International Women's Day 2025: ಅಂತಾರಾಷ್ಟ್ರೀಯ ಮಹಿಳಾ ದಿನ: ಇತಿಹಾಸ, ಮಹತ್ವ, ಈ ವರ್ಷದ ಥೀಮ್ ಏನು..?
ಸಮಾಜದ ಕಟ್ಟು ಪಾಡುಗಳನ್ನು ಬದಿಗೊತ್ತಿ ಸ್ತ್ರೀಯರು ಇಂದು ಎಲ್ಲ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಪ್ರತೀ ವರ್ಷದಂದು ಈ ಸಾಧನೆಗೆ ಗೌರವಾರ್ಥವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಾ ಬರಲಾಗಿದೆ. ಕುಟುಂಬ ನಿರ್ವಹಣೆ ಮಾತ್ರವಲ್ಲದೆ ದೇಶದ ಆರ್ಥಿಕ ಅಭಿವೃದ್ಧಿಗೂ ಕೂಡ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು ಅವರ ಸಾಧನೆಗೆ ಪ್ರೀತಿ ಅಭಿವ್ಯಕ್ತಿಸುವ ದಿನವೇ ಮಹಿಳಾ ದಿನಾಚರಣೆ. ಪ್ರತಿ ವರ್ಷ ಕೂಡ ಒಂದೊಂದು ಥೀಂನಲ್ಲಿ ಈ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದ್ದು ಈ ಬಾರಿಯ ಥೀಂ ಏನು? ಏಕಾಗಿ ಈ ದಿನಾಚರಣೆ ಪ್ರಾಮುಖ್ಯತೆ ಪಡೆದಿದೆ ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ.


ನವದೆಹಲಿ: ಪ್ರತಿಯೊಬ್ಬರ ಜೀವನ ಪರಿಪೂರ್ಣವಾಗುವುದು ಸ್ತ್ರೀ ಒಬ್ಬಳಿಂದ ಎಂದರೂ ತಪ್ಪಾಗದು. ಆಕೆ ಸಾಕಿ ಸಲಹಿ ಮಮತೆ ತೋರುವ ತಾಯಿಯಾಗಲು ಬಲ್ಲಳು, ಸಹೋದರತೆಯ ಪ್ರೀತಿ ಹಂಚುವ ಮುದ್ದಿನ ತಂಗಿಯಾಗಬಲ್ಲಳು, ಕುಟುಂಬದ ಹೊಣೆ ಹೊತ್ತ ಮಗಳಾಗಬಲ್ಲಳು, ಪತಿಯ ಏಳು ಬೀಳಿನಲ್ಲಿ ಜೊತೆಯಾಗುವ ಸಂಗಾತಿಯಾಗಬಲ್ಲಳು. ಹಾಗಾಗಿಯೇ ಸ್ತ್ರೀ ಅಂದರೆ ಅಷ್ಟೇ ಸಾಕೇ ಎಂಬ ಸಾಲುಗಳನ್ನು ಹೋಲಿಸಿ ಬರೆದಿದ್ದಾರೆ. ಸಮಾಜದ ಕಟ್ಟು ಪಾಡುಗಳನ್ನು ಬದಿಗೊತ್ತಿ ಸ್ತ್ರೀಯರು ಇಂದು ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಗೈಯುತ್ತಿದ್ದಾರೆ. ಪ್ರತೀ ವರ್ಷವೂ ಈ ಸಾಧನೆಗೆ ಗೌರವಾರ್ಥವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು (International Women's Day 2025) ಆಚರಿಸುತ್ತಾ ಬರಲಾಗಿದೆ. ಕುಟುಂಬದ ಸುಧಾರಣೆ ಮಾತ್ರವಲ್ಲದೆ ದೇಶದ ಆರ್ಥಿಕ ಅಭಿವೃದ್ಧಿಗೂ ಕೂಡ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು ಅವರ ಸಾಧನೆಗೆ ಪ್ರೀತಿ ಅಭಿವ್ಯಕ್ತಿಸುವ ದಿನವೇ ಮಹಿಳಾ ದಿನಾಚರಣೆ, ಪ್ರತಿ ವರ್ಷ ಕೂಡ ಒಂದೊಂದು ಥೀಂನಲ್ಲಿ ಈ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದ್ದು ಏಕಾಗಿ ಈ ದಿನಾಚರಣೆ ಪ್ರಾಮುಖ್ಯತೆ ಪಡೆದಿದೆ ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ.
ಮಹಿಳಾ ಸಬಲೀಕರಣ ಮತ್ತು ಸಮಾನತೆಯನ್ನು ಉತ್ತೇಜಿಸುವ ಈ ಅಂತಾರಾಷ್ಟ್ರೀಯ ಮಹಿಳಾ ದಿನದಂದು ರಾಜಕೀಯ,ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕ ರನ್ನು ಗುರುತಿಸಿ ಅವರ ಸಾಧನೆಯನ್ನು ಜಗತ್ತಿಗೆ ಪಸರಿಸುವಂತೆ ಸಾರುವ ದಿನವಾಗಿದೆ. ಪ್ರತಿ ವರ್ಷದಂದು ಮಾರ್ಚ್ 8ರಂದು ಈ ದಿನ ಆಚರಿಸಲಾಗುತ್ತಿದೆ. ಅಧಿಕಾರ ಮತ್ತು ಅವಕಾಶಗಳನ್ನು ಪಡೆಯುವಲ್ಲಿ ಎಲ್ಲರೂ ಸಮಾನರು ಎಂಬುದನ್ನು ಗಮನದಲ್ಲಿರಿಸಿ ಸಮಾನ ಹಕ್ಕುಗಳು, ಸಬಲೀಕರಣ ಮತ್ತು ಸಮಾನತೆ ಎಂಬುದು 2025ನೇ ವರ್ಷದ ಅಂತಾರಾಷ್ಟ್ರೀಯ ಮಹಿಳಾದಿನದ ಧ್ಯೇಯವಾಕ್ಯವಾಗಿದೆ.
ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲಿ ಕೂಡ ಗಣನೀಯ ಸಾಧನೆ ಮಾಡುತ್ತಿದ್ದು ಅವರ ಸೇವೆಯನ್ನು ಗೌರವ ಸೂಚ್ಯಕವಾಗಿ ನೆನಪಿಸುವ ಈ ದಿನದ ಆಚರಣೆ ಇಂದು ನಿನ್ನೆಯದಲ್ಲ ಬದಲಾಗಿ ಅನೇಕ ವರ್ಷದಿಂದಲೂ ಚಾಲ್ತಿಯಲ್ಲಿದೆ. ಹಿಂದೆ ಮಹಿಳೆಯರ ವಿರುದ್ಧ ಶೋಷಣೆ, ಅನ್ಯಾಯ, ಅಸಮಾನತೆ, ದೌರ್ಜನ್ಯ ನಡೆಯುತ್ತಿದ್ದು ಅವುಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದವರೆಗೂ ಅನೇಕ ಚರ್ಚೆಗಳು ನಡೆದಿವೆ. 1908ರಲ್ಲಿ ನ್ಯೂಯಾರ್ಕ್ ಸಿಟಿಯ 15000ಕ್ಕೂ ಅಧಿಕ ಮಹಿಳೆಯರು ಈ ದೌರ್ಜನ್ಯ ಖಂಡಿಸಿ ತಮಗೂ ಸಮಾನ ವೇತನ ನೀಡಬೇಕು, ಮತದಾನದ ಹಕ್ಕು ನೀಡಬೇಕು, ಕೆಲಸದ ಅವಧಿ ಕಡಿಮೆಗೊಳಿಸಬೇಕು ಎಂಬ ಅನೇಕ ಬೇಡಿಕೆಯನ್ನು ಸರಕಾರದ ಮುಂದಿಟ್ಟು ಪ್ರತಿಭಟನೆ ಮಾಡಿದರು.
ಈ ಘಟನೆ ಬಳಿಕ ಒಂದು ವರ್ಷದ ತರುವಾಯ 1909ರಲ್ಲಿ ಅಮೆರಿಕದಲ್ಲಿ ವಿಶ್ವದ ಮೊಟ್ಟ ಮೊದಲ ಮಹಿಳಾದಿನಾಚರಣೆ ಆಚರಿಸಲಾಯಿತು. ಇದಾಗಿ ಒಂದು ವರ್ಷದ ತನಕ ವಿಶ್ವದ ನಾನಾ ಭಾಗದಲ್ಲಿ ಮಹಿಳೆಯರ ಶೋಷಣೆ ಬಗ್ಗೆ ವಿವಿಧ ಕಾನ್ಫರೆನ್ಸ್ ಕಾರ್ಯಕ್ರಮಗಳು ವಿಶ್ವ ಮಟ್ಟದಲ್ಲಿ ಸುದ್ದಿಯಾಯಿತು. 1911 ರ ಮಾರ್ಚ್ 19ರಂದು ಡೆನ್ಮಾರ್ಕ್, ಆಸ್ಟ್ರೀಯಾ, ಜರ್ಮನ್ ಮತ್ತು ಸ್ವಿಡ್ಜರ್ಲ್ಯಾಂಡ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಅದ್ಧೂರಿಯಾಗಿ ಆಚರಿಸಲಾಯಿತು. 1914ರಂದು ರಷ್ಯಾದಲ್ಲಿ ಫೆಬ್ರವರಿ 23ರಂದು ಜಾರಿಗೆ ತಂದಿತ್ತು ಬಳಿಕ ಎಲ್ಲ ರಾಷ್ಟ್ರಗಳ ಸಮ್ಮತಿಯಿಂದ ಪ್ರತೀ ವರ್ಷ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ನಿರ್ಧಾರವನ್ನು ಕೈಗೊಳ್ಳಲಾಯಿತು.
ಇದನ್ನು ಓದಿ:Women Walkathon: ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು 3ನೇ ಆವೃತ್ತಿಯ “ವುಮೆನ್ ವಾಕಥಾನ್” ಆಯೋಜನೆ
ಮಹತ್ವವೇನು?:
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿಕೆಗೆ ಬೆಂಬಲಿಸುತ್ತಿದೆ. ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತ ಗೊಳಿಸಿ ಸಮಾನತೆಯ ಪರಿಪಾಠ ತಿಳಿಸುವ ನೆಲೆಯಲ್ಲಿ ಬಹಳ ಮಹತ್ವ ಪೂರ್ಣವಾಗಲಿದೆ. ಅಸಮಾನತೆ, ಲಿಂಗತಾರತಮ್ಯ ಇತ್ಯಾದಿ ಸಮಾಜದ ಕಟ್ಟು ಪಾಡುಗಳ ವಿರುದ್ಧ ಮಹಿಳೆಗೆ ಬಲ ತುಂಬುವ ನೆಲೆಯಲ್ಲಿ ಮಹಿಳಾ ದಿನಾಚರಣೆ ಬಹಳ ಅರ್ಥಪೂರ್ಣ ಎನಿಸಲಿದೆ.