ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

New Passport Rules 2025: ಪಾಸ್​ಪೋರ್ಟ್​​ಗೆ ಅರ್ಜಿ ಸಲ್ಲಿಸುತ್ತಿದ್ದೀರಾ? ಬದಲಾಗಿರುವ ಈ ಹೊಸ ನಿಯಮಗಳು ತಿಳಿದಿರಲಿ

New Passport Rules 2025: ಪಾಸ್‌ಪೋರ್ಟ್‌ಗೆ ಸಂಬಂಧಪಟ್ಟಂತೆ ಹೊಸ ಅಪ್‌ಡೇಟ್‌ ಹೊರಬಿದ್ದಿದೆ. ಪಾಸ್‌ಪೋರ್ಟ್‌ ಪಡೆಯಲು ಇದ್ದ ಕೆಲವೊಂದು ಕಠಿಣ ನಿಯಮಗಳಲ್ಲಿ ಬದಲಾವಣೆಗಳನ್ನು ತಂದು ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಕೆಲವೊಂದು ದಾಖಲೆಗಳನ್ನು ಪಡೆಯುವುದು ತೀರಾ ಕಷ್ಟವಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸಚಿವಾಲಯ ಈ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದೆ.

ಪಾಸ್‌ಪೋರ್ಟ್ ನಿಯಮದಲ್ಲಿ ಸಡಿಲಿಕೆ; ಮಹತ್ವದ ಬದಲಾವಣೆ

ಸಾಂದರ್ಭಿಕ ಚಿತ್ರ.

Profile Sushmitha Jain Mar 10, 2025 3:30 PM

ಹೊಸದಿಲ್ಲಿ: ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs (MEA) ನೀಡುವ ಪವರ್‌ಫುಲ್‌ ದಾಖಲೆಗಳಲ್ಲಿ ಪಾಸ್‌ಪೋರ್ಟ್‌‌‌‌ (Passport) ಪ್ರಮುಖವಾದುದು. ಒಂದು ರಾಷ್ಟ್ರ ತನ್ನ ದೇಶದ ನಾಗರಿಕರಿಗೆ ಇನ್ನೊಂದು ದೇಶಕ್ಕೆ ಪ್ರವಾಸ ಮಾಡಲು ಮತ್ತು ಈ ವ್ಯಕ್ತಿಯ ಗುರುತು ಮತ್ತು ರಾಷ್ಟ್ರೀಯತೆಯನ್ನು ಗುರುತಿಸಲು ನೀಡಲಾಗುವ ಅತಿ ಮುಖ್ಯ ದಾಖಲೆಯಲ್ಲಿ ಪಾಸ್‌ಪೋರ್ಟ್‌ ಪ್ರಮುಖವಾದುದು. ಹೊಸ ನಿಯಮದ ಪ್ರಕಾರ ಆನ್‌ಲೈನ್ ಮೂಲಕ ಹೊಸ ಪಾಸ್‌ಪೋರ್ಟ್‌‌‌‌ ಪಡೆಯಲು ಅರ್ಜಿ ಸಲ್ಲಿಸಿದ್ದರೆ ಇನ್ನುಮುಂದೆ ಮನೆಗೆ ಬಂದು ಸೇರಲಿದೆ. ಇದರಲ್ಲಿ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಹುಟ್ಟಿದ ಸ್ಥಳಗಳು ಆ ವ್ಯಕ್ತಿ ಗುರುತಿನ ಅಂಶಗಳನ್ನು ಹೊಂದಿರುತ್ತದೆ.

