ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಣರಾಜ್ಯೋತ್ಸವ 2026: ಎಲ್ಲರ ಗಮನಸೆಳೆದ ಪ್ರಧಾನಿ ಮೋದಿ ಧರಿಸಿದ ಪೇಟ, ಇದರ ವಿಶೇಷತೆ ಏನು ಗೊತ್ತಾ?

Republic Day 2026: ಈ ವರ್ಷ ಭಾರತವು 77ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ ಪೇಟ ಎಲ್ಲರ ಗಮನ ಸೆಳೆದಿದೆ. ಪ್ರತಿವರ್ಷ ವಿಭಿನ್ನ ಬಣ್ಣ ಮತ್ತು ವಿನ್ಯಾಸದ ಪಾಗ್ಡಿ ಅಥವಾ ಸಫಾ ಧರಿಸುವ ಮೂಲಕ ಅವರು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ವೈವಿಧ್ಯತೆಯನ್ನು ಮೌನವಾಗಿ ಪ್ರತಿಬಿಂಬಿಸುತ್ತಿದ್ದಾರೆ.

ಎಲ್ಲರ ಗಮನಸೆಳೆದ ಪ್ರಧಾನಿ ಮೋದಿ ಧರಿಸಿದ ಪೇಟ

ಎಲ್ಲರ ಗಮನಸೆಳೆದ ಪ್ರಧಾನಿ ಮೋದಿ ಧರಿಸಿದ ಪೇಟ -

Priyanka P
Priyanka P Jan 26, 2026 2:48 PM

ನವದೆಹಲಿ: ಈ ವರ್ಷ ಭಾರತವು 77ನೇ ಗಣರಾಜ್ಯೋತ್ಸವವನ್ನು (77th Republic Day) ಆಚರಿಸುತ್ತಿದೆ. ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಪೇಟದತ್ತ ಎಲ್ಲರ ಚಿತ್ತ ನೆಟ್ಟಿದೆ. ಪ್ರತಿವರ್ಷ ವಿಭಿನ್ನ ಬಣ್ಣ ಮತ್ತು ವಿನ್ಯಾಸದ ಪಾಗ್ಡಿ ಅಥವಾ ಸಫಾ ಧರಿಸುವ ಮೂಲಕ, ಅವರು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯತೆಯನ್ನು ಮೌನವಾಗಿ ಪ್ರತಿಬಿಂಬಿಸುತ್ತಿದ್ದಾರೆ. ಈ ಮೂಲಕ ಗಣರಾಜ್ಯೋತ್ಸವದ ಆಚರಣೆಗೆ ವಿಶೇಷ ಅರ್ಥವನ್ನು ನೀಡುತ್ತಿದ್ದಾರೆ.

ಸೋಮವಾರ, ಜನವರಿ 26, 2026 ರಂದು, ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವ ವೇಳೆ ಕೆಂಪು ಬಣ್ಣದ ಟೈ-ಡೈ ಪಾಗ್ಡಿಯನ್ನು ಧರಿಸಿದ್ದರು. ಚಿನ್ನದ ಬಣ್ಣ ಹಾಗೂ ಕೆಂಪು ಬಣ್ಣದ ಟೈ-ಡೈ ಪಾಗ್ಡಿಯು ರಾಜಸ್ಥಾನಿ ಶೈಲಿಯಲ್ಲಿದೆ. ಇದನ್ನು ರೇಷ್ಮೆಯಿಂದ ತಯಾರಿಸಿರುವ ಸಾಧ್ಯತೆ ಇದೆ. ಇದು ಜರಿ (ಲೋಹದ ನೂಲಿನ ನೇಯ್ಗೆ) ಹೊಂದಿದ ರೇಷ್ಮೆ ಬ್ರೊಕೇಡ್ ಬಟ್ಟೆಯಾಗಿದ್ದು, ಚಿನ್ನದ ವಿನ್ಯಾಸಗಳು ನೇಯ್ದಂತಿವೆ. ಇಂತಹ ಪಾಗ್ಡಿಗಳು ಜೋಧಪುರಿ ಸಫಾ ಸೇರಿದಂತೆ ವಿವಿಧ ಶೈಲಿಗಳಲ್ಲಿ ಲಭ್ಯವಿದೆ. ಇದು ಸಾಂಪ್ರದಾಯಿಕ ಕರಕುಶಲತೆ ಮತ್ತು ಆಧುನಿಕ ಶೈಲಿಯ ಮಿಶ್ರಣವನ್ನು ನೀಡುತ್ತದೆ.

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮೋದಿ ಭೇಟಿ, ಕರ್ತವ್ಯಪಥದಲ್ಲಿ ಭಾರತದ ಸೇನಾ ಶಕ್ತಿ ಪ್ರದರ್ಶನ ಶುರು

ನೀಲಿ ಮತ್ತು ಬಿಳಿ ಕುರ್ತಾ-ಪೈಜಾಮ ಮತ್ತು ತಿಳಿ ನೀಲಿ ಬಣ್ಣದ ಅರ್ಧ ಜಾಕೆಟ್‌ ಧರಿಸಿದ್ದ ಪ್ರಧಾನಿ ಮೋದಿ ಅವರು ಅದರೊಂದಿಗೆ ಈ ಪಗ್ಡಿಯನ್ನು ಧರಿಸಿದ್ದರು. ಈ ಹಿಂದಿನ ಗಣರಾಜ್ಯೋತ್ಸವಗಳಲ್ಲಿ, ಪ್ರಧಾನಿ ಮೋದಿಯವರು ಪಗ್ಡಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಕೆಲವರಿಂದ ಆಸಕ್ತಿ ಮತ್ತು ಟೀಕೆ ಕೂಡ ವ್ಯಕ್ತವಾಗಿತ್ತು.

76ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಅವರು ಕೆಂಪು ಮತ್ತು ಹಳದಿ ಬಣ್ಣದ ಬಂದೇಜ್ ಸಫಾ ಧರಿಸಿದ್ದರು. ರಾಜಸ್ಥಾನಿ ಮತ್ತು ಗುಜರಾತಿ ಸಂಪ್ರದಾಯದಲ್ಲಿ ಬೇರೂರಿರುವ ಟೈ-ಡೈ ಜವಳಿ ಇದಾಗಿದ್ದು, ಬಿಳಿ ಕುರ್ತಾ-ಪೈಜಾಮ ಮತ್ತು ಕಂದು ಬಣ್ಣದ ಬಂಧ್ ಗಾಲಾ ಜಾಕೆಟ್ ಜೊತೆಗೆ ಇದನ್ನು ಧರಿಸಿದ್ದರು. ಈ ಬಣ್ಣಗಳು ‘ಸ್ವರ್ಣೀಮ್ ಭಾರತ್ - ವಿರಾಸತ್ ಔರ್ ವಿಕಾಸ್’ ಎಂಬ ರಾಷ್ಟ್ರೀಯ ಥೀಮ್‌ನೊಂದಿಗೆ ಪ್ರತಿಧ್ವನಿಸಿತ್ತು. ಇದು ದೇಶದ ಶ್ರೀಮಂತ ಪರಂಪರೆಯನ್ನು ಸಂಕೇತಿಸಿತ್ತು.

ಪ್ರಧಾನಿ ಮೋದಿ ಧರಿಸುವ ಅಂತಹ ಶಿರಸ್ತ್ರಾಣ (ಪೇಟ) ಗಳ ಆಯ್ಕೆಗಳು ಉದ್ದೇಶಪೂರ್ವಕವಾಗಿರುತ್ತವೆ. ಪ್ರತಿ ವರ್ಷ, ವಿಭಿನ್ನ ಬಣ್ಣಗಳು, ಮಾದರಿಗಳು ಮತ್ತು ಪ್ರಾದೇಶಿಕ ಶೈಲಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ ಭಾರತದ ವೈವಿಧ್ಯಮಯ ಜವಳಿ ಸಂಪ್ರದಾಯಗಳಿಗೆ ನಮನ ಸಲ್ಲಿಸುತ್ತದೆ. ಈ ಹಿಂದಿನ ವರ್ಷಗಳಲ್ಲಿ, ಪ್ರಧಾನಿ ಮೋದಿ ಅವರು ಬಹು-ಬಣ್ಣದ ಬಂಧನಿ ಪ್ರಿಂಟ್ಸ್, ಉತ್ತರಾಖಂಡ-ಪ್ರೇರಿತ ಕ್ಯಾಪ್‌ಗಳು ಅಥವಾ ರಾಜಸ್ಥಾನಿ ಫೆಟಾ-ಶೈಲಿಯ ಶಿರಸ್ತ್ರಾಣಗಳನ್ನು ಆಯ್ಕೆ ಮಾಡಿದ್ದಾರೆ.

2014ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ ನಡೆದ ಮೊದಲ ಗಣರಾಜ್ಯೋತ್ಸವ ಆಚರಣೆಗಳೊಂದಿಗೆ ಗಣರಾಜ್ಯೋತ್ಸವದ ಪಗ್ಡಿ ಪರಂಪರೆ ಆರಂಭವಾಯಿತು. ಅಂದಿನಿಂದಲೇ ಇದು ವಿಧಿವಿಧಾನದ ಶ್ರೇಷ್ಠತೆಯ ಜೊತೆಗೆ ಸಾಂಸ್ಕೃತಿಕ ಗುರುತನ್ನು ಬೆರೆಸುವ ಪ್ರತೀಕಾತ್ಮಕ ಅಂಶವಾಗಿ ಮುಂದುವರಿದಿದೆ. ಪ್ರತಿ ವಿಭಿನ್ನ ಪಗ್ಡಿ ವಿನ್ಯಾಸವೂ ಏಕತೆಯಲ್ಲಿ ವೈವಿಧ್ಯತೆ ಎಂಬ ಭಾರತದ ಕನಸನ್ನು ಪ್ರತಿಬಿಂಬಿಸುತ್ತದೆ.

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ‘ವಂದೇ ಮಾತರಂ’ ನಮ್ಮ ರಾಷ್ಟ್ರೀಯ ಗೀತೆಯ 150 ವರ್ಷಗಳು ಎಂಬ ವಿಷಯದ ಆಧಾರದ ಮೇಲೆ ನಡೆಯುವ ಗಣರಾಜ್ಯೋತ್ಸವ ಆಚರಣೆಗಳನ್ನು ವೀಕ್ಷಿಸಲು ಕರ್ತವ್ಯ ಪಥಕ್ಕೆ ಆಗಮಿಸಿದರು.