ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

J D Vance : ಎಪ್ರಿಲ್‌ 21 ರಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಭದ್ರತಾ ಸಲಹೆಗಾರ ವಾಲ್ಟ್ಜ್ ಭಾರತ ಭೇಟಿ

ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಎಪ್ರಿಲ್‌ 21 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಟ್ಜ್ ಕೂಡ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ತಿಂಗಳ ಕೊನೆಯಲ್ಲಿ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ಭಾರತ ಭೇಟಿ

Profile Vishakha Bhat Apr 12, 2025 12:06 PM

ನವದೆಹಲಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ( ಈ ಎಪ್ರಿಲ್‌ 21 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಟ್ಜ್ ಕೂಡ ಭೇಟಿ ನೀಡಲಿದ್ದಾರೆ. ಆದರೆ ಉಪಾಧ್ಯಕ್ಷರು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ಇಬ್ಬರೂ ಏಪ್ರಿಲ್ 21 ರಿಂದ ಭಾರತಕ್ಕೆ ಪ್ರತ್ಯೇಕ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಟ್ರಂಪ್‌ ಅವರ ಸುಂಕ ಸಮರದ ನಂತರ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಭೇಟಿ ಮಹತ್ವವಾಗಲಿದೆ.

ವ್ಯಾನ್ಸ್ ಅವರ ಭೇಟಿಯು ಅಧಿಕೃತ ಅಂಶಗಳನ್ನು ಹೊಂದಿದ್ದರೂ ಸಹ, ಇದು ಹೆಚ್ಚಾಗಿ ಖಾಸಗಿ ಪ್ರವಾಸವಾಗಿರುತ್ತದೆ ಎಂದು ಹೇಳಲಾಗಿದೆ. ವಾಲ್ಟ್ಜ್ ಅವರ ಭೇಟಿ ಸಂಪೂರ್ಣವಾಗಿ ವ್ಯವಹಾರ ಪ್ರವಾಸವಾಗಿರುತ್ತದೆ ಏಕೆಂದರೆ ಅವರು ಇಂಡೋ-ಪೆಸಿಫಿಕ್‌ನಲ್ಲಿನ ಭದ್ರತಾ ಪರಿಸ್ಥಿತಿ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಏಪ್ರಿಲ್ 22 ರಿಂದ ಎರಡು ದಿನಗಳ ಭೇಟಿಗಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಮೊದಲು ವ್ಯಾನ್ಸ್ ಮತ್ತು ವಾಲ್ಟ್ಜ್ ಇಬ್ಬರೂ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಜೆ.ಡಿ. ವ್ಯಾನ್ಸ್ ಅವರ ಜೊತೆ ಪತ್ನಿ ಉಷಾ ವ್ಯಾನ್ಸ್ ಕೂಡಾ ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ. ಕಳೆದ ತಿಂಗಳು ಫ್ರಾನ್ಸ್ ಮತ್ತು ಜರ್ಮನಿ ಪ್ರವಾಸ ಕೈಗೊಂಡಿದ್ದ ವ್ಯಾನ್ಸ್ ಅವರು ಭಾರತಕ್ಕೆ ಆಗಮಿಸಿದರೆ ಉಪಾಧ್ಯಕ್ಷರಾದ ಬಳಿಕ ಅವರ ಎರಡನೇ ವಿದೇಶ ಪ್ರವಾಸ ಇದಾಗಿದೆ.


ಈ ಸುದ್ದಿಯನ್ನೂ ಓದಿ: Modi Meets JD Vance: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮಕ್ಕಳಿಗೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ಪ್ರಧಾನಿ ಮೋದಿ

ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ (Ajit Doval) ಜೊತೆ ಸಭೆ ನಡೆಸಲಿದ್ದಾರೆ. ಮುಂಬೈ ದಾಳಿಯ ಉಗ್ರ ತಹವ್ವೂರ್‌ ರಾಣಾ ಅಮೆರಿಕದಿಂದ ಗಡಿಪಾರಾಗಿ ಭಾರತಕ್ಕೆ ಬಂದ ನಂತರ ಎರಡು ದೇಶಗಳ ಭದ್ರತಾ ಸಲಹೆಗಾರರ ಸಭೆ ನಡೆಯಲಿರುವುದು ವಿಶೇಷ. ಮುಂಬೈ ದಾಳಿಯ ಪ್ರಮುಖ ಆರೋಪಿಯಾದ ತಹಾವ್ವೂರ್‌ ರಾಣಾನನ್ನು ಅಮೆರಿಕ ಭಾರತಕ್ಕೆ ಹಸ್ತಾಂತರಿಸಿದೆ. ಫೆಬ್ರವರಿಯಲ್ಲಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಟ್ರಂಪ್‌ ಅವರ ಬಳಿ ರಣಾ ಹಸ್ತಾಂತರದ ಕುರಿತು ಮಾತುಕತೆ ನಡೆಸಿದ್ದರು.