ಈ ಪಾಸ್‌ಪೋರ್ಟ್‌ ಕುರಿತಾದ ಹೊಸ ಅಪ್‌ಡೇಟ್‌ ಹೊರಬಿದ್ದಿದೆ. ವಿದೇಶಾಂಗ ಸಚಿವಾಲಯ ಪಾಸ್‌ಪೋರ್ಟ್ ಪಡೆಯಲು ಇದ್ದ ಕೆಲವೊಂದು ಕಠಿಣ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿದೆ. ಕೆಲವೊಂದು ದಾಖಲೆಗಳನ್ನು ಪಡೆಯುವುದು ತೀರಾ ಕಷ್ಟವಾಗುತ್ತಿದೆ ಎನ್ನುವ ದೂರಿನ ಹಿನ್ನಲೆಯಲ್ಲಿ ಸಚಿವಾಲಯ ಈ ಮಹತ್ವದ ಬದಲಾವಣೆಯನ್ನು ತಂದಿದೆ.

ಹೌದು, ಪಾಸ್​ಪೋರ್ಟ್​ ಪಡೆಯುವ ನೀತಿಯನ್ನು ಸಡಿಲಿಕೆ ಮಾಡಿರುವ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆ ಮೂಲಕ ಪಾಸ್​ಪೋರ್ಟ್​ ನಿಯಮವನ್ನು ತಿದ್ದುಪಡಿ ಮಾಡಿದೆ. ಹೊಸ ರೂಲ್ಸ್ ಪ್ರಕಾರ ಇನ್ನುಮುಂದೆ ಜನನ ಪ್ರಮಾಣ ಪತ್ರದ ದಾಖಲೆಯನ್ನು ಮಾತ್ರ ಸಾಕ್ಷಿಯಾಗಿ ಸ್ವೀಕರಿಸುವಂತೆ ಸೂಚಿಸಿ ಆದೇಶ ಹೊರಡಿಸಿದೆ. ಈ ನಿಯಮ 2023ರ ಅಕ್ಟೋಬರ್​ 1ರ ಬಳಿಕ ಜನಿಸಿದವರಿಗೆ ಮಾತ್ರ ಅನ್ವಯ ಆಗಲಿದೆ.

1980ರ ಪಾಸ್‌ಪೋರ್ಟ್ ನಿಯಮಗಳಿಗೆ ತಿದ್ದುಪಡಿ ಜಾರಿಗೊಳಿಸುವ ಕುರಿತು ಟಿಪ್ಪಣಿ ಹೊರಡಿಸಲಾಗಿದೆ. ಅಧಿಕೃತ ಗೆಜೆಟ್‌ನಲ್ಲಿ ತಿದ್ದುಪಡಿ ಪ್ರಕಟಿಸಿದ ನಂತರ ಹೊಸ ನಿಯಮಗಳು ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಸೀರೆ ಪಲ್ಲು ಸರಿಮಾಡಿಕೊಳ್ಳಿ ಎಂದ ಮಹಿಳೆಗೆ ಬೈಕ್‌ನಲ್ಲಿದ್ದಾಕೆ ಹೀಗಾ ಹೇಳೋದು? ವಿಡಿಯೊ ನೋಡಿ

ಬರ್ತ್ ಸರ್ಟಿಫಿಕೇಟ್ ಕಡ್ಡಾಯ: ಹೊಸ ನಿಯಮದ ಪ್ರಕಾರ ಪಾಲಿಕೆಗಳಿಂದ ನೀಡುವ ಜನನ ಪ್ರಮಾಣ ಪತ್ರವನ್ನು ಪಾಸ್​ಪೋರ್ಟ್​ಗೆ ದಾಖಲೆಯಾಗಿ ನೀಡಬೇಕಿದೆ. 2023ರ ಅಕ್ಟೋಬರ್​ 1ರ ಬಳಿಕ ಜನಿಸಿದವರು ಜನನ ಪ್ರಮಾಣ ಪತ್ರ ಒಂದನ್ನು ನೀಡಿದರೆ ಸಾಕು. ಇದಕ್ಕೆ ಸಂಬಂಧಿಸಿದ ಯಾವುದೇ ಹೆಚ್ಚುವರಿ ದಾಖಲೆಗಳ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಈ ಹಿಂದೆ ಪುರಾವೆಯಾಗಿ ಡ್ರೈವಿಂಗ್ ಲೈಸನ್ಸ್ ಅಥವಾ 10ನೇ ತರಗತಿ ಶಾಲಾ ಪ್ರಮಾಣಪತ್ರ ನೀಡಬಹುದಿತ್ತು. ಆದರೆ ಇದೀಗ ಈ ನಿಯಮ ಬದಲಾಗಿದೆ. 2023ರ ಅಕ್ಟೋಬರ್ 1ಕ್ಕಿಂತ ಮೊದಲು ಜನಿಸಿದವರಿಗೆ ಮಾತ್ರ ಅನ್ವಯವಾಗಲಿದ್ದು, ನಂತರ ಜನಿಸಿದವರಿಗೆ ಬರ್ತ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ.

