Odugara Oni: ಅತ್ಯಾಚಾರಿಗಳಿಗೆ ಶಿಕ್ಷೆಯಾಗಲಿ
ಗ್ರಾಮಾಂತರ ಪ್ರದೇಶದಲ್ಲಿ ಪಂಚಾಯಿತಿ ಕಟ್ಟೆಯಲ್ಲಿ ತೀರ್ಮಾನವಾಗಿ, ಅತ್ಯಾಚಾರ ಆರೋಪಿಗೆ ಲಕ್ಷಾಂತರ ರೂಪಾಯಿಗಳ ದಂಡ ವಿಧಿಸಿ ಸಂತ್ರಸ್ತೆಗೆ ಅರ್ಧ ಭಾಗ ಹಣ ಕೊಟ್ಟು ಉಳಿದದ್ದನ್ನು ಪಂಚಾ ಯಿತಿ ಕಟ್ಟೆಯವರು ಹಂಚಿಕೊಂಡಿರುವುದುಂಟು, ಹೀಗಾಗಿ ಅತ್ಯಾಚಾರದಂತಹ ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣ ಗಳು, ಬಹಿರಂಗವಾಗಿ ದಾಖಲಾಗುವುದೇ ಇಲ್ಲ, ತೆರೆ - ಮರೆಯ ಇತ್ಯರ್ಥ ಗೊಳ್ಳುತ್ತವೆ
ಓದುಗರ ಓಣಿ
ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 2803 ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿದ್ದು, ಕೇವಲ 75 ಪ್ರಕರಣಗಳಲ್ಲಷ್ಟೇ ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಯಾಗಿದೆ. ಅಂದರೆ ಶೇಕಡಾ 3 ರಿಂದ 4 ರಷ್ಟು ಅತ್ಯಾಚಾರ ಆರೋಪಗಳು ಪ್ರಕರಣಗಳು ಸಾಬೀತಾ ಗಿವೆ ಎಂದಾಯಿತು, ಇದಕ್ಕೆ ಮುಖ್ಯ ಕಾರಣ ಸಾಕ್ಷ್ಯಾಧಾರಗಳ ಕೊರತೆ, ಸುಳ್ಳು ಪ್ರಕರಣಗಳು ಹಾಗೂ ವಿಚಾರಣೆ ವಿಳಂಬವಾಗುವುದು ಕಾರಣ ಎಂದು ವರದಿಯಾಗಿದೆ.
ಆದರೆ ಈ ಕಾರಣಗಳಿಗಿಂತಲೂ, ಹಣ, ರಾಜಕೀಯ ಒತ್ತಡಗಳಿಗಾಗಿ, ಪೊಲೀಸರು ಎಫ್ಐಆರ್ ಹಂತದಲ್ಲಿಯೇ ಕೇಸ್ ಅನ್ನು ದುರ್ಬಲ ಗೊಳಿಸುವುದು. ಇನ್ನು ಕೆಲವು ಪ್ರಕರಣಗಳು ಪೊಲೀಸ್ ಠಾಣೆಯ ರಾಜಿಯಾಗಿ ಪ್ರಕರಣಗಳೇ ದಾಖಲಾಗುವುದಿಲ್ಲ, ಕೆಲವು ಗ್ರಾಮಾಂತರ ಪ್ರದೇಶದಲ್ಲಿ ಪಂಚಾಯಿತಿ ಕಟ್ಟೆಯಲ್ಲಿ ತೀರ್ಮಾನವಾಗಿ, ಅತ್ಯಾಚಾರ ಆರೋಪಿಗೆ ಲಕ್ಷಾಂತರ ರೂಪಾಯಿಗಳ ದಂಡ ವಿಧಿಸಿ ಸಂತ್ರಸ್ತೆಗೆ ಅರ್ಧ ಭಾಗ ಹಣ ಕೊಟ್ಟು ಉಳಿದದ್ದನ್ನು ಪಂಚಾಯಿತಿ ಕಟ್ಟೆಯವರು ಹಂಚಿಕೊಂಡಿರುವುದುಂಟು, ಹೀಗಾಗಿ ಅತ್ಯಾಚಾರದಂತಹ ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣ ಗಳು, ಬಹಿರಂಗವಾಗಿ ದಾಖಲಾಗುವುದೇ ಇಲ್ಲ, ತೆರೆ - ಮರೆಯ ಇತ್ಯರ್ಥಗೊಳ್ಳುತ್ತವೆ. ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗದ ಹೊರತು, ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುಗುತ್ತಲೇ ಹೋಗುತ್ತವೆ.
