ನಿಮ್ಮೊಂದಿಗೆ ನಾನಿದ್ದೇನೆ: ಬಂಡಾಯ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ
ತೃಣಮೂಲ ಕಾಂಗ್ರೆಸ್ ಮತ್ತು ಉದ್ಭವ ಠಾಕ್ರೆ ಬಣದ ಬಂಡಾಯ ಸಂಸದರೊಂದಿಗೆ ತಮ್ಮ ಅಧಿಕೃತ ನಿವಾಸದಲ್ಲಿ ಭೋಜನ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅವರಿಗೆ ನಿಮ್ಮೊಂದಿಗೆ ನಾನಿದ್ದೇನೆ. ಯಾರೂ ಚಿಂತಿಸಬೇಕಿಲ್ಲ ಎಂದು ಭರವಸೆ ನೀಡಿದರು. ಮುಂಗಾರು ಅಧಿವೇಶನದಲ್ಲಿ ಶಾಸಕರ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಈ ಸಂವಾದ ನಡೆಯಿತು.
ಸಂಗ್ರಹ ಚಿತ್ರ -
ನವದೆಹಲಿ: ಸಂಸತ್ತು ಪ್ರಜಾಪ್ರಭುತ್ವದ ಸರ್ವೋಚ್ಚ ದೇವಾಲಯ. ಅಲ್ಲಿ ನಡೆಯುವ ಗದ್ದಲದಿಂದ ಹೊಸ ಸಂಸದರಿಗೆ ಸದನದಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ. ಇದರಿಂದ ಅವರಿಗೆ ಅನ್ಯಾಯವಾಗಿದೆ. ಸಂಸತ್ತಿನ ಕಲಾಪಗಳು (Parliament proceedings) ಸುಗಮವಾಗಿ ನಡೆಯಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು. ಮುಂಗಾರು ಅಧಿವೇಶನದಲ್ಲಿ ಶಾಸಕರ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ತಮ್ಮ ಅಧಿಕೃತ ನಿವಾಸದಲ್ಲಿ ಶುಕ್ರವಾರ ಭೋಜನ ಸಂವಾದ ನಡೆಸಿದ ಅವರು ಈ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ (Trinamool Rebels) ಮತ್ತು ಉದ್ಭವ ಠಾಕ್ರೆ ಬಣದ (Ex-Uddhav Sena MPs) ಬಂಡಾಯ ಸಂಸದರೊಂದಿಗೆ ಮಾತನಾಡಿ, ಯಾರೂ ಚಿಂತಿಸಬೇಕಿಲ್ಲ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ಸಂಸತ್ತಿನಲ್ಲಿ ನಡೆಯುತ್ತಿರುವ ಗದ್ದಲದ ನಡುವೆ ಚುನಾಯಿತ ಎನ್‌ಡಿಎ ಲೋಕಸಭಾ ಸಂಸದರೊಂದಿಗೆ ಉಪಾಹಾರ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲರೂ ಸಂಸತ್ತಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಒತ್ತಾಯಿಸಿದರು.
16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಭಾರತದಲ್ಲಿ ವಾಟ್ಸ್ಆ್ಯಪ್ ನಿಷೇಧ? ಮೆಟಾ ಹೇಳಿದ್ದೇನು?
ಸಂಸತ್ತಿನ ಇತಿಹಾಸವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಸಂಸತ್ತಿನಲ್ಲಿ ಐತಿಹಾಸಿಕ ಸಾಮಗ್ರಿಗಳ ಸಂಪತ್ತು ಇದೆ. ಚರ್ಚೆಗಳಿಗೆ ಸಿದ್ಧವಾಗಲು ಇದನ್ನು ಬಳಸಿಕೊಳ್ಳಿ. ರಾಜ್ಯಗಳ ಅಭಿವೃದ್ಧಿಗೆ ಶ್ರಮಿಸಿ. ರಾಜ್ಯಗಳು ಪ್ರಗತಿ ಸಾಧಿಸಿದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಉಪಹಾರ ಸಭೆಯಲ್ಲಿ ಎನ್‌ಡಿಎ ಘಟಕಗಳಾದ ನ್ಯಾಷನಲಿಸ್ಟ್ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ), ಶಿವಸೇನೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ), ರಾಷ್ಟ್ರೀಯ ಲೋಕ ಮೋರ್ಚಾ, ಎಐಎಡಿಎಂಕೆ ಮತ್ತು ಯುಪಿಪಿಎಲ್‌ನ 40 ಕ್ಕೂ ಹೆಚ್ಚು ಸಂಸದರು ಭಾಗವಹಿಸಿದ್ದರು.
ಕಳೆದ ಜೂನ್ ತಿಂಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತೊರೆದ 20 ಲೋಕಸಭಾ ಸದಸ್ಯರು ಎನ್‌ಸಿಪಿಐಗೆ ಸೇರಿದ್ದರೆ, ಆರು ಶಿವಸೇನೆ (ಯುಬಿಟಿ) ಸಂಸದರು ಆ ಪಕ್ಷವನ್ನು ತೊರೆದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಿದರು.ಎನ್‌ಸಿಪಿಐ ಎನ್‌ಡಿಎಗೆ ಸೇರಿದ್ದು, ಶಿವಸೇನೆ ಆಡಳಿತ ಮೈತ್ರಿಕೂಟದ ಒಂದು ಘಟಕವಾಗಿ ಮುಂದುವರೆದಿದೆ.
ಸಂಸದರೊಂದಿಗಿನ ಉಪಹಾರ ಸಭೆಯಲ್ಲಿ ಪಾಲ್ಗೊಂಡಿದ್ದ ತೃಣಮೂಲ ಕಾಂಗ್ರೆಸ್ ಮತ್ತು ಏಕನಾಥ್ ಶಿಂಧೆ ಸೇನೆಗೆ ಸೇರಿದ ಉದ್ಧವ್ ಠಾಕ್ರೆ ಬಣದ ಬಂಡಾಯ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾನು ಇದ್ದೇನೆ. ಚಿಂತಿಸಲು ಏನೂ ಇಲ್ಲ. ಎನ್‌ಡಿಎ ಒಂದು ಕುಟುಂಬ. ನಾವು ಎಲ್ಲಾ ಸಣ್ಣ ಪಕ್ಷಗಳೊಂದಿಗಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಗೂ ಗೌರವ ನೀಡಲಾಗುವುದು ಮತ್ತು ಅವಕಾಶ ನೀಡಲಾಗುವುದು. ಪ್ರತಿಯೊಬ್ಬ ಸಂಸದರೊಂದಿಗೆ ನಾನು ಇದ್ದೇನೆ. ಎನ್‌ಡಿಎಯ ಪ್ರತಿಯೊಬ್ಬ ಸಂಸದರೊಂದಿಗೂ ನಿಲ್ಲುತ್ತದೆ ಎಂದು ತಿಳಿಸಿದರು.
ಕ್ಷೇತ್ರಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಮುನ್ನಡೆಸಲು ತಮ್ಮ ಅಧಿಕಾರವನ್ನು ಪರಿಣಾಮಕಾರಿಯಾಗಿ ಬಳಸುವಂತೆ ಕರೆ ನೀಡಿದ ಅವರು, ನಿಮ್ಮ ಪ್ರದೇಶದ ಯಾವುದೇ ಅಭಿವೃದ್ಧಿ ಕಾರ್ಯಗಳಿಗಾಗಿ ಪ್ರಧಾನ ಮಂತ್ರಿ ಕಚೇರಿಯನ್ನು ನೇರವಾಗಿ ಸಂಪರ್ಕಿಸಿ. ಬಡ ಕಾರ್ಮಿಕರು ಮತ್ತು ರೈತರು ಸೇರಿದಂತೆ ಎಲ್ಲರನ್ನೂ ಭೇಟಿ ಮಾಡಿ ಮತ್ತು ಪ್ರತಿಯೊಬ್ಬರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಿ ಎಂದು ತಿಳಿಸಿದರು.
ಭಾರಿ ಮಳೆಗೆ ತತ್ತರಿಸಿದ ಕೇರಳಂ: ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್, ಶಾಲೆ-ಕಾಲೇಜುಗಳಿಗೆ ರಜೆ
ವಿರೋಧ ಪಕ್ಷದ ಸದಸ್ಯರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳುವಂತೆ ಸಂಸದರಿಗೆ ಸಲಹೆ ನೀಡಿದ ಪ್ರಧಾನಿ ಮೋದಿಯವರು ತಮ್ಮ ವೈಯಕ್ತಿಕ ಅನುಭವಗಳನ್ನು ಅವರೊಂದಿಗೆ ಹಂಚಿಕೊಂಡರು ಮತ್ತು ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದರು.