ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚುನಾವಣಾ ಆಯುಕ್ತರ ರಾಜಿನಾಮೆ ಸೇರಿ ಮೂರು ಬೇಡಿಕೆ: ಚುನಾವಣಾ ಆಯೋಗಕ್ಕೆ ಸಿಜೆಪಿ ಖಡಕ್ ಎಚ್ಚರಿಕೆ

CJP demands: ಚುನಾವಣಾ ಆಯೋಗದೊಳಗಿನ ಆಂತರಿಕ ಭಿನ್ನಾಭಿಪ್ರಾಯದ ಕುರಿತು ವರದಿಯಾದ ಬೆನ್ನಲ್ಲೇ ಕಾಕ್ರೋಚ್ ಜನತಾ ಪಕ್ಷವು ಚುನಾವಣಾ ಆಯೋಗದ ಮುಂದೆ ಮೂರು ಬೇಡಿಕೆಯನ್ನಿರಿಸಿದೆ. ಇದರಲ್ಲಿ ಮುಖ್ಯವಾಗಿ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ರಾಜಿನಾಮೆಯನ್ನು ಕೇಳಿರುವ ಸಿಜೆಪಿ ಅವರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಆಗ್ರಹಿಸಿದೆ.

ಚುನಾವಣಾ ಆಯೋಗದ ಮುಂದೆ ಮೂರು ಬೇಡಿಕೆ ಇಟ್ಟ ಸಿಜೆಪಿ

ಸಂಗ್ರಹ ಚಿತ್ರ -

ನವದೆಹಲಿ: ಚುನಾವಣಾ ಆಯೋಗದ (Election Commission) ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ (ECI CEC Gyanesh Kumar) ಅವರ ರಾಜಿನಾಮೆಗೆ ಆಗ್ರಹಿಸಿರುವ ಕಾಕ್ರೋಚ್ ಜನತಾ ಪಕ್ಷ (Cockroach Janta Party) ಅವರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಆಗ್ರಹಿಸಿದೆ. ಚುನಾವಣಾ ಆಯೋಗ ಮತ್ತು ಜ್ಞಾನೇಶ್ ಕುಮಾರ್ ಅವರ ನಡುವಿನ ವಿವಾದದ ಹಿನ್ನೆಲೆಯಲ್ಲಿ ಗುರುವಾರ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ (CJP founder Abhijeet Dipke), ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ಸುದ್ದಿಗೋಷ್ಠಿ ನಡೆಸಿ ಮೂರು ಪ್ರಮುಖ ಬೇಡಿಕೆಗಳನ್ನು (CJP demands) ಮಂಡಿಸಿದರು.

ಕಾಕ್ರೋಚ್ ಜನತಾ ಪಕ್ಷ ಇರಿಸಿರುವ ಬೇಡಿಕೆಯಲ್ಲಿ ಮುಖ್ಯವಾಗಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಮತ್ತು ಅವರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವುದು ಸೇರಿದೆ. ಇದರೊಂದಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ತಡೆಹಿಡಿಯುವುದು ಮತ್ತು 2025ರ ಜನವರಿಯ ಮತದಾರರ ಪಟ್ಟಿಯನ್ನು ಪುನಃಸ್ಥಾಪಿಸುವುದನ್ನು ಒಳಗೊಂಡಿದೆ. ಇದಲ್ಲದೇ 2023ರ ಕಾನೂನನ್ನು ರದ್ದುಗೊಳಿಸಬೇಕು, ಚುನಾವಣಾ ಆಯೋಗದಲ್ಲಿ ಸುಧಾರಣೆಯನ್ನು ತರಬೇಕು ಎಂದು ಸಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಹುಟ್ಟುಹಬ್ಬದ ದಿನ ದೇವಸ್ಥಾನಕ್ಕೆ ಹೊರಟ್ಟಿದ್ದವಳ ಮೇಲೆ ಸಾಮೂಹಿಕ ಅತ್ಯಾಚಾರ; ಪೊಲೀಸರ ಮುಂದೆ ಕರಾಳ ಯಾತನೆ ಹಂಚಿಕೊಂಡ ಬಾಲಕಿ

ಜಂತರ್ ಮಂತರ್ 2.0 ಎಚ್ಚರಿಕೆ

ಜ್ಞಾನೇಶ್ ಕುಮಾರ್ ಅವರು ಭಾರತೀಯ ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆ. ಪ್ರಜಾಪ್ರಭುತ್ವ ದೇಶದಲ್ಲಿ ಯಾರು ಮತ ಚಲಾಯಿಸಬಹುದು ಎಂಬುದನ್ನು ಚುನಾವಣಾ ಆಯೋಗವೇ ನಿರ್ಧರಿಸುತ್ತಿದೆ ಎಂದು ದೂರಿದ ಅಭಿಜೀತ್ ದಿಪ್ಕೆ, ಜ್ಞಾನೇಶ್ ಕುಮಾರ್ ಅವರು 48 ಗಂಟೆಗಳ ಒಳಗೆ ರಾಜೀನಾಮೆ ನೀಡದಿದ್ದರೆ "ಜಂತರ್ ಮಂತರ್ 2.0" ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮವೊಂದು ಜ್ಞಾನೇಶ್ ಕುಮಾರ್ ಮತ್ತು ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರ ನಡುವಿನ ಅಸಮಾಧಾನದ ಬಗ್ಗೆ ವರದಿ ಮಾಡಿತ್ತು. ಇದು ಮುಖ್ಯವಾಗಿ ಭಾರತೀಯ ನಾಗರಿಕರು ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಲು ಭರ್ತಿ ಮಾಡುವ 'ಫಾರ್ಮ್ 6' ನಲ್ಲಿನ ಬದಲಾವಣೆಗೆ ಸಂಬಂಧಿಸಿ ಇವರ ನಡುವೆ ಆಕ್ಷೇಪ ವ್ಯಕ್ತವಾಗಿತ್ತು ಎಂದು ವರದಿ ತಿಳಿಸಿದೆ. ಈ ವರದಿಯಲ್ಲಿದ್ದ ಅಂಶಗಳು ಹಾಗೂ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ವೇಳೆ ವಿವಿಧ ರಾಜ್ಯಗಳಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದನ್ನು ಉಲ್ಲೇಖಿಸಿ ಅಭಿಜೀತ್ ದಿಪ್ಕೆ, ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದರು.



ಜ್ಞಾನೇಶ್ ಕುಮಾರ್ ಅವರ ರಾಜಿನಾಮೆಗೆ ಆಗ್ರಹಿಸಿ ಅಕ್ಟೋಬರ್ 2 ರಿಂದ ಸಿಜೆಪಿ ದೇಶಾದ್ಯಂತ ಪ್ರತಿಭಟನೆಗಳನ್ನು ಆರಂಭಿಸಲಿದೆ. ಈ ಪ್ರತಿಭಟನೆಯು ಮುಂಬೈನಲ್ಲಿ ಆರಂಭವಾಗಿ ಅಲ್ಲಿಂದ ಇತರ ನಗರಗಳಿಗೆ ವಿಸ್ತರಿಸಲಿದೆ ಎಂದ ಅವರು, ಈ ಬಾರಿ ಗಾಂಧಿ ಜಯಂತಿಯಂದು ಪ್ರಜಾಪ್ರಭುತ್ವವನ್ನು ಉಳಿಸುವ ಪ್ರತಿಜ್ಞೆ ಮಾಡೋಣ. ನಮ್ಮ ಗಣರಾಜ್ಯವನ್ನು ಮರಳಿ ಪಡೆಯಲು ಅಕ್ಟೋಬರ್ 2 ಕ್ಕಿಂತ ಉತ್ತಮ ದಿನ ಇನ್ನೊಂದಿಲ್ಲ ಎಂದರು.

ಐಆರ್‌ಡಿಎಐ ಹೊಸ ಪ್ರಸ್ತಾಪ: ಪಿಬಿ ಫಿನ್‌ ಟೆಕ್‌ ಷೇರುಗಳ ದರ ಶೇಕಡಾ 36 ಕುಸಿತ

ಅಕ್ರಮಗಳಿಗೆ ವಿರೋಧ ಪಕ್ಷಗಳ ಮಾನ್ಯತೆ

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲೂ ಪೋಸ್ಟ್ ಹಂಚಿಕೊಂಡಿರುವ ಅಭಿಜೀತ್ ದಿಪ್ಕೆ, ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಭಾವಿಸುವ ವಿರೋಧ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಬಾರದು. ಅಕ್ರಮಗಳಿಂದ ಕೂಡಿದ ಚುನಾವಣೆಗಳಲ್ಲಿ ನೀವು ಭಾಗವಹಿಸುವುದನ್ನು ಮುಂದುವರಿಸಿದಾಗ ಆ ಚುನಾವಣೆಗಳಿಗೆ ನೀವು ಮಾನ್ಯತೆ ನೀಡಿದಂತಾಗುತ್ತದೆ. ಅವು ಮುಕ್ತ ಹಾಗೂ ನ್ಯಾಯಸಮ್ಮತವಾಗಿವೆ ಎಂಬ ಭ್ರಮೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.