ಜನನ ಮತ್ತು ಮರಣ ನೋಂದಣಾಧಿಕಾರಿ, ಪುರಸಭೆ ಅಥವಾ 1969ರ ಜನನ ಮತ್ತು ಮರಣ ನೋಂದಣಿ ಕಾಯಿದೆಯಡಿ ನೀಡಲಾದ ಜನನ ಪ್ರಮಾಣ ಪತ್ರವನ್ನು ಪರಿಗಣಿಸಲಾಗುತ್ತದೆ. 2023ರ ಅಕ್ಟೋಬರ್ 1ರ ಬಳಿಕ ಜನಿಸಿದವರಲ್ಲಿ ಬಹುತೇಕರಲ್ಲಿ ಜನನ ಪ್ರಮಾಣ ಪತ್ರ ಇದೆ. ಇಲ್ಲದಿದ್ದರೂ ಪಾಸ್‌ಪೋರ್ಟ್ ಪಡೆಯಲು ಜನನ ಮತ್ತು ಮರಣ ನೋಂದಣಾಧಿಕಾರಿ, ಪುರಸಭೆಯಿಂದ ಪತ್ರ ಮಾಡಿಸಿಕೊಳ್ಳಬೇಕು.

ವಸತಿ ವಿಳಾಸದ ಅಗತ್ಯ ಇಲ್ಲ: ಈ ಹಿಂದೆ ಪಾಸ್‌ಪೋರ್ಟ್‌ನ ಕೊನೆಯ ಪುಟದಲ್ಲಿ ಉಲ್ಲೇಖಿಸಲಾಗುತ್ತಿದ್ದ ಖಾಯಂ ವಸತಿ ವಿಳಾಸ ನಮೂದೆ ನಿಯಮವನ್ನು ಸಡಿಲಿಕೆ ಮಾಡಿದ್ದು, ಪಾಸ್‌ಪೋರ್ಟ್ ಹೊಂದಿರುವವರ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿ ಇಡಲು, ವಿದೇಶಾಂಗ ಸಚಿವಾಲಯ (MEA) ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕೊನೆಯ ಪುಟದಲ್ಲಿ ವೈಯಕ್ತಿಯ ವಸತಿ ವಿಳಾಸವನ್ನು ಮುದ್ರಿಸದಿರಲು ನಿರ್ಧರಿಸಿದ್ದು, ಇದರ ಬದಲಾಗಿ ಪಾಸ್‌ಪೋರ್ಟ್‌ನಲ್ಲಿ ಬಾರ್‌ಕೋಡ್‌ ಮುದ್ರಿಸಲಾಗಿದೆ. ಈ ಮೂಲಕ ವಲಸೆ ಅಧಿಕಾರಿಗಳು ಪಾಸ್‌ಪೋರ್ಟ್ ಹೊಂದಿರುವವರ ಮಾಹಿತಿಯನ್ನು ಸ್ಕ್ಯಾನ್ ಮಾಡುವ ಮೂಲಕ ಪಡೆಯಬಹುದಾಗಿದೆ.

