Summer Fashion, Beauty: ಸಮ್ಮರ್‌ನಲ್ಲಿ ವೈಬ್ರೆಂಟ್ ಕಲರ್ಸ್ ಹಂಗಾಮ
ಬೇಸಿಗೆ ಕಾಲಿಡುತ್ತಿದ್ದಂತೆಯೇ ವೈಬ್ರೆಂಟ್ ಕಲರ್ಸ್ ಹಂಗಾಮ ಹೆಚ್ಚಾಗುತ್ತದೆ. ಅದು ಫ್ಯಾಷನ್‌ವೇರ್‌ಗಳಲ್ಲಾಗಬಹುದು, ಪ್ರಯೋಗಾತ್ಮಕ ಮೇಕಪ್‌ನಲ್ಲಾಗಬಹುದು. ಒಟ್ಟಾರೆ, ವೈಬ್ರೆಂಟ್ ಲುಕ್ ಈ ಸೀಸನ್‌ನಲ್ಲಿ ಎಲ್ಲೆಡೆ ತನ್ನ ಜಾದೂ ಮೂಡಿಸುತ್ತಿದೆ. ವೈಬ್ರೆಂಟ್ ಕಲರ್ಸ್‌ನಲ್ಲಿ ಹೇಗೆ ಟ್ರೆಂಡಿಯಾಗಿ ಕಾಣಿಸಿಕೊಳ್ಳಬಹುದು ಎನ್ನುವ ವಿವರ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ನಲ್ಲಿ ಫ್ಯಾಷನ್ ಹಾಗೂ ಬ್ಯೂಟಿ ಲೋಕದಲ್ಲಿ (Summer Fashion & Beauty) ವೈಬ್ರೆಂಟ್ ಕಲರ್ಸ್ ಹಂಗಾಮ ತುಸು ಹೆಚ್ಚಾಗಿಯೇ ಇದೆ. ಇಂಗ್ಲೀಷ್ ಕಲರ್‌ಗಳ ಜತೆಗೆ ಇದೀಗ ಮಿಕ್ಸ್ ಮ್ಯಾಚ್ ಅಪ್ಷನ್‌ನಲ್ಲಿ ಕಾಣಿಸಿಕೊಂಡಿರುವ ಈ ವೈಬ್ರೆಂಟ್ ಶೇಡ್‌ಗಳು, ಪಾರ್ಟಿ ಎಂದು ಸದಾ ಬ್ಯುಸಿಯಾಗಿರುವ ಹುಡುಗಿಯರ ಸಖತ್ ಹಾಟ್ ಫೇವರಿಟ್‌ನಲ್ಲೊಂದಾಗಿವೆ. ಇಂಗ್ಲೀಷ್ ಕಲರ್ಸ್ ಮಾರ್ಡನ್ ಹುಡುಗಿಯರ ಫೆವರೇಟ್ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಅವರ ಪ್ರಕಾರ, ವೈಬ್ರೆಂಟ್ ಕಲರ್ಸ್ ಲುಕ್ ಜತೆ ಇಮೇಜ್ ಬದಲಿಸುತ್ತವಂತೆ.

