ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anokh Mittal: ಪಂಜಾಬ್‌ ಎಎಪಿ ನಾಯಕ ಮಿತ್ತಲ್‌ ಮೇಲೆ ದಾಳಿ: ಪತ್ನಿ ಬರ್ಬರ ಹತ್ಯೆ!

ಪಂಜಾಬ್‌ನ ಎಎಪಿ ನಾಯಕ ಅನೋಖ್ ಮಿತ್ತಲ್ ಅವರ ಮೇಲೆ ದರೋಡೆಕೋರರು ದಾಳಿ ಮಾಡಿದ್ದು, ಅವರ ಪತ್ನಿ ಲಿಪ್ಸಿ ಮಿತ್ತಲ್ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ. ಶನಿವಾರ(ಫೆ.15) ತಡರಾತ್ರಿ ದಂಪತಿಗಳು ಡೆಹ್ಲೋದಲ್ಲಿ ಊಟ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಪಂಜಾಬ್‌ ಎಎಪಿ ನಾಯಕ ಮಿತ್ತಲ್‌ ಪತ್ನಿಯನ್ನು ಹತ್ಯೆಗೈದ ದರೋಡೆಕೋರರು!

ಅನೋಖ್‌ ಮಿತ್ತಲ್‌ ದಂಪತಿ

Profile Deekshith Nair Feb 16, 2025 3:44 PM

ಛಂಡೀಗಢ: ಪಂಜಾಬ್‌ನ(Punjab) ಎಎಪಿ ನಾಯಕ ಅನೋಖ್ ಮಿತ್ತಲ್(Anokh Mittal) ಅವರ ಮೇಲೆ ದರೋಡೆಕೋರರು ದಾಳಿ ಮಾಡಿದ್ದು, ಅವರ ಪತ್ನಿ ಲಿಪ್ಸಿ ಮಿತ್ತಲ್(Lipsi Mittal) ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ. ಶನಿವಾರ(ಫೆ.15) ತಡರಾತ್ರಿ ದಂಪತಿಗಳು ಡೆಹ್ಲೋದಲ್ಲಿ ಊಟ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಸಿಧ್ವಾನ್ ಕಾಲುವೆ ಸೇತುವೆಯ ಬಳಿಯ ರುರ್ಕಾ ಗ್ರಾಮದ ಬಳಿ ಐವರು ದರೋಡೆಕೋರರು ಮಿತ್ತಲ್ ದಂಪತಿಯ ವಾಹನವನ್ನು ಅಡ್ಡಗಟ್ಟಿದ್ದು, ಹರಿತವಾದ ಆಯುಧಗಳಿಂದ ದಂಪತಿ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಮ್‌ ಆದ್ಮಿ ಪಕ್ಷದ ನಾಯಕ ಮತ್ತು ಉದ್ಯಮಿ ಅನೋಖ್ ಮಿತ್ತಲ್ ದಂಪತಿ ಮೇಲೆ ದಾಳಿ ನಡೆದಿದ್ದು, ಹಲ್ಲೆಗೊಳಗಾದ ಅವರ ಪತ್ನಿ ದಾರುಣವಾಗಿ ಮೃತಪಟ್ಟಿದ್ದಾರೆ. ಅನೋಖ್ ತಡೆಯಲು ಪ್ರಯತ್ನಿಸಿದಾಗ ಅವರ ಮೇಲೆ ತೀವ್ರ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಅವರು ಸದ್ಯ ಡಿಎಂಸಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿ ನಡೆಸಿದ ದುಷ್ಕರ್ಮಿಗಳು ಮಿತ್ತಲ್ ದಂಪತಿಯ ಕಾರು ಮತ್ತು ಇತರ ವಸ್ತುಗಳೊಂದಿಗೆ ಸ್ಥಳದಿಂದ ತಕ್ಷಣವೇ ಪರಾರಿಯಾಗಿದ್ದಾರೆ.



ನಾವು ಘಟನೆಯನ್ನು ಗಂಭೀರವಾಗಿ ಪರುಗಣಿಸಿ ತನಿಖೆ ನಡೆಸುತ್ತಿದ್ದೇವೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸಿದ್ಧ ಉದ್ಯಮಿ ಅನೋಖ್ ಮಿತ್ತಲ್, ಸುಮಾರು ನಾಲ್ಕು ತಿಂಗಳ ಹಿಂದೆ ಎಎಪಿಗೆ ಸೇರ್ಪಡೆಗೊಂಡಿದ್ದರು .

ಈ ಸುದ್ದಿಯನ್ನೂ ಓದಿ:New Delhi Stampede: ದೆಹಲಿ ಭೀಕರ ಕಾಲ್ತುಳಿತ ದುರಂತ: ಹರಿದಾಡಿದ ವಿಡಿಯೊ-ಮೋದಿ ಸೇರಿ ಹಲವು ನಾಯಕರ ಸಂತಾಪ!

ಪಂಜಾಬಿನ ಸ್ಥಳೀಯರು ಮತ್ತು ರಾಜಕೀಯ ನಾಯಕರು ಈ ಘಟನೆಯಿಂದಾಗಿ ಆತಂಕಗೊಂಡಿದ್ದಾರೆ.