ಬೂಕನಕೆರೆ ವಿಜೇಂದ್ರ, ಕುವೆಂಪು ನಗರ ಮೈಸೂರು
*
ಪಡಿತರ ಅಕ್ಕಿ ದುರ್ಬಳಕೆ ತಪ್ಪಲಿ
ಪಡಿತರ ಅಕ್ಕಿಯನ್ನು ಬಳ್ಳಾರಿಯಿಂದ ಸಿಂಧನೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಆಹಾರ ನಿರೀಕ್ಷಕರು ದಾಳಿ ನಡೆಸಿ 164 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಂಡ ಸುದ್ದಿ ಪತ್ರಿಕೆಗಳಲ್ಲಿ ವರದಿ ಯಾಗಿದೆ. ಹೀಗೆ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿಯನ್ನು ಮುಟ್ಟುಗೋಲು ಹಾಕಿ ಕೊಳ್ಳುವ ಪ್ರಕರಣಗಳು ಪದೇ ಪದೇ ನಡೆಯುತ್ತಿವೆ.
ಸರಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡುವ ಸವಲತ್ತುಗಳನ್ನು ಪಡೆದುಕೊಳ್ಳಲು ಅನರ್ಹ ರು ಸಹ ವಾಮ ಮಾರ್ಗದಲ್ಲಿ ಬಿಪಿಎಲ್ ಪಡಿತರ ಚೀಟಿ ಮಾಡಿಸಿಕೊಂಡು ತಮಗೆ ಬೇಡವಾದ ಪಡಿತರ ಧಾನ್ಯಗಳನ್ನು ಅಧಿಕ ಬೆಲೆಗೆ ಮಾರಿಕೊಂಡು ಮಧ್ಯವರ್ತಿಗಳಿಗೆ ಲಾಭ ಮಾಡಿಕೊಟ್ಟು ಸರಕಾರಕ್ಕೆ ನಷ್ಟವನ್ನುಂಟು ಮಾಡುತ್ತಿದ್ದಾರೆ.
ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ವಾಗುತ್ತಿರುವುದು ಸರ್ವೇ ಸಾಮಾನ್ಯ ವಾಗಿಬಿಟ್ಟಿದೆ. ಪಡಿತರ ಅಕ್ಕಿಗೆ ಪಾಲಿಶ್ ಮಾಡಿಸಿ ಉತ್ತಮ ದರ್ಜೆಯ ಅಕ್ಕಿಯೆಂದು ಬಿಂಬಿಸಿ ಪಕ್ಕದ ರಾಜ್ಯಗಳಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ. ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಗುರುತಿಸಿ ಮುಟ್ಟು ಗೋಲು ಹಾಕಿಕೊಳ್ಳುವ ಕೆಲಸ ಆಮೆಗತಿಯಲ್ಲಿ ಸಾಗಿದೆ. ಬಿಪಿ ಎಲ್ ಪಡಿತರ ಚೀಟಿ ಪಡೆದುಕೊಳ್ಳಲು ಪ್ರಸ್ತುತ ಇರುವ ಮಾನದಂಡಗಳನ್ನು ಪರಿಷ್ಕರಿಸಿ ಅಕ್ರಮ ಗಳಿಗೆ ಕಡಿವಾಣ ಹಾಕುವುದರ ಮೂಲಕ ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸ ಬೇಕಾಗಿದೆ.
ಜಿ.ನಾಗೇಂದ್ರ ಕಾವೂರು, ಸಂಡೂರು