ರಾಜ್ಯಸಭೆಯಲ್ಲಿ ತಮ್ಮ ಎರಡು ಕೃತಕ ಕಾಲು ತೆಗೆದು ತೋರಿಸಿ ಕಮ್ಯುನಿಷ್ಟರ ಕರಾಳ ಮುಖ ತೆರದಿಟ್ಟ ಬಿಜೆಪಿ ಸಂಸದ
ಸೋಮವಾರ ರಾಜ್ಯಸಭೆಯಲ್ಲಿ ಬಿಜೆಪಿ ನಾಮನಿರ್ದೇಶಿತ ಸದಸ್ಯ ಸಿ ಸದಾನಂದನ್ ಮಾಸ್ಟರ್ ತಮ್ಮ ಚೊಚ್ಚಲ ಭಾಷಣದ ಸಮಯದಲ್ಲಿ ತಮ್ಮ ಕೃತಕ ಅಂಗಗಳನ್ನು ಮೇಜಿನ ಮೇಲೆ ಪ್ರದರ್ಶಿಸಿದಾಗ ಕೋಲಾಹಲ ಉಂಟಾಯಿತು. ಮೂರು ದಶಕಗಳ ಹಿಂದೆ ತಮ್ಮ ಮೇಲೆ ಸಿಪಿಐ-ಎಂ ಕಾರ್ಯಕರ್ತರು ದಾಳಿ ನಡೆಸಿದ್ದರಿಂದ ತಾನು ಈ ಪರಿಸ್ಥಿತಿಯಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಸೋಮವಾರ ರಾಜ್ಯಸಭೆಯಲ್ಲಿ ಬಿಜೆಪಿ ನಾಮನಿರ್ದೇಶಿತ ಸದಸ್ಯ ಸಿ ಸದಾನಂದನ್ ಮಾಸ್ಟರ್ ತಮ್ಮ ಚೊಚ್ಚಲ ಭಾಷಣದ (Rajya Sabha) ಸಮಯದಲ್ಲಿ ತಮ್ಮ ಕೃತಕ ಅಂಗಗಳನ್ನು ಮೇಜಿನ ಮೇಲೆ ಪ್ರದರ್ಶಿಸಿದಾಗ ಕೋಲಾಹಲ ಉಂಟಾಯಿತು. ಮೂರು ದಶಕಗಳ ಹಿಂದೆ ತಮ್ಮ ಮೇಲೆ ಸಿಪಿಐ-ಎಂ ಕಾರ್ಯಕರ್ತರು ದಾಳಿ ನಡೆಸಿದ್ದರಿಂದ ತಾನು ಈ ಪರಿಸ್ಥಿತಿಯಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಮೊದಲು ಅವರು ಕೇರಳದ ಶಾಲೆಯೊಂದರದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಬಳಿಕ ರಾಜಕೀಯಕ್ಕೆ ಬಂದಿದ್ದರು.
31 ವರ್ಷಗಳ ಹಿಂದೆ ಕೇರಳದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಘರ್ಜಿಸುತ್ತಿದ್ದವರು ನನ್ನ ಮೇಲೆ ದಾಳಿ ನಡೆಸಿದರು. ನಾನು ಮನೆಗೆ ಹಿಂತಿರುಗುತ್ತಿದ್ದಾಗ ಸಂಘಟಿತ ಅಪರಾಧಿಗಳು ನನ್ನನ್ನು ಹಿಂದಿನಿಂದ ಹಿಡಿದು, ರಸ್ತೆಗೆ ಇಳಿಸಿ, ನನ್ನ ಕಾಲುಗಳನ್ನು ಕತ್ತರಿಸಿ, ಇಂಕ್ವಿಲಾಬ್ ಜಿಂದಾಬಾದ್ ಎಂದು ಕೂಗಿದರು ಎಂದು ಅವರು ಹೇಳಿಕೊಂಡಿದ್ದಾರೆ. ಅವರು ಮೇಜಿನ ಮೇಲೆ ಕೃತಕ ಕಾಲುಗಳನ್ನು ಪ್ರದರ್ಶಿಸಿದರು. ಊರಿಗೆಲ್ಲಾ ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯ, ಸಹಿಷ್ಣುತೆಯ ಬಗ್ಗೆ ಮಾತನಾಡುವ ಎಡಪಂಥೀಯ ರಾಜಕೀಯ ಪಕ್ಷಗಳು ತಮ್ಮ ಸೈದಾಂತಿಕ ವಿರೋಧಿಗಳಿಗೆ ಯಾವ ರೀತಿ ಹಿಂಸೆ ನೀಡಿದರು ಎಂಬುದನ್ನು ಸಿ. ಸದಾನಂದ ಮಾಸ್ಟರ್ ಅವರು ರಾಜ್ಯಸಭೆಯ ಮುಂದಿಟ್ಟಾಗ ಅದಕ್ಕೆ ಸಿಪಿಐಎಂ ನಾಯಕ ಜಾನ್ ಬ್ರಿಟ್ಟಾಸ್ ತೀವ್ರ ವಿರೋಧ ವ್ಯಕ್ತಪಡಿಸಿದರು.
ಚಂಡೀಗಢ ಮೇಯರ್ ಚುನಾವಣೆ; ಆಮ್ ಆದ್ಮಿ ಭದ್ರಕೋಟೆಯಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿ
ರಾಷ್ಟ್ರ ಮತ್ತು ಜನರ ಮುಂದೆ ಪ್ರಜಾಪ್ರಭುತ್ವ ಎಂದರೇನು ಎಂಬುದನ್ನು ತೋರಿಸಲು ಬಯಸುತ್ತೇನೆ. 31 ವರ್ಷಗಳ ಹಿಂದೆ ಕೇರಳದಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಘರ್ಜಿಸುತ್ತಿದ್ದವರು ನನ್ನ ಮೇಲೆ ದಾಳಿ ನಡೆಸಿದರು. ನಾನು ಮನೆಗೆ ಹಿಂತಿರುಗುತ್ತಿದ್ದಾಗ ಸಂಘಟಿತ ಅಪರಾಧಿಗಳು ನನ್ನನ್ನು ಹಿಂದಿನಿಂದ ಹಿಡಿದು, ರಸ್ತೆಗೆ ಇಳಿಸಿ, ನನ್ನ ಕಾಲುಗಳನ್ನು ಕತ್ತರಿಸಿ, ಇಂಕ್ವಿಲಾಬ್ ಜಿಂದಾಬಾದ್ ಎಂದು ಕೂಗಿದರು ಎಂದು ಹೇಳಿದರು. ಸಿಪಿಐಎಂ ಕಾರ್ಯಕರ್ತರು ನಡೆಸಿದ ದಾಳಿಯಿಂದ ಉಂಟಾದ ಅಂಗವೈಖಲ್ಯದಿಂದಾಗಿ ತಾನು ರಾಜ್ಯಸಭೆಯ ಮೊದಲ ಭಾಷಣವನ್ನು ಕುಳಿತುಕೊಂಡ ಮಾಡಬೇಕಾದ ಸ್ಥಿತಿ ಬಂದ ಬಗ್ಗೆಯೂ ಅವರು ಹೇಳಿದರು. ಜೊತೆಗೆ ತಮ್ಮ ಕೃತಕ ಕಾಲುಗಳನ್ನು ಅವರು ಪ್ರದರ್ಶಿಸಿದರು. ಇದು ರಾಜ್ಯಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು.
ಸಿಪಿಐಎಂನ ಚಿತ್ರಹಿಂಸೆಯಿಂದಾಗಿ ನನ್ನ ಚೊಚ್ಚಲ ಭಾಷಣವನ್ನು ನಾನು ನಿಂತು ಮಾಡಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ನನಗೆ ವಿಷಾದಿವಿದೆ ಎಂಬ ತೀಕ್ಷ್ಣವಾದ ಹೇಳಿಕೆಯೊಂದಿಗೆ ಸದಾನಂದ ಮಾಸ್ಟರ್ ತಮ್ಮ ಮಾತನ್ನು ಮುಕ್ತಾಯಗೊಳಿಸಿದರು. ನಂತರ ಸಭಾ ನಾಯಕ ಜೆ.ಪಿ. ನಡ್ಡಾ ಅವರು, ಬ್ರಿಟ್ಟಾಸ್ ಅವರು ಬಳಸಿದ ಅನಪೇಕ್ಷಿತ ಪದಗಳನ್ನು ತೆಗೆದುಹಾಕುವಂತೆ ಸಭಾಪತಿಯನ್ನು ಒತ್ತಾಯಿಸಿದರು.