ಕಿಚ್ಚು ಹಚ್ಚಿದ ರಾಹುಲ್ ಗಾಂಧಿಯ 'ಅಪ್ಪನ ತೊಡೆ ಮೇಲೆ ಅಮ್ಮ ಕೂರುತ್ತಿದ್ದರು' ಹೇಳಿಕೆ; 'ಸತ್ಯಂ ಶಿವಂ ಸುಂದರಂ' ಎಂದ ಕಾಂಗ್ರೆಸ್ ನಾಯಕನಿಗೆ ಬಿಜೆಪಿ ತಿರುಗೇಟು
Rahul Gandhi: “ನಮ್ಮ ಮನೆಯಲ್ಲಿ ಪ್ರತಿ ದಿನ ಊಟ ಮಾಡುವಾಗ ತಾಯಿ ಸೋನಿಯಾ ಗಾಂಧಿ ತಂದೆ ರಾಜೀವ್ ಗಾಂಧಿ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು'' ಎಂಬ ರಾಹುಲ್ ಗಾಂಧಿ ಹೇಳಿಕೆ ಸದ್ಯ ದೇಶಾದ್ಯಂತ ಕೋಲಾಹಲ ಎಬ್ಬಿಸಿದೆ. ಇದನ್ನು ಸಮರ್ಥಿಸಿಕೊಂಡ ಅವರಿಗೆ ಬಿಜೆಪಿ ತಿರುಗೇಟು ನೀಡಿದೆ.
-
ದೆಹಲಿ, ನ. 17: “ನಮ್ಮ ಮನೆಯಲ್ಲಿ ಪ್ರತಿ ದಿನ ಊಟ ಮಾಡುವಾಗ ತಾಯಿ ಸೋನಿಯಾ ಗಾಂಧಿ ತಂದೆ ರಾಜೀವ್ ಗಾಂಧಿ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಅವರ ನಡುವೆ ಅಷ್ಟು ಆಪ್ತ ಸಂಬಂಧ ಮತ್ತು ಪ್ರೀತಿಯಿತ್ತು. ಪ್ರತಿ ಮನೆಯಲ್ಲಿ ಇದು ಸಹಜ ಪ್ರತಿಕ್ರಿಯೆ ಅಂದುಕೊಂಡಿದ್ದೆ” ಎಂಬ ರಾಹುಲ್ ಗಾಂಧಿ ಹೇಳಿಕೆ ಸದ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಚರ್ಚೆ ಹುಟ್ಟು ಹಾಕಿದೆ. ಹೀಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ಧಂತೆ ರಾಹುಲ್ ಗಾಂಧಿ ಶಿವನ ತೊಡೆ ಮೇಲೆ ಪಾರ್ವತಿ ಕುಳಿತಿರುವ ಹಳೆಯ ಕಲಾಶಿಲ್ಪವೊಂದರ ಫೋಟೊ ಪೋಸ್ಟ್ ಮಾಡಿ ʼಸತ್ಯಂ ಶಿವಂ ಸುಂದರಂʼ ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಬಿಜೆಪಿ ತಿರುಗೇಟು ನೀಡಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಇದೀಗ ರಂಗಕ್ಕಿಳಿದಿದ್ದು, ಶಿವ ಪಾರ್ವತಿಯ ವಿಗ್ರಹವನ್ನು ಬಳಸಿಕೊಂಡ ರಾಹುಲ್ ಗಾಂಧಿ ನಡೆಯನ್ನು ಟೀಕಿಸಿದ್ದಾರೆ. ಮನುಷ್ಯನನ್ನು ದೇವರಿಗೆ ದೇವರಿಗೆ ಸಾಧ್ಯವಿಲ್ಲ ಎಂದು ಹೇಳಿದ ಅವರು, ರಾಹುಲ್ ಗಾಂಧಿ ಅಹಂಕಾರಿ ಎಂದು ಆರೋಪಿಸಿದ್ದಾರೆ.
ಹಿಮಂತ ಬಿಸ್ವಾ ಶರ್ಮ ಎಕ್ಸ್ ಪೋಸ್ಟ್:
A person's decline accelerates the moment they stop standing before God and start posing as one. To portray mortals as Shiv and Parvati is not devotion. It is entitlement grown so arrogant that it believes itself divine. No Gandhi, indeed no human being, can ever become God. We bow before our Bhagwan. We do not equate ourselves with Him. Humility is the foundation of greatness. When arrogance takes its place, the fall has already begun.
— Himanta Biswa Sarma (@himantabiswa) November 17, 2026
ಹಿಮಂತ ಬಿಸ್ವಾ ಶರ್ಮ ಹೇಳಿದ್ದೇನು?
