ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Star Fashion 2026: ಅರ್ಗಾನ್ಜಾ ಸಿಲ್ಕ್‌ನಲ್ಲೂ ಬಂತು ರೋಸ್‌ ಮಿನಿ ಡ್ರೆಸ್‌

ಈ ಬೇಸಿಗೆಯಲ್ಲಿ ಹಾಲಿವುಡ್‌-ಬಾಲಿವುಡ್‌ ಸೆಲೆಬ್ರೆಟಿಗಳನ್ನು ಮಾತ್ರವಲ್ಲ, ಹೈ ಫ್ಯಾಷನ್‌ ಫಾಲೋ ಮಾಡುವ ಅಲ್ಟ್ರಾ ಮಾಡರ್ನ್‌ ಹುಡುಗಿಯರನ್ನು ಅರ್ಗಾನ್ಜಾ ಸಿಲ್ಕ್‌ನ ರೋಸ್‌ ಮಿನಿ ಡ್ರೆಸ್‌ಗಳು ಸವಾರಿ ಮಾಡುತ್ತಿವೆ. ಹಾಗಾದಲ್ಲಿ ಇದ್ಯಾವ ಬಗೆಯ ಡ್ರೆಸ್‌? ಇಲ್ಲಿದೆ ವಿವರ.

ಅರ್ಗಾನ್ಜಾ ಸಿಲ್ಕ್‌ನಲ್ಲೂ ಬಂತು ರೋಸ್‌ ಮಿನಿ ಡ್ರೆಸ್‌

ಚಿತ್ರಗಳು: ಪಲಕ್‌ ತಿವಾರಿ, ನಟಿ -

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬೇಸಿಗೆಯ ಫ್ಯಾಷನ್‌ನಲ್ಲಿ ಅರ್ಗಾನ್ಜಾ ಸಿಲ್ಕ್‌ನ ರೋಸ್‌ ಮಿನಿ ಡ್ರೆಸ್‌ಗಳು (Star Fashion 2026), ಸೆಲೆಬ್ರೆಟಿ ಲುಕ್‌ ಬಯಸುವ ಅಲ್ಟ್ರಾ ಮಾಡರ್ನ್‌ ಯುವತಿಯರನ್ನು ಸವಾರಿ ಮಾಡುತ್ತಿವೆ. ಹೌದು, ಈಗಾಗಲೇ ಹಾಲಿವುಡ್‌ ಹಾಗೂ ಬಾಲಿವುಡ್‌ ಸೆಲೆಬ್ರೆಟಿಗಳನ್ನು ಆವರಿಸಿಕೊಂಡಿರುವ ಈ ಶೈಲಿಯ ಮಿನಿ ಡ್ರೆಸ್‌ಗಳು ಇದೀಗ ನಮ್ಮಲ್ಲೂ ಕಾಲಿಟ್ಟಿದ್ದು, ಇಲ್ಲಿಯ ಹುಡುಗಿಯರ ಹೈ ಫ್ಯಾಷನ್‌ಗೆ ತಕ್ಕಂತೆ ವಿನ್ಯಾಸ ಬದಲಿಸಿಕೊಂಡಿವೆ. ಸಾಫ್ಟ್‌ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿದ್ದ ಇವು ಇದೀಗ ಅರ್ಗಾನ್ಜಾ ಸಿಲ್ಕ್‌ ಫ್ಯಾಬ್ರಿಕ್‌ನಲ್ಲಿಯೂ ಎಂಟ್ರಿ ನೀಡಿವೆ. ಪರಿಣಾಮ, ಹೈ ಫ್ಯಾಷನ್‌ ಫಾಲೋ ಮಾಡುವ ಜೆನ್‌ ಜಿ ಹುಡುಗಿಯರನ್ನು ಬರ ಸೆಳೆದಿವೆ.

ನಟಿ ಪಲಕ್‌ ತಿವಾರಿಯ ಗ್ಲಾಮರಸ್‌ ರೋಸ್‌ ಮಿನಿ ಡ್ರೆಸ್‌

ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಪಲಕ್‌ ತಿವಾರಿ ಧರಿಸಿದ್ದ, ಗುಲಾಬಿ ವರ್ಣದ ಅರ್ಗಾನ್ಜಾ ಸಿಲ್ಕ್‌ ಫ್ಯಾಬ್ರಿಕ್‌ನ ಪ್ರಿಂಟೆಡ್‌ ಮಿನಿ ಡ್ರೆಸ್‌, ಅವರ ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡ ನಂತರ ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಸೆಟ್‌ ಮಾಡಿತು. ಪರಿಣಾಮ, ಇದ್ದಕ್ಕಿದ್ದಂತೆ ಆನ್‌ಲೈನ್‌ ಶಾಪ್‌ಗಳಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿತು. ಅಲ್ಲದೇ, ಸೆಲೆಬ್ರೆಟಿಗಳ ಸರ್ಕಲ್‌ನಲ್ಲಿ ವೈರಲ್‌ ಕೂಡ ಆಯಿತು ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್‌ ರಣದೀಪ್‌. ಅವರ ಪ್ರಕಾರ, ಈ ಸೀಸನ್‌ಗೆ ತಕ್ಕಂತೆ ಬಿಡುಗಡೆಗೊಂಡಿದ್ದರಿಂದ ಪಾಪುಲರ್‌ ಆಗಲು ಕಾರಣವಾಯಿತು ಎನ್ನುತ್ತಾರೆ.

Rose mini dress

ಅರ್ಗಾನ್ಜಾ ಸಿಲ್ಕ್‌ ರೋಸ್‌ ಮಿನಿ ಡ್ರೆಸ್‌ ವಿಶೇಷತೆ

ಅಂದಹಾಗೆ, ಸ್ಲಿಮ್‌ ಆಗಿರುವವರಿಗೆ ಪರ್ಫೆಕ್ಟ್‌ ಆಗಿ ಮ್ಯಾಚ್‌ ಆಗುವ ಈ ಅರ್ಗಾನ್ಜಾ ಫ್ಯಾಬ್ರಿಕ್‌ನ ಮಿನಿ ಡ್ರೆಸ್‌, ಅಬ್‌ಸ್ಟ್ರಾಕ್ಟ್‌ ಪ್ರಿಂಟ್ಸ್‌ ಒಳಗೊಂಡಿದೆ. ಅಲ್ಲದೇ, ರೋಸ್‌ ಕಲರ್‌ನಲ್ಲಿ ಆಕರ್ಷಕವಾಗಿ ವಿನ್ಯಾಸಗೊಂಡಿದೆ. ಈ ಸೀಸನ್‌ಗೆ ಹೊಂದುವಂತೆ ಸ್ಟ್ರಾಪ್‌ಲೆಸ್‌ ಕೂಡ ಆಗಿದೆ. ಜತೆಗೆ ಧರಿಸುವವರ ಬಾಡಿ ಮಾಸ್‌ ಇಂಡೆಕ್ಸ್‌ ಹೈಲೈಟ್‌ ಮಾಡುತ್ತದೆ. ಗ್ಲಾಮರಸ್‌ ಆಗಿ ಬಿಂಬಿಸುವುದರ ಜತೆಗೆ ಸೆಲೆಬ್ರೆಟಿ ಲುಕ್‌ ನೀಡುತ್ತದೆ. ಇದು ಈ ಡ್ರೆಸ್‌ನ ವಿಶೇಷತೆ ಎನ್ನುತ್ತಾರೆ ಫ್ಯಾಷನಿಸ್ಟಾ ನಿಕಲ್‌.

organza silk

ಡ್ರೆಸ್‌ಗೆ ಮ್ಯಾಚಿಂಗ್‌ ಆಕರ್ಷಕ ಆಕ್ಸೆಸರೀಸ್‌

ಇನ್ನು, ಈ ಡ್ರೆಸ್‌ನೊಂದಿಗಿರುವ ಲಾಂಗ್‌ ಸ್ಕಾರ್ಫ್‌ನಂತಹ ಆಕ್ಸೆಸರೀಸನ್ನು ಫ್ಲವರ್‌ನಂತೆ ಟೈ ಮಾಡಿ, ಚೋಕರ್‌ನಂತೆಯೂ ಧರಿಸಬಹುದು. ಇದನ್ನೇ ನಟಿ ಪಲಕ್‌ ಕೂಡ ಮಾಡಿದ್ದಾರೆ. ಬೇಕಾದಲ್ಲಿ ಸ್ಟೋಲ್‌ನಂತೆ ಬಳಸಬಹುದು. ಇಲ್ಲವಾದಲ್ಲಿ ಹೇರ್‌ಬ್ಯಾಂಡ್‌ನಂತೆಯೂ ಟೈ ಮಾಡಬಹುದು. ನೆಕ್‌ ಟೈನಂತೆಯೂ ಕಟ್ಟಬಹುದು.

Star Fashion

ಪಾರ್ಟಿ ಪ್ರಿಯರ ವಾರ್ಡ್ರೋಬ್‌ ಸೇರಿದ ರೋಸ್‌ ಮಿನಿ ಅರ್ಗಾನ್ಜಾ ಡ್ರೆಸ್‌

ಒಟ್ಟಿನಲ್ಲಿ, ಹೈ ಫ್ಯಾಷನ್‌ಗೆ ಸಾಥ್‌ ನೀಡುವ ಇಂತಹ ಅರ್ಗಾನ್ಜಾ ರೋಸ್‌ ಮಿನಿ ಡ್ರೆಸ್‌ಗಳು ಸೆಲೆಬ್ರೆಟಿಗಳ ವಾರ್ಡ್ರೋಬ್‌ ಮಾತ್ರವಲ್ಲ, ಫ್ಯಾಷನ್‌ ಪ್ರಿಯರ ಹಾಗೂ ಪಾರ್ಟಿ ಪ್ರಿಯ ಅಲ್ಟ್ರಾ ಮಾಡರ್ನ್‌ ಹುಡುಗಿಯರ ವಾರ್ಡ್ರೋಬ್‌ ಕೂಡ ಸೇರಿವೆ. ಥಳಕು-ಬಳುಕಿನ ಲೋಕದಲ್ಲಿ ಸದ್ಯ ಹಂಗಾಮ ಎಬ್ಬಿಸಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)