ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Readers Colony: ಸಮಯೋಚಿತ ಸಂಪಾದಕೀಯ

ವಿಶ್ವವಾಣಿ ಫೆ.21ರ ಸಂಪಾದಕೀಯವು ಅತ್ಯಂತ ಗಂಭೀರ ಮತ್ತು ಸಮಯೋಚಿತವಾಗಿತ್ತು. ಅರಣ್ಯ ನಮ್ಮೆಲ್ಲರ ಸಂಪತ್ತು. ಅದರ ರಕ್ಷಣೆ ನಮ್ಮೆಲ್ಲರ ಆದ್ಯಕರ್ತವ್ಯ. ಬೇಸಗೆಯಲ್ಲಿ ಅಗ್ನಿ ಅವಘಡಗಳು ಹೆಚ್ಚಾಗುತ್ತವೆ. ಅವುಗಳ ನಿಯಂತ್ರಣಕ್ಕೆ ವಿದೇಶಗಳಲ್ಲಿ ಡ್ರೋನ್, ಹೆಲಿಕಾ ಪ್ಟರ್‌ನಂಥ ಮಾರ್ಗೋಪಾಯಗಳನ್ನು ಬಳಸುತ್ತಿದ್ದಾರೆ

ಸಮಯೋಚಿತ ಸಂಪಾದಕೀಯ

Profile Ashok Nayak Feb 23, 2025 6:12 PM

ವಿಶ್ವವಾಣಿ ಫೆ.21ರ ಸಂಪಾದಕೀಯವು ಅತ್ಯಂತ ಗಂಭೀರ ಮತ್ತು ಸಮಯೋಚಿತವಾಗಿತ್ತು. ಅರಣ್ಯ ನಮ್ಮೆಲ್ಲರ ಸಂಪತ್ತು. ಅದರ ರಕ್ಷಣೆ ನಮ್ಮೆಲ್ಲರ ಆದ್ಯಕರ್ತವ್ಯ. ಬೇಸಗೆಯಲ್ಲಿ ಅಗ್ನಿ ಅವಘಡಗಳು ಹೆಚ್ಚಾಗುತ್ತವೆ. ಅವುಗಳ ನಿಯಂತ್ರಣಕ್ಕೆ ವಿದೇಶಗಳಲ್ಲಿ ಡ್ರೋನ್, ಹೆಲಿಕಾ ಪ್ಟರ್‌ನಂಥ ಮಾರ್ಗೋಪಾಯಗಳನ್ನು ಬಳಸುತ್ತಿದ್ದಾರೆ.

ಆದರೆ ನಮ್ಮಲ್ಲಿ ಅರಣ್ಯ ಸಿಬ್ಬಂದಿಗಳು ಈಗಲೂ ಗಿಡದ ತೊಪ್ಪಲನ್ನು ಹಿಡಿದು ನಿಲ್ಲುತ್ತಾರೆ. ಅವರಿಗೆ ಅರಿಯಾದ ಅಗ್ನಿನಿರೋಧಕ ಕೈಗವಚ, ದೇಹದ ರಕ್ಷಾ ಕವಚಗಳೂ ಇರುವುದಿಲ್ಲ. ಅರಣ್ಯದ ಮತ್ತು ಅರಣ್ಯ ಸಿಬ್ಬಂದಿಯ ಆರ್ತನಾದವನ್ನು ಕೇಳುವವರಾರು? ರಾಜಕೀಯ ಪಕ್ಷಗಳಲ್ಲಿನ ಭಿನ್ನಾಭಿಪ್ರಾಯಗಳು ಶಮನವಾಗಿ ಮಾಮೂಲು ಸ್ಥಿತಿ ರೂಪುಗೊಳ್ಳಲು ಕೆಲ ದಿನಗಳು ಸಾಕು.

ಇದನ್ನೂ ಓದಿ: Vishwavani Editorial: ಖಾತಾ ಗೊಂದಲಕ್ಕೆ ತೆರೆ ಬೀಳಲಿ

ಆದರೆ ಒಮ್ಮೆ ಅರಣ್ಯವು ಸುಟ್ಟುಹೋದರೆ ಆ ಪ್ರದೇಶವು ಮರಳಿ ಜೀವಿಗಳ ತಾಣವಾಗಲು ಹತ್ತಾರು ವರ್ಷಗಳೇ ಬೇಕು. ನಮ್ಮ ಆಳುಗರು ಈ ಕುರಿತು ಗಂಭೀರವಾಗಿ ಆಲೋಚಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು.

- ಎಸ್.ನಾಗರಾಜ ನಾಗೂರ, ಬಾಗಲಕೋಟೆ

ಸುಂದರ ಪ್ರಸ್ತುತಿ

ಶಿಶಿರ್ ಹೆಗಡೆಯವರ ‘ಶಿಶಿರಕಾಲ’ ಅಂಕಣ ಬರಹವು (ವಿಶ್ವವಾಣಿ ಫೆ.21) ಬಹಳ ಹಿಡಿಸಿತು. ವಿಷಯದ ಆಯ್ಕೆ, ಅದರ ಪ್ರಸ್ತುತಿ ಮತ್ತು ನೀಡಿದ ಉದಾಹರಣೆಗಳು ಚೆನ್ನಾಗಿದ್ದವು. ಆಂಗ್ಲಭಾಷಾ ಕವಿ ಜಾನ್ ಕೀಟ್ಸ್‌ನ ಅ ಠಿeಜ್ಞಿಜ ಟ್ಛ ಚಿಛಿZಠಿqs ಜಿo Z ಟqs ಟ್ಟಛಿqಛ್ಟಿ ಎಂಬ ಸಾಲು ಸೌಂದರ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ಅನುಭೂತಿ ಅಲ್ಲವೇ?