"ಸಾಮಾನ್ಯ ಮನುಷ್ಯರನ್ನು ಶಿವ ಮತ್ತು ಪಾರ್ವತಿಯಂತೆ ಬಿಂಬಿಸುವುದು ಭಕ್ತಿಯಲ್ಲ. ಇದು ಅಹಂಕಾರದಿಂದ ಕೂಡಿದ ವರ್ತನೆಯಾಗಿದ್ದು, ತಾವೇ ದೇವರು ಎಂದು ನಂಬುವ ಮಟ್ಟಕ್ಕೆ ತಲುಪಿದೆ. ಗಾಂಧಿಯಾಗಲಿ ಅಥವಾ ಬೇರೆ ಯಾವುದೇ ಮನುಷ್ಯನಾಗಲಿ ಎಂದಿಗೂ ದೇವರಾಗಲು ಸಾಧ್ಯವಿಲ್ಲ" ಎಂದು ಶರ್ಮ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. "ನಾವು ಭಗವಂತನ ಮುಂದೆ ತಲೆಬಾಗುತ್ತೇವೆ. ನಾವು ನಮ್ಮನ್ನು ಆತನಿಗೆ ಸಮಾನವೆಂದು ಭಾವಿಸುವುದಿಲ್ಲ. ವಿನಯವೇ ಶ್ರೇಷ್ಠತೆಯ ಅಡಿಪಾಯ. ಯಾವಾಗ ಅಹಂಕಾರವು ಆ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತದೆಯೋ ಆಗ ಪತನವು ಪ್ರಾರಂಭವಾಗುತ್ತದೆ" ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಪೋಸ್ಟ್:
ರಾಹುಲ್ ಗಾಂಧಿ ಹೇಳಿದ್ದೆನು?
ದೆಹಲಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ʼಬಿಲಾಂಗಿಂಗ್: ಎ ಜರ್ನಿ ಆಫ್ ಲವ್ʼ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ತಮ್ಮ ಪೋಷಕರ ನಡುವೆ ಇದ್ದ ಆತ್ಮೀಯ ಸಂಬಂಧವನ್ನು ಬಹಿರಂಗಪಡಿಸಿದ್ದರು. ʼʼನಾನು ಇದನ್ನು ಬೇರೆ ಮನೆಯಲ್ಲಿ ನೋಡಿರಲಿಲ್ಲ. ಪ್ರತಿ ಸಲ ಊಟ ಮಾಡುವಾಗ ತಂದೆಯ ಮಡಿಲಲ್ಲಿ ತಾಯಿ ಕೂರುತ್ತಿದ್ದರು. ಇದು ಸಹಜ ಪ್ರಕ್ರಿಯೆ ಅಂದುಕೊಂಡಿದ್ದೆ. ಆದರೆ ಸ್ನೇಹಿತನ ಮನೆಗೆ ತೆರಳಿದಾಗ ಆತನ ತಂದೆ-ತಾಯಿ ಪ್ರತ್ಯೇಕ ಕೂತಿದ್ದರು. ಈ ಬಗ್ಗೆ ಸ್ನೇಹಿತನನ್ನು ಪ್ರಶ್ನಿಸಿದ್ದೆʼʼ ಎಂದು ಹೇಳಿದ್ದರು.
ಸೋನಿಯಾ-ರಾಜೀವ್ ಮೊದಲ ಬಾರಿ ಭೇಟಿಯಾಗಿದ್ದ ರೆಸ್ಟೋರೆಂಟ್ಗೆ ಗರ್ಲ್ಫ್ರೆಂಡ್ ಜೊತೆ ಹೋಗಿದ್ದ ರಾಹುಲ್!
ಈ ಹೇಳಿಕೆ ಟ್ರೋಲ್ಗೆ ಆಹಾರವಾದ ಬಳಿಕ ಎಕ್ಸ್ನಲ್ಲಿ ರಾಹುಲ್ ಗಾಂಧಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ಶಿವ ಪಾರ್ವತಿಯ ಉದಾಹರಣೆ ಕೊಟ್ಟು, “ಭಯ, ಕೋಪ ಮತ್ತು ದ್ವೇಷಗಳು ಬಿಜೆಪಿ ಮತ್ತು ಆರ್ಎಸ್ಎಸ್ ಬೆಂಬಲಿಗರ ಹೃದಯದಲ್ಲಿ ಬಲೆಯೊಂದನ್ನು ಹೆಣೆದಿದ್ದು, ಅದು ಅವರನ್ನು ಪ್ರೀತಿಯನ್ನು ಅನುಭವಿಸುವುದರಿಂದ ಮತ್ತು ವ್ಯಕ್ತಪಡಿಸುವುದರಿಂದ ತಡೆಯುತ್ತಿದೆ. ಒಬ್ಬ ನಿಜವಾದ ಹಿಂದುವಾಗಿ, ಅವರನ್ನು ಈ ಬಲೆಯಿಂದ ಮುಕ್ತಗೊಳಿಸುವುದು ನನ್ನ ಕರ್ತವ್ಯ. ಆ ಮೂಲಕ ಅವರೂ ಸಹ ತಮ್ಮ ಜೀವನದಲ್ಲಿ ಪ್ರೀತಿ ಮತ್ತು ಸಂಬಂಧದ ಅಪೂರ್ವ ಆನಂದವನ್ನು ಅನುಭವಿಸಲು ಸಹಾಯಕವಾಗಬಹುದು. ʼಸತ್ಯಂ ಶಿವಂ ಸುಂದರಂʼʼ ಎಂಬುದಾಗಿ ತಿಳಿಸಿದ್ದಾರೆ.