World Water Day 2026: ನೀರನ್ನು ಉಳಿಸೋಣ, ಭವಿಷ್ಯವನ್ನು ಕಾಪಾಡೋಣ
ನೀರೇ ಜೀವದ ಮೂಲ. ಅದರ ಸಂರಕ್ಷಣೆ ಇಲ್ಲದೆ ಭವಿಷ್ಯ ಅಸಾಧ್ಯ. ಜಲಮೂಲಗಳನ್ನು ಕಾಪಾಡುವುದು ಮತ್ತು ಮಿತವಾಗಿ ಬಳಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ವಿಶ್ವ ಜಲ ದಿನ ಮೂಲ ತತ್ವ. ಹಾಗಾಗಿ ಮಾರ್ಚ್ 23 ರಂದು ವಿಶ್ವ ಜಲ ದಿನ ಎಂದು ಆಚರಿಸಿಕೊಂಡು ಬರಲಾಗುತ್ತಿದ್ದು, ಎಲ್ಲೆಡೆ ನೀರಿನ ಮಹತ್ವದ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ.
ವಿಶ್ವ ಜಲ ದಿನ -
ಬೆಂಗಳೂರು: ಜಲವೆಂಬುದು ಜೀವಜಗತ್ತಿನ ಮೂಲಾಧಾರ. ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೂ ನೀರು ಅತ್ಯಾವಶ್ಯಕ. ನೀರಿಲ್ಲದೆ ಜೀವನವೇ ಅಸಾಧ್ಯ. ಆದ್ದರಿಂದಲೇ ಮಾನವ ನಾಗರಿಕತೆಗಳ ಬೆಳವಣಿಗೆ ಬಹುತೇಕ ನದಿಗಳ ತೀರದಲ್ಲಿಯೇ ನಡೆದಿದೆ. ನೀರು ಇರುವ ಕಡೆ ಜೀವಸಂಕುಲ ಸಮೃದ್ಧವಾಗಿದ್ದು, ನೀರಿಲ್ಲದ ಪ್ರದೇಶಗಳು ಬರಡು ಭೂಮಿಯಾಗಿ ಮಾರ್ಪಟ್ಟಿವೆ.
ನೀರಿನ ಮಹತ್ವವನ್ನು ಅರಿತ ಜನರು ಅದನ್ನು ಪವಿತ್ರವಾಗಿ ಕಂಡು ಪೂಜಿಸಿದ್ದಾರೆ. ಭಾರತದಲ್ಲಿ ನೀರನ್ನು ದೇವತೆಯಂತೆ ಗೌರವಿಸಲಾಗುತ್ತದೆ. ನದಿಗಳು, ಕೆರೆಗಳು ಸೇರಿದಂತೆ ಜಲಮೂಲಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಆದರೆ ಇಂತಹ ಅಮೂಲ್ಯ ಸಂಪತ್ತನ್ನು ಕಾಪಾಡುವ ಜವಾಬ್ದಾರಿ ನಮ್ಮದೆ. ಮುಂದಿನ ಪೀಳಿಗೆಗೂ ಶುದ್ಧ ಮತ್ತು ಸುರಕ್ಷಿತ ನೀರನ್ನು ಒದಗಿಸುವುದು ನಮ್ಮ ಪ್ರಮುಖ ಕರ್ತವ್ಯವಾಗಿದೆ. ಇದೇ ಸಂದೇಶವನ್ನು ಹರಡುವ ಉದ್ದೇಶದಿಂದ ಪ್ರತಿವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು(World Water Day) ಆಚರಿಸಲಾಗುತ್ತದೆ.
ನೀರು ಜೀವಕ್ಕೆ ಅನಿವಾರ್ಯ. ಆಹಾರವಿಲ್ಲದೆ ಕೆಲವು ದಿನ ಬದುಕಬಹುದು, ಆದರೆ ನೀರಿಲ್ಲದೆ ಜೀವನ ಅಸಾಧ್ಯ. ಆದರೆ ಮಾನವನ ಅತಿಯಾದ ಸ್ವಾರ್ಥದಿಂದ ಅನೇಕ ಜಲಮೂಲಗಳು ಇಂದು ಅಪಾಯದಲ್ಲಿವೆ. ಅರಣ್ಯ ನಾಶ, ಹವಾಮಾನ ಬದಲಾವಣೆ ಹಾಗೂ ಅಸಮರ್ಪಕ ಬಳಕೆಯಿಂದ ನೀರಿನ ಮೂಲಗಳು ಕ್ಷೀಣಿಸುತ್ತಿವೆ. ಹೀಗಾಗಿ ನೀರಿನ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ.
ಹಾಗಾಗಿ ಮಾರ್ಚ್ 23 ರಂದು ವಿಶ್ವ ಜಲ ದಿನ ಎಂದು ಆಚರಿಸಿಕೊಂಡು ಬರಲಾಗುತ್ತಿದ್ದು, ಎಲ್ಲೆಡೆ ನೀರಿನ ಮಹತ್ವದ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಜಲ ದಿನದ ಹಿನ್ನೆಲೆ:
1992ರಲ್ಲಿ ರಿಯೊ ಡಿ ಜನೈರೋದಲ್ಲಿ ನಡೆದ ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಜಲದ ಮಹತ್ವದ ಬಗ್ಗೆ ಚರ್ಚಿಸಿ, ವಿಶೇಷ ದಿನ ಆಚರಿಸುವ ಸಲಹೆ ನೀಡಲಾಯಿತು. ನಂತರ 1993 ಮಾರ್ಚ್ 22ರಂದು ಮೊದಲ ಬಾರಿಗೆ ವಿಶ್ವ ಜಲ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷವೂ ಈ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತಿದೆ.
ವಿಶ್ವ ಜಲ ದಿನದ ಉದ್ದೇಶ:
ಈ ದಿನದ ಮುಖ್ಯ ಗುರಿ ಸಿಹಿ ನೀರಿನ ಮೂಲಗಳನ್ನು ಸಂರಕ್ಷಿಸಿ, ಎಲ್ಲರಿಗೂ ಶುದ್ಧ ನೀರು ಲಭ್ಯವಾಗುವಂತೆ ಮಾಡುವುದಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ನೀರಿನ ಸಮರ್ಪಕ ನಿರ್ವಹಣೆ ಅತ್ಯವಶ್ಯಕ. ಈ ದಿನದಂದು ವಿವಿಧ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
ಇಂದು ವಿಶ್ವದ ಹಲವಾರು ಭಾಗಗಳಲ್ಲಿ ಜನರು ಶುದ್ಧ ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ. ಭವಿಷ್ಯದಲ್ಲಿ ಈ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಹವಾಮಾನ ಬದಲಾವಣೆ, ಅತಿಯಾದ ಬಳಕೆ ಹಾಗೂ ನೈರ್ಮಲ್ಯದ ಕೊರತೆಗಳಿಂದ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಅನೇಕ ಮಕ್ಕಳ ಆರೋಗ್ಯಕ್ಕೂ ಇದರಿಂದ ಅಪಾಯ ಉಂಟಾಗುತ್ತಿದೆ.
ಹೀಗಾಗಿ ನೀರನ್ನು ಉಳಿಸುವುದು, ಮಿತವಾಗಿ ಬಳಸುವುದು ಮತ್ತು ಜಲಮೂಲಗಳನ್ನು ಕಾಪಾಡುವುದು ನಮ್ಮ ಪ್ರತಿಯೊಬ್ಬರ ಜವಾಬ್ದಾರಿ. ನೀರು ಉಳಿಸಿದರೆ ಜೀವನ ಉಳಿಯುತ್ತದೆ ಎಂಬುದನ್ನು ಮರೆಯಬಾರದು