Ukraine-Russia War: 477 ಡ್ರೋನ್ಗಳು, 60 ಕ್ಷಿಪಣಿಗಳು, ಉಕ್ರೇನ್ ಮೇಲೆ ರಷ್ಯಾದ ಅತಿದೊಡ್ಡ ದಾಳಿ; ಎಫ್-16 ಪೈಲಟ್ ಸಾವು
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮೂರು ವರ್ಷಗಳು ಕಳೆದರೂ ಕೂಡ ನಿಂತಿಲ್ಲ. ಇದೀಗ ರಷ್ಯಾ ರಾತ್ರೋರಾತ್ರಿ ಉಕ್ರೇನ್ ವಿರುದ್ಧ ತನ್ನ ಅತಿದೊಡ್ಡ ವೈಮಾನಿಕ ದಾಳಿಯನ್ನು ನಡೆಸಿದೆ. ಇದರಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ನ ಅಧಿಕಾರಿಗಳು ತಿಳಿಸಿದ್ದಾರೆ.


ಕೈವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ (Ukraine-Russia War) ಮೂರು ವರ್ಷಗಳು ಕಳೆದರೂ ಕೂಡ ನಿಂತಿಲ್ಲ. ಇದೀಗ ರಷ್ಯಾ ರಾತ್ರೋರಾತ್ರಿ ಉಕ್ರೇನ್ ವಿರುದ್ಧ ತನ್ನ ಅತಿದೊಡ್ಡ ವೈಮಾನಿಕ ದಾಳಿಯನ್ನು ನಡೆಸಿದೆ. ಇದರಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ನ ಅಧಿಕಾರಿಗಳು ತಿಳಿಸಿದ್ದಾರೆ. 477 ಡ್ರೋನ್ಗಳು ಮತ್ತು ಡಿಕಾಯ್ಗಳು ಮತ್ತು 60 ಕ್ಷಿಪಣಿಗಳು ಸೇರಿದಂತೆ ಒಟ್ಟು 537 ವೈಮಾನಿಕ ಶಸ್ತ್ರಾಸ್ತ್ರಗಳನ್ನು ಉಕ್ರೇನ್ ಮೇಲೆ ಹಾರಿಸಿತು. ಇವುಗಳಲ್ಲಿ 249 ಅನ್ನು ಹೊಡೆದುರುಳಿಸಲಾಯಿತು ಮತ್ತು 226 ಶಸ್ತ್ರಾಸ್ತ್ರಗಳ ಸುಳಿವು ಸಿಕ್ಕಿಲ್ಲ. ಬಹುಶಃ ಎಲೆಕ್ಟ್ರಾನಿಕ್ ಜಾಮ್ ಆಗಿರಬಹುದು ಎಂದು ಉಕ್ರೇನಿಯನ್ ವಾಯುಪಡೆ ತಿಳಿಸಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಉಕ್ರೇನ್ನಾದ್ಯಂತ ಬಹುತೇಕ ರಾತ್ರಿಯಿಡೀ ವಾಯುದಾಳಿ ಎಚ್ಚರಿಕೆಗಳು ಕೇಳಿಬಂದವು ನಮ್ಮ ಆಕಾಶದಲ್ಲಿ 477 ಡ್ರೋನ್ಗಳು ಇದ್ದವು, ಅವುಗಳಲ್ಲಿ ಹೆಚ್ಚಿನವು ರಷ್ಯಾ-ಇರಾನಿಯನ್ ಶಹೆದ್ಗಳು, ಜೊತೆಗೆ ವಿವಿಧ ರೀತಿಯ 60 ಕ್ಷಿಪಣಿಗಳು ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಸ್ಮಿಲಾದಲ್ಲಿನ ವಸತಿ ಕಟ್ಟಡಕ್ಕೂ ಡಿಕ್ಕಿ ಹೊಡೆದಿದೆ ಮತ್ತು ಒಂದು ಮಗು ಗಾಯಗೊಂಡಿದೆ. ದೇಶದಲ್ಲಿ ಎಲ್ಲಾ ರೀತಿಯ ತುರ್ತು ಸೌಲಭ್ಯವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು.
ಈ ದಾಳಿಯಲ್ಲಿ ಉಕ್ರೇನ್ ತನ್ನ F-16 ಫೈಟರ್ ಜೆಟ್ ಹಾಗೂ ಪೈಲೆಟ್ ಅನ್ನು ಕಳೆದುಕೊಂಡಿದೆ. ಮೃತ ಪೈಲೆಟ್ ಕುಟುಂಬಕ್ಕೆ ಅಧ್ಯಕ್ಷ ಝೆಲೆನ್ಸ್ಕಿ ಸಂತಾಪ ಸೂಚಿಸಿದ್ದಾರೆ. ಉಕ್ರೇನಿಯನ್ ವಾಯುಯಾನವು ನಮ್ಮ ಆಕಾಶವನ್ನು ರಕ್ಷಿಸುತ್ತಿದೆ. ಉಕ್ರೇನ್ ಅನ್ನು ರಕ್ಷಿಸುತ್ತಿರುವ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ" ಎಂದು ಅವರು ಹೇಳಿದರು. ಕಳೆದ ವಾರವೊಂದರಲ್ಲೇ 114 ಕ್ಕೂ ಹೆಚ್ಚು ಕ್ಷಿಪಣಿಗಳು, 1,270 ಕ್ಕೂ ಹೆಚ್ಚು ಡ್ರೋನ್ಗಳು ಮತ್ತು ಸುಮಾರು 1,100 ಗ್ಲೈಡ್ ಬಾಂಬ್ಗಳು ದಾಳಿಯಾಗಿವೆ.
ಈ ಸುದ್ದಿಯನ್ನೂ ಓದಿ: Russia-Ukraine Conflict: ರಷ್ಯಾ-ಉಕ್ರೇನ್ ಮಧ್ಯೆ ಶಾಂತಿ ಮಾತುಕತೆ; ಸಮರ ಅಂತ್ಯಕ್ಕೆ ಕಾಲ ಸನ್ನಿಹಿತ?
ಉಕ್ರೇನ್ನ ವಾಯುಪಡೆಯ ಸಂವಹನ ಮುಖ್ಯಸ್ಥ ಯೂರಿ ಇಹ್ನಾತ್, ರಾತ್ರಿಯಿಡೀ ನಡೆದ ಈ ದಾಳಿಯು ದೇಶದ ಮೇಲೆ ನಡೆದ ‘ಅತಿದೊಡ್ಡ ವೈಮಾನಿಕ ದಾಳಿ’ ಎಂದು ಹೇಳಿದರು, ಇದರಲ್ಲಿ ಡ್ರೋನ್ಗಳು ಮತ್ತು ವಿವಿಧ ಕ್ಷಿಪಣಿಗಳು ಸೇರಿವೆ. ದಾಳಿಗಳು ಉಕ್ರೇನ್ನಾದ್ಯಂತ ಅನೇಕ ಸ್ಥಳಗಳನ್ನು ಹೊಡೆದವು, ಇದರಲ್ಲಿ ಮುಂಚೂಣಿಯಿಂದ ದೂರದಲ್ಲಿರುವ ಪಶ್ಚಿಮ ಪ್ರದೇಶಗಳು ಸೇರಿವೆ.