Swaraj Kaushal: ಸುಷ್ಮಾ ಸ್ವರಾಜ್ ಪತಿ, ಮಿಜೋರಾಂ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್ ನಿಧನ
ಹಿರಿಯ ವಕೀಲ, ಮಿಜೋರಾಂ ಮಾಜಿ ರಾಜ್ಯಪಾಲ ಹಾಗೂ ಬಿಜೆಪಿಯ ಹಿರಿಯ ನಾಯಕಿ, ಮಾಜಿ ಕೆಂದ್ರ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ಅ ವರ ಪತಿ ಸ್ವರಾಜ್ ಕೌಶಲ್ ಡಿ. 4ರಂದು ನಿಧನರಾಗಿದ್ದಾರೆ. ತಂದೆಯ ನಿಧನಕ್ಕೆ ಎಕ್ಸ್ ಖಾತೆಯಲ್ಲಿ ಬರಹದ ಮೂಲಕ ಕಂಬನಿ ಮಿಡಿದಿರುವ ಬಾನ್ಸುರಿ ಸ್ವರಾಜ್, ‘ʼಪಪ್ಪ ಸ್ವರಾಜ್ ಕೌಶಲ್ ಜೀ, ನಿಮ್ಮ ಮಮತೆ, ನಿಮ್ಮ ಶಿಸ್ತು, ನಿಮ್ಮ ಸರಳತೆ, ನಿಮ್ಮ ದೇಶಭಕ್ತಿ ಮತ್ತು ನಿಮ್ಮ ಸೀಮಾತೀತ ತಾಳ್ಮೆಯ ಗುಣ, ಇವೆಲ್ಲವೂ ನನ್ನ ಜೀವನದ ಬೆಳಕಾಗಿದೆ ಮತ್ತು ಈ ಬೆಳಕು ಯಾವತ್ತಿಗೂ ಮಂಕಾಗದುʼ’ ಎಂದು ಬರೆದುಕೊಂಡಿದ್ದಾರೆ.
ಸ್ವರಾಜ್ ಕೌಶಲ್ ಮತ್ತು ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ) -
ನವದೆಹಲಿ, ಡಿ. 4: ಹಿರಿಯ ವಕೀಲ, ಮಿಜೋರಾಂನ ಮಾಜಿ ರಾಜ್ಯಪಾಲ (Former Mizoram Governor) ಹಾಗೂ ಬಿಜೆಪಿಯ ಹಿರಿಯ ನಾಯಕಿ, ಮಾಜಿ ಕೆಂದ್ರ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ (Sushma Swaraj) ಅವರ ಪತಿ ಸ್ವರಾಜ್ ಕೌಶಲ್ (Swaraj Kaushal) ಡಿ. 4ರಂದು ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಸ್ವರಾಜ್ ಕೌಶಲ್ ಅವರ ನಿಧನದ ಸುದ್ದಿಯನ್ನು ಅವರ ಪುತ್ರಿ ಹಾಗೂ ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ತಂದೆಯ ನಿಧನಕ್ಕೆ ತನ್ನ ಎಕ್ಸ್ ಖಾತೆಯಲ್ಲಿ ಬರಹದ ಮೂಲಕ ಕಂಬನಿ ಮಿಡಿದಿರುವ ಬಾನ್ಸುರಿ ಸ್ವರಾಜ್, ‘ʼಪಪ್ಪ ಸ್ವರಾಜ್ ಕೌಶಲ್ ಜೀ, ನಿಮ್ಮ ಮಮತೆ, ನಿಮ್ಮ ಶಿಸ್ತು, ನಿಮ್ಮ ಸರಳತೆ, ನಿಮ್ಮ ದೇಶಭಕ್ತಿ ಮತ್ತು ನಿಮ್ಮ ಸೀಮಾತೀತ ತಾಳ್ಮೆಯ ಗುಣ, ಇವೆಲ್ಲವೂ ನನ್ನ ಜೀವನದ ಬೆಳಕಾಗಿದೆ ಮತ್ತು ಈ ಬೆಳಕು ಯಾವತ್ತಿಗೂ ಮಂಕಾಗದುʼ’ ಎಂದು ಕಂಬನಿ ಮಿಡಿದಿದ್ದಾರೆ.
ʼ‘ನಿಮ್ಮ ಅಗಲುವಿಕೆಯು ನನ್ನ ಹೃದಯದಲ್ಲಿ ಆಳವಾದ ನೋವನ್ನುಂಟು ಮಾಡಿದೆ. ಆದರೆ, ಇದೀಗ ನೀವು ದೇವರ ಸಮ್ಮುಖದಲ್ಲಿ, ಶಾಶ್ವತ ಶಾಂತಿಯ ಜಾಗದಲ್ಲಿ, ನನ್ನ ತಾಯಿಯೊಂದಿಗೆ ಸೇರಿಕೊಂಡಿದ್ದೀರಿ ಎಂಬ ನಂಬಿಕೆ ನನ್ನ ಮನಸ್ಸಿನಲ್ಲಿ ಬಲವಾಗಿ ನೆಟ್ಟಿದೆʼʼ ಎಂದು ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಸ್ವರಾಜ್ ಕೌಶಲ್ ನಿದನಕ್ಕೆ ಕಂಬನಿ ಮಿಡಿದ ಪ್ರದಾನಿ ಮೋದಿ:
Pained by the passing of Shri Swaraj Kaushal Ji. He distinguished himself as a lawyer and a person who believed in using the legal profession to improve the lives of the underprivileged. He became India’s youngest Governor and left a lasting impression on the people of Mizoram…
— Narendra Modi (@narendramodi) December 4, 2025
ʼʼನಿಮ್ಮ ಮಗಳಾಗಿ ಹುಟ್ಟಿರುವುದು ನನ್ನ ಜೀವನದಲ್ಲಿ ಅತ್ಯಂತ ಗೌರವದ ವಿಷಯ. ನಿಮ್ಮ ಪರಂಪರೆ, ನಿಮ್ಮ ಮೌಲ್ಯಗಳಯ ಮತ್ತು ನಿಮ್ಮ ಆಶೀರ್ವಾದ ನನ್ನ ಮುಂದಿನ ಜೀವನಕ್ಕೆ ಗಟ್ಟಿ ಅಡಿಪಾಯʼʼ ಎಂದು ಬಾನ್ಸುರಿ ಕೌಶಲ್ ಹೇಳಿಕೊಂಡಿದ್ದಾರೆ.
ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಶ್ರೀಪ್ರಕಾಶ್ ಜೈಸ್ವಾಲ್ ನಿಧನ
ಕೌಶಲ್ ಅವರ ನಿಧನಕ್ಕೆ ರಾಜಕಿಯ ರಂಗದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಸ್ವರಾಜ್ ಅವರ ಮೃತದೇಹದ ಅಂತಿಮ ಸಂಸ್ಕಾರವು ಲೋಧಿ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಗುರುವಾರ ಸಾಯಂಕಾಲ ನೆರವೇರಿತು.
ಸ್ವರಾಜ್ ಕೌಶಲ್ 1952, ಜುಲೈ 12ರಂದು ಜನಿಸಿದರು. ವೃತ್ತಿಯಲ್ಲಿ ಹೆಸರಾಂತ ಕ್ರಿಮಿನಲ್ ಲಾಯರ್ ಆಗಿದ್ದ ಕೌಶಲ್ ತಮ್ಮ ಶಿಕ್ಷಣವನ್ನು ದೆಹಲಿ ಮತ್ತು ಚಂಡೀಗಢದಲ್ಲಿ ಪೂರೈಸಿದರು. 1990ರಿಂದ 1993ರವರೆಗೆ ಅವರು ಮಿಜೋರಾಂನ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಇಷ್ಟು ಮಾತ್ರವಲ್ಲದೆ ಕೌಶಲ್ 1998ರಿಂದ 2004ರವರೆಗೆ ಹರಿಯಾಣ ವಿಕಾಸ ಪಕ್ಷವನ್ನು ಪ್ರತಿನಿಧಿಸಿ ಸಂಸದರಾಗಿದ್ದರು. ಮಾತ್ರವಲ್ಲದೇ 1998-99 ಮತ್ತು 2000-2004ರವರೆಗೆ ರಾಜ್ಯ ಸಭಾ ಸದಸ್ಯರಾಗಿದ್ದರು.
ಸ್ವರಾಜ್ ಕೌಶಲ್ ಮತ್ತು ಸುಷ್ಮಾ ಸ್ವರಾಜ್ ಅವರ ವಿವಾಹ 1975ರಲ್ಲಿ ನಡೆಯಿತು. ಬಾನ್ಸುರಿ ಸ್ವರಾಜ್ ಇವರ ಏಕಮಾತ್ರ ಪುತ್ರಿ. ಬಾನ್ಸುರಿ ನವದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ. ಸುಷ್ಮಾ ಸ್ವರಾಜ್ 2019ರ ಆ. 6ರಂದು ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದರು.