Viral Video: ಬೆಡ್‌ಶೀಟ್ ಕದ್ದು ಲಗೇಜ್ ಬ್ಯಾಗ್‌ನೊಳಗೆ ಬಚ್ಚಿಟ್ಟ ಖತರ್ನಾಕ್ ಪ್ರಯಾಣಿಕರು!
ಪ್ರಯಾಣಿಕರು ರೈಲ್ವೆ ಇಲಾಖೆಯ ಬೆಡ್ ಶೀಟ್, ಟವೆಲ್‌ಗಳನ್ನು ಕದ್ದು ಲಗೇಜು ಬ್ಯಾಗಿನೊಳಗೆ ಬಚ್ಚಿಟ್ಟಿದ್ದನ್ನು ರೈಲ್ವೆ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದೀಗ ಆ ವಿಡಿಯೊ ಭಾರೀ ವೈರಲ್ ಆಗಿದೆ.
ಲಖನೌ: ಪ್ರಯಾಗ್‌ರಾಜ್(Prayagraj) ರೈಲ್ವೆ ಸ್ಟೇಷನ್‌ನಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ಪ್ರಯಾಣಿಕರು ರೈಲ್ವೆ ಇಲಾಖೆಯ ಬೆಡ್‌ಶೀಟ್ ಮತ್ತು ಟವೆಲ್ ಕದ್ದು ಲಗೇಜು ಬ್ಯಾಗಿನೊಳಗೆ ಬಚ್ಚಿಟ್ಟಿದ್ದನ್ನು ರೈಲ್ವೆ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆ ಕುರಿತ ವಿಡಿಯೊ ಈಗ ಎಲ್ಲೆಡೆ ಭಾರೀ ವೈರಲ್ ಆಗಿದೆ(Viral Video)
ಅತಿಯಾದ ಜನಸಂದಣಿ, ಶುಚಿತ್ವ ಸಮಸ್ಯೆ ಮತ್ತು ಕಳಪೆ ಗುಣಮಟ್ಟದ ಆಹಾರದಿಂದಾಗಿ ರೈಲ್ವೆ ಇಲಾಖೆ ಆಗಾಗ್ಗೆ ಮುಜುಗರಕ್ಕೆ ಈಡಾಗುತ್ತದೆ. ಇದೀಗ ಮತ್ತೊಂದು ವಿಚಿತ್ರ ಘಟನೆ ನಡೆದಿದೆ. ಎಸಿ ಕೋಚ್ ಮತ್ತು ಸಾಮಾನ್ಯ ದರ್ಜೆ ಕೋಚ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ರೈಲ್ವೆ ಇಲಾಖೆಯ ಬೆಡ್‌ಶೀಟ್ ಮತ್ತು ಟವೆಲ್‌ಗಳನ್ನು ಕದಿಯುತ್ತಿದ್ದು,ತಮ್ಮ ಲಗೇಜು ಬ್ಯಾಗಿನ ಮಧ್ಯೆ ಬಚ್ಚಿಟ್ಟಿದ್ದಾರೆ. ಈ ಕುರಿತ ಮಾಹಿತಿ ಸಿಕ್ಕ ಬೆನ್ನಲ್ಲೇ ರೈಲ್ವೆ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೊ ಕ್ಲಿಪ್‌ನಲ್ಲಿ ಪ್ರಯಾಗ್‌ರಾಜ್‌ನಲ್ಲಿರುವ ರೈಲ್ವೆ ನೌಕರರು ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರ ಲಗೇಜ್‌ಗಳನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು. ಬೆಡ್ ಶೀಟ್‌ಗಳು ಮತ್ತು ರೈಲ್ವೇ ಕೋಚ್‌ಗಳಿಂದ ತೆಗೆದ ಟವೆಲ್‌ಗಳಂತಹ ವಸ್ತುಗಳನ್ನು ಲಗೇಜು ಬ್ಯಾಗುಗಳಿಂದ ಹೊರ ತೆಗೆದಿದ್ದಾರೆ.
ಘಟನೆಯ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಪ್ರಯಾಣಿಕರ ಕ್ರಮಗಳನ್ನು ಖಂಡಿಸಿದ್ದಾರೆ. ಕಠಿಣ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ. ಸಾಮಾಜಿಕ ಬಳಕೆದಾರರೊಬ್ಬರು, “ಜನರು ಸಣ್ಣ ವಸ್ತುಗಳನ್ನು ಕದಿಯಲೂ ಏಸುವುದಿಲ್ಲವೆಂದರೆ ಇದು ನಾಚಿಕೆಗೇಡಿನ ಸಂಗತಿ. ಇದರಿಂದಾಗಿ ಭಾರತೀಯ ರೈಲ್ವೇ ಇಲಾಖೆ ನಷ್ಟ ಅನುಭವಿಸುತ್ತದೆ" ಇನ್ನೊಬ್ಬರು, “ರೈಲ್ವೆ ನಮ್ಮ ಸೌಕರ್ಯಕ್ಕಾಗಿ ಈ ಸೇವೆಗಳನ್ನು ಒದಗಿಸುತ್ತದೆ. ಆದರೆ ಕೆಲವು ಪ್ರಯಾಣಿಕರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದು ಅವಮಾನಕರವಾಗಿದೆ" ಎಂದು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ:UP Horror: ಪ್ರೇಯಸಿಯ ಖಾಸಗಿ ವಿಡಿಯೋ ಕದ್ದು ಬ್ಲಾಕ್‌ಮೇಲ್ ಮಾಡಿದ ಸ್ನೇಹಿತ; ಸುತ್ತಿಗೆಯಲ್ಲಿ ಹೊಡೆದು ಬರ್ಬರ ಕೊಲೆ