Waqf Amendment Bill: ವಿಚಾರ ಏನಂತ ಕೇಳಿದ್ರೆ ತಲೆ ಕೆರ್ಕೊಂಡ್ರು; ವಕ್ಫ್ ಪ್ರತಿಭಟನಾಕಾರರ ವಿಡಿಯೋ ವೈರಲ್
ವಕ್ಫ್ ತಿದ್ದುಪಡಿ ಮಸೂದೆ 2024 ರ ವಿರುದ್ಧ ಬೃಹತ್ ಪ್ರತಿಭಟನೆಗಾಗಿ ಅಖಿಲ ಭಾರತ ಮುಸ್ಲಿಂ ವಯಕ್ತಿಕ ಕಾನೂನು ಮಂಡಳಿ ಭಾರೀ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಹಲವು ಜನರಿಗೆ ತಾವು ಯಾಕೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂಬುದರ ಪರಿವೇ ಇರಲಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) -2024 ರ ವಿರುದ್ಧ ಬೃಹತ್ ಪ್ರತಿಭಟನೆಗಾಗಿ ಅಖಿಲ ಭಾರತ ಮುಸ್ಲಿಂ ವಯಕ್ತಿಕ ಕಾನೂನು ಮಂಡಳಿ ಭಾರೀ ಪ್ರತಿಭಟನೆ ನಡೆಸುತ್ತಿದೆ. ದೇಶಾದ್ಯಂತ ಪ್ರತಿಭಟನೆಗಳ ಮೂಲಕ ಮಸೂದೆಯ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಮುಸ್ಲಿಂ ವಯಕ್ತಿಕ ಕಾನೂನು ಮಂಡಳಿ ಪ್ರತಿಜ್ಞೆ ಮಾಡಿದೆ. ಪ್ರತಿಭಟನಾಕಾರರು ಸರ್ಕಾರವು ಮಸೂದೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ. ಕಾಂಗ್ರೆಸ್, ಸಮಾಜವಾದಿ ಪಕ್ಷ, ಎಎಪಿ, ಎಐಎಂಐಎಂ, ಸಿಪಿಐ, ಸಿಪಿಐ(ಎಂಎಲ್), ಸಿಪಿಎಂ, ಐಯುಎಂಎಲ್, ಎನ್‌ಸಿಪಿ, ಟಿಎಂಸಿ, ಬಿಜೆಡಿ ಮತ್ತು ಡಬ್ಲ್ಯೂಪಿಐ ಸೇರಿದಂತೆ ವಿರೋಧ ಪಕ್ಷದ ಸಂಸದರ ವಿಶಾಲ ಒಕ್ಕೂಟವು ಪ್ರತಿಭಟನೆಯಲ್ಲಿ ಭಾಗವಹಿಸಿ, ವಕ್ಫ್ ತಿದ್ದುಪಡಿ ಮಸೂದೆಯನ್ನು ಬಲವಾಗಿ ತಿರಸ್ಕರಿಸಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಹಲವು ಜನರಿಗೆ ತಾವು ಯಾಕೆ ಪ್ರತಿಭಟನೆ ನಡೆಸುತ್ತಿದ್ದೇವೆ ಎಂಬುದರ ಪರಿವೇ ಇರಲಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಟೀಕಿಸುತ್ತಿದ್ದಾರೆ. ಮಾಧ್ಯಮವೊಂದರ ವರದಿಗಾರರೊಬ್ಬರು ಪ್ರತಿಭಟನಾ ನಿರತರ ಬಳಿ ಹೋಗಿ ನೀವು ಯಾವುದರ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಪ್ರತಿಭಟನಾಕಾರು ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧದ ಬೋರ್ಡ್‌ಗಳನ್ನು ಹಿಡಿದು ಕೊಂಡಿದ್ದರು.
WAQF protesters at Jantar Mantar in Delhi attacked a journalist for asking questions that they were unable to answer.
— Priti Gandhi (@MrsGandhi) March 17, 2025
It is so evident that they are absolutely clueless about the matter!!#WaqfAmendmentBill pic.twitter.com/IN0HTvJR2I
ವರದಿಗಾರ ಕೇಳಿದ ಪ್ರಶ್ನೆಗೆ ಹೆಚ್ಚಿನವರು ಕಕ್ಕಾಬಿಕ್ಕಿಯಾಗಿರುವುದು ಕಂಡು ಬಂದಿದೆ. ನಮಗೆ ಗೊತ್ತಿಲ್ಲ. ಇದಕ್ಕೆ ನಮ್ಮ ಹಿರಿಯರು ಉತ್ತರಿಸುತ್ತಾರೆ ಎಂದು ಹಲವರು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಈ ಜನರಿಗೆ ಪ್ರತಿಭಟನೆ ಯಾಕೆ ಮಾಡುತ್ತಿದ್ದೇವೆ ಎಂಬುದೇ ಗೊತ್ತಿಲ್ಲ ಆದರೂ ಕುರಿ ಮಂದೆ ತರ ರೀತಿಯಲ್ಲಿ ಹೋಗುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಈ ಪ್ರತಿಭಟನಾಕಾರರಿಗೆ ಒಂದು ಪ್ಲೇಟ್ ಬಿರಿಯಾನಿ ಕೊಡಿ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Waqf Amendment Bill: ವಕ್ಫ್ ತಿದ್ದುಪಡಿ ಮಸೂದೆ; ಇದು ಹೊಸ ಆರಂಭ ಎಂದ ಮುಸ್ಲಿಂ ಮಂಚ್
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಒವೈಸಿ ಮಾತನಾಡಿ, ವಕ್ಫ್ ಆಸ್ತಿಯನ್ನು ರಕ್ಷಿಸುವುದು ಈ ಕಾಯಿದೆಯ ಉದ್ದೇಶವಲ್ಲ ಬದಲಾಗಿ ಮಂದಿರ ಮಸೀದಿಗಾಗಿ ಜನರ ನಡುವೆ ಗಲಭೆ ಸೃಷ್ಠಿಸಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶ ಎಂದು ಹೇಳಿದ್ದಾರೆ.