ವೈಬ್ರೆಂಟ್ ಮೇಕಪ್ ಕಲರ್ಸ್
ಈಗಾಗಲೇ ಇಂಟರ್‌ನ್ಯಾಷನಲ್ ಫ್ಯಾಷನ್ ಪ್ರಪಂಚದಲ್ಲಿ ಹಂಗಾಮ ಎಬ್ಬಿಸಿರುವ ಈ ಕಲರ್‌ಗಳು, ಬಾಲಿವುಡ್‌ಗೂ ಕಾಲಿಟ್ಟಿದ್ದು, ಸದ್ಯಕ್ಕೆ ಹೈಟೆಕ್ ಹುಡುಗಿಯರ ಕ್ರೇಜಿ ಮೇಕಪ್ ಕಿಟ್ ಸೇರಿದೆ ಎನ್ನುವ ಇಂಟರ್‌ನ್ಯಾಷನಲ್ ಬ್ಯೂಟಿ ಎಕ್ಸ್‌ಪರ್ಟ್ ಹೀನಾ ಪ್ರಕಾರ, ಐಟಿ ಸಿಟಿಯ ಹಾಟ್ ಸಮ್ಮರ್ ಫ್ಯಾಷನ್ ಟ್ರೆಂಡ್‌ಗೆ ಎಂಟ್ರಿ ಕೊಟ್ಟಿವೆಯಂತೆ. ಇವೆಲ್ಲಾ ಫ್ಯಾಷನಬಲ್ ಲಿಪ್-ನೈಲ್-ಐ ಶ್ಯಾಡೋ ಟ್ರೆಂಡಿ ಕಲರ್ಸ್. ಹೌದು. ಉಗುರು ಬಣ್ಣ ಮಾತ್ರವಲ್ಲ. ಐ-ಶ್ಯಾಡೋ, ಲಿಪ್‌ಸ್ಟಿಕ್ ಎಲ್ಲವೂ ಈ ಬಣ್ಣಗಳಲ್ಲಿ ಶೈನಿಂಗ್ ಶೇಡ್‌ಗಳಲ್ಲಿ ದೊರೆಯುತ್ತಿವೆಯಂತೆ.

ಫ್ಯಾಷನ್ ಲೋಕದ ಮಾಡೆಲ್‌ಗಳ ಫೇವರೆಟ್
ಇಂದು ನೀವು ಯಾವುದೇ ಫ್ಯಾಷನ್ ಶೋ ನೋಡಿದರೂ ಕೂಡ ವೈಬ್ರೆಂಟ್ ಕಲರ್ಸ್‌ನ ಝಲಕ್ ಎದ್ದು ಕಾಣುತ್ತಿರುತ್ತದೆ. ಫ್ಯಾಷನ್ ಶೋಗಳು ಈ ಕಲರ್ಸ್‌ನ ಫ್ಯಾಷನ್‌ವೇರ್ಸ್ ಇಲ್ಲದೇ ನಡೆಯುವುದೇ ಅಪರೂಪ ಎನ್ನುತ್ತಾರೆ ಫ್ಯಾಷನಿಸ್ಟಾ ದೇವಯಾನಿ. ಅವರು ಹೇಳುವಂತೆ, ಇತ್ತೀಚೆಗಷ್ಟೇ ಉದ್ಯಾನನಗರಿಯ ಮಾಡೆಲ್‌ಗಳ ಫೇವರಿಟ್ ಲಿಸ್ಟ್‌ನಲ್ಲಿದ್ದ ಈ ಹಾಟ್ ಫ್ಯಾಷನ್ ಸದ್ಯದಲ್ಲೆ ಸ್ಯಾಂಡಲ್‌ವುಡ್ ತಾರೆಯರ ಮೇಕಪ್ ಲಿಸ್ಟ್‌ಗೂ ಸೇರಿದರೂ ಸೇರಬಹುದು. ನಿಮ್ಮ ಪರ್ಸ್‌ನಲ್ಲೂ ಜಾಗ ಗಿಟ್ಟಿಸಬಹುದು ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Fashion News: ಪ್ರಸಾದ್ ಬಿದ್ದಪ್ಪ ಶೋನಲ್ಲಿ ಯುವ ನಟ ಸಮರ್ಜಿತ್, ಆರಾಧನಾ ರ‍್ಯಾಂಪ್ ವಾಕ್

ವೈಬ್ರೆಂಟ್ ಕಲರ್ಸ್ ಟ್ರೈ ಮಾಡಿ ನೋಡಿ
* ನೇಲ್ ಆರ್ಟ್‌ನಲ್ಲಿಯೂ ಬಳಸಬಹುದು.
* ಲಿಪ್ ಶೇಡ್‌ನಲ್ಲಿ ಮಿಕ್ಸ್ ಮಾಡಿ.
* ಐ ಲೈನರ್ಸ್‌ನಲ್ಲಿ ಲೈನ್ ನೀಡಿ.
* ಐ ಶ್ಯಾಡೋಗಳಲ್ಲೂ ಮ್ಯಾಚ್ ಮಾಡಿ.
* ಮೇಕಪ್‌ನಲ್ಲಿ ಮ್ಯಾಚ್ ಆದಲ್ಲಿ ಓಕೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)