- ನಾರಾಯಣ್ ಕಡಿವಾಳ್, ಬೆಂಗಳೂರು

ಗುಣಮಟ್ಟ ಉತ್ತಮಗೊಳ್ಳಲಿ

ಬೆಂಗಳೂರನ್ನು ಕೇವಲ 2-3 ವರ್ಷಗಳಲ್ಲಿ ಬದಲಾಯಿಸಲು ಸಾಧ್ಯವಿಲ್ಲ, ಅದು ಭಗವಂತ ನೇ ಇಳಿದುಬಂದರೂ ಸಾಧ್ಯವಿಲ್ಲದ ಕೆಲಸ ಎಂದಿದ್ದಾರೆ ರಾಜ್ಯದ ಉಪಮುಖ್ಯಮಂತ್ರಿ ಯವರು. ಅಲ್ಲಿಗೆ, ನಗರವನ್ನು ಈಗಿನ ಸರಕಾರದ ಅವಧಿಯಲ್ಲಿ ಉತ್ತಮ ಪಡಿಸಲು ಸಾಧ್ಯ ವಿಲ್ಲ ಎಂದು ನಾವು ಭಾವಿಸಬಹುದೇ? ನಿಗದಿತ ಗಡುವಿನೊಳಗೆ ನಗರದ ಎಲ್ಲ ರಸ್ತೆಗಳ ನ್ನು ಮುಚ್ಚದಿದ್ದರೆ ಸಂಬಂಧಿತ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾ ಗುವುದು ಎಂದು ಅವರು ಕಳೆದ ವರ್ಷ ಖಡಕ್ ಎಚ್ಚರಿಕೆಯನ್ನು ನೀಡಿದ್ದರು. ಆದರೆ ನಿಗದಿತ ಗಡು ವಿನ ನಂತರ ರಸ್ತೆಗಳೂ ಗುಂಡಿ ಮುಕ್ತವಾಗಲಿಲ್ಲ, ಅಧಿಕಾರಿಗಳ ವಿರುದ್ಧ ಕ್ರಮವೂ ಜರುಗಲಿಲ್ಲ.

ಗುಂಡಿಯನ್ನು ಮುಚ್ಚಲು ಮಳೆ ಅಡ್ಡಿಯಾಗಿದೆ ಎಂಬ ಅಧಕಾರಿಗಳ ಸಬೂಬನ್ನು ಕೇಳು ತ್ತಲೇ ಬಂದಿದ್ದ ಮತ್ತು ಈ ಬೇಸಗೆಯಲ್ಲಾದರೂ ರಸ್ತೆಗಳು ಗುಂಡಿಮುಕ್ತವಾಗಬಹುದು ಎಂದು ನಿರೀಕ್ಷಿಸಿದ್ದ ಜನರಿಗೆ ಈಗ ತಣ್ಣೀರು ಎರಚಿದಂತಾಗಿದೆ. ದೇಶದ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆಂಗಳೂರಿ ನಲ್ಲಿ ಇತ್ತೀಚೆಗಷ್ಟೇ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿ ಸಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಉತ್ಸಾಹಿ ಹೂಡಿಕೆದಾರರಿಗೆ, ಉಪಮುಖ್ಯಮಂತ್ರಿಗಳ ಈ ಹೇಳಿಕೆ ನಿರಾಸೆಯನ್ನು ಉಂಟುಮಾಡುವುದಿಲ್ಲವೇ? ಆಳುಗರು ತಮ್ಮ ಆದ್ಯತೆಗಳ ಬಗ್ಗೆ ಮರುಚಿಂತನೆ ನಡೆಸಬೇಕಾದ ಅಗತ್ಯವಿದೆ. ಸುರಂಗ ರಸ್ತೆಗಳ ನಿರ್ಮಾಣಕ್ಕೆ ಮುಂದಾಗುವ ಮೊದಲು, ಉತ್ತಮ ರಸ್ತೆಗಳನ್ನು ನಿರ್ಮಿಸಿ, ಸಾರ್ವಜನಿಕ ಸಾರಿಗೆಯನ್ನು ಉತ್ತಮಪಡಿಸಿ, ಪ್ರಯಾಣಿಕರಿಗೆ ಕೈಗೆಟಕುವ ಪ್ರಯಾಣದರವನ್ನು ನಿಗದಿಪಡಿಸಿದರೆ, ಕೆಳ ಮತ್ತು ಮಧ್ಯಮ ವರ್ಗದವರಾದರೂ ಸ್ವಂತ ವಾಹನಗಳನ್ನು ಹೊಂದುವುದು ಕಡಿಮೆಯಾಗಿ, ರಸ್ತೆಗಳ ಮೇಲಿನ ಒತ್ತಡ ಮತ್ತು ದಟ್ಟಣೆ ತಗ್ಗುತ್ತವೆ. ಆಳುಗರು ಈ ದಿಸೆಯಲ್ಲಿ ಗಂಭೀರವಾಗಿ ಆಲೋಚಿಸಲಿ.

- ತಿಪ್ಪೂರು ಪುಟ್ಟೇಗೌಡ, ಬೆಂಗಳೂರು