Supreme Court: ಯೂಟ್ಯೂಬರ್ ಅಲ್ಹಾಬಾದಿಯಾ ಕೇಸ್ ಬೆನ್ನಲ್ಲೇ ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಇಂಡಿಯಾಸ್ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದಲ್ಲಿ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ಅವರಿಗೆ ಮಂಗಳವಾರ(ಫೆ.18) ಮಧ್ಯಂತರ ಜಾಮೀನು ಮಂಜೂರು ಮಾಡಿದ ಸುಪ್ರೀಂಕೋರ್ಟ್ ಅವರ ಹೇಳಿಕೆಗಳನ್ನು ಟೀಕಿಸಿದೆ. ಅವರ ಮನಸ್ಸಿನಲ್ಲಿ ಕೊಳಕು ತುಂಬಿದೆ ಎಂದು ಜಾಡಿಸಿದೆ. ಈ ಮಧ್ಯೆ ಸುಪ್ರೀಂ ಕೋರ್ಟ್ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಅಶ್ಲೀಲ ವಿಷಯದ ಕುರಿತು ಕೇಂದ್ರದ ಪ್ರತಿಕ್ರಿಯೆ ಕೇಳಿದೆ.

ಭಾರತದ ಸುಪ್ರೀಂ ಕೋರ್ಟ್

ಮುಂಬೈ: ಇಂಡಿಯಾಸ್ ಗಾಟ್ ಲ್ಯಾಟೆಂಟ್(India's got latent) ಕಾರ್ಯಕ್ರಮದಲ್ಲಿ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ(Ranveer Allahabadia) ವಿರುದ್ಧ ಭಾರೀ ವಿವಾದ ಭುಗಿಲೆದ್ದಿದೆ. ಇಂದು ಅಲ್ಲಾಬಾದಿಯಾ ಕೇಸ್ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಅಶ್ಲೀಲ ಕಂಟೆಂಟ್‌ಗಳ ಕುರಿತು ಸುಪ್ರೀಂ ಕೇಂದ್ರದ ಪ್ರತಿಕ್ರಿಯೆ ಕೇಳಿದೆ. ಅಲ್ಲದೇ ಇಂತಹ ಕಂಟೆಂಟ್‌ಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಾಗಿದೆ ಎಂದು ಪ್ರಶ್ನಿಸಿದೆ.ಆಕ್ಷೇಪಾರ್ಹ ಹೇಳಿಕೆ ಮೂಲಕ ಕಾನೂನು ಸಂಕಷ್ಟು ಎದುರಿಸುತ್ತಿರುವ ಅಲ್ಹಾಬಾದಿಯಾ ಬಂಧನದಿಂಧ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆದಿದೆ.
ಅವರ ಅರ್ಜಿ ಪುರಸ್ಕರಿಸಿದ ಸುಪ್ರೀಂಕೋರ್ಟ್(Supreme Court) ಅವರ ಹೇಳಿಕೆಗಳನ್ನು ತೀವ್ರವಾಗಿ ಟೀಕಿಸಿದೆ. ಅಲ್ಲದೇ ಅಂತಹ ನಡವಳಿಕೆಯನ್ನು ಖಂಡಿಸಬೇಕು ಎಂದು ಹೇಳಿದ್ದು,ಅವರ ಮನಸ್ಸಿನಲ್ಲಿ ಕೊಳಕು ತುಂಬಿದೆ ಎಂದು ಜಾಡಿಸಿದೆ. ಈ ಮಧ್ಯೆ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಅಶ್ಲೀಲ ಕಂಟೆಂಟ್‌ಗಳ ಕುರಿತು ಸುಪ್ರೀಂ ಕೇಂದ್ರದ ಪ್ರತಿಕ್ರಿಯೆ ಕೇಳಿದೆ.