ಪಾಸ್‌ಪೋರ್ಟ್‌ನ ಬಣ್ಣ ಬದಲಾವಣೆ: ಪಾಸ್‌ಪೋರ್ಟ್ ಅನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ನೂತನ ಬಣ್ಣ ಸಂಕೇತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಸರ್ಕಾರಿ ಅಧಿಕಾರಿಗಳಿಗೆ ಬಿಳಿ ಪಾಸ್‌ಪೋರ್ಟ್‌, ರಾಜತಾಂತ್ರಿಕರಿಗೆ ಕೆಂಪು ಪಾಸ್‌ಪೋರ್ಟ್‌ ಹಾಗೂ ಸಾಮಾನ್ಯ ನಾಗರಿಕರಿಗೆ ನೀಲಿ ಪಾಸ್‌ಪೋರ್ಟ್‌ ನಿಗದಿ ಮಾಡಲಾಗಿದೆ.

ಪೋಷಕರ ಹೆಸರು ನಮೂಸುವ ಅಗತ್ಯವಿಲ್ಲ: ಈ ಹಿಂದೆ ಅರ್ಜಿದಾರರು ಬಯಸಿದ್ದಲ್ಲಿ ಅರ್ಜಿಯಲ್ಲಿ ತಂದೆ ಅಥವಾ ತಾಯಿಯ ಹೆಸರು ನಮೂದಿಸದೇ ಇರುವ ಅವಕಾಶವನ್ನೂ ನೀಡಲಾಗಿತ್ತು. ಆದರೆ ಇದೀಗ ಈ ನಿಯಮವನ್ನೇ ಕೈಬಿಟ್ಟಿದ್ದು, ಪಾಸ್‌ಪೋರ್ಟ್‌ನ ಕೊನೆಯ ಪುಟದಲ್ಲಿ ಪೋಷಕರ ಹೆಸರನ್ನು ನಮೂದಿಸುವ ನಿಯಮವನ್ನು ತೆಗೆದು ಹಾಕಲಾಗಿದೆ. ಇದರಿಂದ ಅವರ ಖಾಸಗಿತನಕ್ಕೆ ಪ್ರಾಮುಖ್ಯತೆ ನೀಡಿದ್ದು, ಗೌಪ್ಯತೆ ಹೆಚ್ಚಿಸುವ ಜತೆಗೆ, ಒಬ್ಬ ಪೋಷಕರ ಆಸರೆಯಲ್ಲಿ ಬೆಳೆದ ಮಕ್ಕಳಿಗೆ ಈ ನಿಯಮ ಅನೂಕೂಲವಾಗಲಿದೆ.

ಇನ್ನು ಪಾಸ್‌ಪೋರ್ಟ್ ಪ್ರಕ್ರಿಯೆ ಸುರಕ್ಷಿತ ಮಾಡಲು ಈ ನಿಯಮ ತರಲಾಗಿದೆ. ಹೊಸ ನಿಯಮದಿಂದ ಭಾರತದ ಪಾಸ್‌ಪೋರ್ಟ್ ಸುರಕ್ಷತೆ ಮತ್ತಷ್ಟು ಹೆಚ್ಚಾಗಲಿದೆ. ಇನ್ನು ವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ಕೆಲ ಬದಲಾವಣೆಗೆ ಚಿಂತನೆ ನಡೆಸಲಾಗಿದೆ. ಈ ಮೂಲಕ ಭಾರತೀಯ ಪಾಸ್‌ಪೋರ್ಟ್ ಹೆಚ್ಚು ಸುರಕ್ಷಿತ ಮಾಡಲು ಕೇಂದ್ರ ಸರ್ಕಾರ ಭಾರಿ ತಯಾರಿ ನಡೆಸುತ್ತಿದೆ.

ಅಲ್ಲದೇ ಪಾಸ್‌ಪೋರ್ಟ್ ಪ್ರಕ್ರಿಯೆ ವೇಗವಾಗಿ ಹಾಗೂ ಸರಾಗವಾಗಿ ನಡೆಯಬೇಕೆಂದ ಉದ್ದೇಶದಿಂದ ಸೇವಾ ಕೇಂದ್ರಗಳ ಪ್ರಮಾಣವನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದು, ಮುಂದಿನ ಐದು ವರ್ಷಗಳಲ್ಲಿ ಸುಮಾರು 442ರಿಂದ 600 ಹೊಸ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ.