಪನ್ನು ತಂದಿದೆ ಎಂದು ಹೇಳಿದ್ದಾರೆ.



ಕಳೆದ ಹಲವು ವರ್ಷಗಳಲ್ಲಿ, ಏಷ್ಯಾಟಿಕ್ ಸಿಂಹಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಏಷ್ಯಾಟಿಕ್ ಸಿಂಹಗಳ ಆವಾಸಸ್ಥಾನವನ್ನು ಸಂರಕ್ಷಿಸುವಲ್ಲಿ ಬುಡಕಟ್ಟು ಸಮುದಾಯಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರ ಪಾತ್ರವೂ ಅಷ್ಟೇ ಶ್ಲಾಘನೀಯ" ಎಂದು ಅವರು ಹೇಳಿದರು. 2001 ರಿಂದ 2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ಸೇವೆ ಸಲ್ಲಿಸಿದ್ದರು.



ಇದಕ್ಕೂ ಮುನ್ನ, ವಿಶ್ವ ವನ್ಯಜೀವಿ ದಿನದ ಸಂದರ್ಭದಲ್ಲಿ "ನಮ್ಮ ಗ್ರಹದ ಅದ್ಭುತ ಜೀವವೈವಿಧ್ಯತೆಯನ್ನು ರಕ್ಷಿಸುವ ಮತ್ತು ಸಂರಕ್ಷಿಸುವ" ಬದ್ಧತೆಯನ್ನು ಅವರು ಪುನರುಚ್ಚರಿಸಿದ್ದಾರೆ. ಪ್ರತಿಯೊಂದು ಜೀವಿಯೂ ಪ್ರಮುಖ ಪಾತ್ರ ವಹಿಸುತ್ತದೆ -- ಮುಂದಿನ ಪೀಳಿಗೆಗೆ ಅವುಗಳ ಭವಿಷ್ಯವನ್ನು ಕಾಪಾಡೋಣ. ವನ್ಯಜೀವಿಗಳನ್ನು ಸಂರಕ್ಷಿಸುವ ಮತ್ತು ರಕ್ಷಿಸುವ ನಿಟ್ಟಿನಲ್ಲಿ ಭಾರತದ ಕೊಡುಗೆಗಳ ಬಗ್ಗೆ ನಮಗೆ ಹೆಮ್ಮೆ ಇದೆ" ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ. ಗಿರ್ ವನ್ಯಜೀವಿ ಅಭಯಾರಣ್ಯದ ಪ್ರಧಾನ ಕಛೇರಿಯಾದ ಸಸಾನ್ ಗಿರ್‌ನಲ್ಲಿ, ಅವರು ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) ಏಳನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯ ನಂತರ, ಅವರು ಸಸಾನ್‌ನಲ್ಲಿ ಕೆಲವು ಮಹಿಳಾ ಅರಣ್ಯ ಸಿಬ್ಬಂದಿಯೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ.



ಈ ಸುದ್ದಿಯನ್ನೂ ಓದಿ: Chhaava Movie: ‘ಛಾವಾ’ ಸಿನಿಮಾವನ್ನು ಮನಸಾರೆ ಹೊಗಳಿದ ನರೇಂದ್ರ ಮೋದಿ

ಗಿರ್‌ನಲ್ಲಿ ಪ್ರಾಜೆಕ್ಟ್ ಲಯನ್

ಏಷ್ಯಾಟಿಕ್ ಸಿಂಹಗಳ ಏಕೈಕ ತಾಣವಾದ ಗುಜರಾತ್‌ನಲ್ಲಿ ಸಿಂಹಗಳನ್ನು ರಕ್ಷಿಸಲು ಸರ್ಕಾರ ಪ್ರಾಜೆಕ್ಟ್ ಲಯನ್‌ನ್ನು ಜಾರಿಗೆ ತಂದಿದೆ. ಈ ಯೋಜನೆಯು - ಸಿಂಹಗಳ ಸಂತತಿಯನ್ನು ಹೆಚ್ಚಿಸಲು ಹಾಗೂ ಅವುಗಳಿಗೆ ಸರಿಯಾದ ನೆಲೆಯನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ. ಕೇಂದ್ರದ ಪ್ರಕಾರ, ಗುಜರಾತ್‌ನಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆ , 674 ಕ್ಕೆ ತಲುಪಿದೆ, ಇದು 2015 ರಲ್ಲಿ 523 ಮತ್ತು 2010 ರಲ್ಲಿ 411 ರಷ್ಟಿತ್ತು.