Supreme Court expresses displeasure on the remarks Of YouTuber and podcaster Ranveer Allahabadia during his guest appearance on a show India’s Got Latent. Supreme Court asks the lawyer representing Allahabadia what are the parameters of obscenity and vulgarity. pic.twitter.com/cJ77IEkFPG
— ANI (@ANI) February 18, 2025
ಯೂಟ್ಯೂಬರ್ಸ್ ರಣವೀರ್‌ನನ್ನು ಜಾಡಿಸಿದ ಸುಪ್ರೀಂ
ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ಅಶ್ಲೀಲ ಹೇಳಿಕೆ ನೀಡಿ ಕಾನೂನು ಸಂಕಷ್ಟ ಎದುರಿಸುತ್ತಿರುವ ಯೂಟ್ಯೂಬರ್ ರಣ್‌ವೀರ್ ಅಲ್ಹಾಬಾದಿಯಾಗೆ ಸುಪ್ರೀಂ ಕೋರ್ಟ್ ಹಿಗ್ಗಾಮುಗ್ಗಾ ಜಾಡಿಸಿದೆ. ಅಲ್ಹಾಬಾದಿಯಾ ವಿರುದ್ಧ ದಾಖಲಾಗಿರುವ ಹಲವು ಪ್ರಕರಣಗಳಲ್ಲಿ ಬಂಧನ ತಡೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ನ ದ್ವಿ ಸದಸ್ಯ ಪೀಠ, ಇದು ನಾಚಿಕೆಗೇಡಿನ ಸಂಗತಿ ಎಂದಿದೆ. ರಣ್‌ವೀರ್ ಅಲ್ಹಾಬಾದಿಯಾ ಹೇಳಿಕೆ ನಿಜಕ್ಕೂ ಖಂಡನೀಯ. ಅವರ ಹೇಳಿಕೆ ಪೋಷಕರಿಗೆ ಮಾಡಿ ಅಪಮಾನ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ಸುದ್ದಿಯನ್ನೂ ಓದಿ:Ranveer Allahbadia: ಇಂಡಿಯಾಸ್ ಗಾಟ್ ಲೇಟೆಂಟ್ ವಿವಾದ: ಸುಪ್ರೀಂ ಕೋರ್ಟ್ ಇಂದು ರಣವೀರ್ ಅಲ್ಲಾಬಾಡಿಯಾ ಅರ್ಜಿ ವಿಚಾರಣೆ
ಸಮಾಜದ ಮೌಲ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ? ಮನಸ್ಸಿನ ಕೊಳಕನ್ನು ಶೋದಲ್ಲಿ ಪ್ರಸ್ತುತ ಪಡಿಸಲಾಗಿದೆ. ಸಮಾಜಕ್ಕೆ ಕೆಲವು ಸ್ವಯಂ-ವಿಕಸಿತ ಮೌಲ್ಯಗಳಿವೆ. ನೀವು ಅವುಗಳನ್ನು ಗೌರವಿಸಬೇಕು. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ, ಸಮಾಜದ ನಿಯಮಗಳಿಗೆ ವಿರುದ್ಧವಾಗಿ ಯಾರಿಗೂ ಏನು ಬೇಕಾದರೂ ಮಾತನಾಡಲು ಪರವಾನಗಿ ಇಲ್ಲ. ನೀವು ಬಳಸಿದ ಪದಗಳು ಹೆಣ್ಣುಮಕ್ಕಳು, ಸಹೋದರಿಯರು, ಪೋಷಕರು ಮತ್ತು ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಇದು ಅಶ್ಲೀಲವಲ್ಲದಿದ್ದರೆ ಮತ್ತೇನು? ನಾವು ನಿಮ್ಮ ವಿರುದ್ಧ ಎಫ್‌ಐಆರ್‌ಗಳನ್ನು ಏಕೆ ರದ್ದುಗೊಳಿಸಬೇಕು? ಎಂದು ಕೋರ್ಟ್ ಖಾರವಾಗಿಯೇ ಪ್ರಶ್ನಿಸಿದೆ.