ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Photos: ʻನಾನು ಶಿವನ ಅಚ್ಚುಮೆಚ್ಚಿನ ಮಗು...ʼ; ಒಬ್ಬಂಟಿಯಾಗಿ ಕೇದಾರನಾಥ ಯಾತ್ರೆ ಮಾಡಿದ ನಟಿ ಕೃತ್ತಿಕಾ ರವೀಂದ್ರ

ನಟಿ ಕೃತ್ತಿಕಾ ರವೀಂದ್ರ ಅವರಿಗೆ ಪ್ರವಾಸ ಮಾಡುವುದು ಎಂದರೆ, ಅಚ್ಚುಮೆಚ್ಚು. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದನ್ನು ಅವರು ಎಂದಿಗೂ ಮಿಸ್‌ ಮಾಡಿಕೊಳ್ಳುವುದಿಲ್ಲ. ಈ ಹಿಂದೆ ದೇಶದ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ ಕೃತ್ತಿಕಾ ಅವರು ಈ ಬಾರಿ ಕೇದಾರನಾಥ ಯಾತ್ರೆ ಮಾಡಿದ್ದಾರೆ. "ಕೇದಾರನಾಥಕ್ಕೆ ಒಬ್ಬಳೇ ಟ್ರೆಕ್ (Solo Trek) ಹೋಗಬೇಕೆಂಬ ಆಸೆ ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಆದರೆ ಅಷ್ಟೊಂದು ಆತ್ಮವಿಶ್ವಾಸವಿರಲಿಲ್ಲ. ಒಂದು ತಿಂಗಳ ಹಿಂದೆ ಈ ಯಾತ್ರೆಯನ್ನು ಯೋಜಿಸಿದಾಗ ನಾನು ನಿಜಕ್ಕೂ ಹಿಂಜರಿಯುತ್ತಿದ್ದೆ. ಆದರೆ ಆ ಪರಶಿವನ ಮೇಲೆ ನನಗೆ ಅಪಾರ ನಂಬಿಕೆಯಿತ್ತು. ಹೇಗಾದರೂ ಮಾಡಿ ಆತನೇ ನನಗೆ ಎಲ್ಲವನ್ನೂ ಸುಲಭವಾಗಿಸುತ್ತಾನೆ ಎಂದುಕೊಂಡಿದ್ದೆ. ಆತ ಮಾಡಿದ್ದೂ ಕೂಡ ಅದನ್ನೇ.." ಎಂದು ಹೇಳಿರುವ ಕೃತ್ತಿಕಾ ಈ ಯಾತ್ರೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Photos: ಏಕಾಂಗಿಯಾಗಿ ಕೇದಾರನಾಥ ಯಾತ್ರೆ ಮಾಡಿದ ನಟಿ ಕೃತ್ತಿಕಾ ರವೀಂದ್ರ

-

Avinash GR
Avinash GR May 12, 2026 3:04 PM