Malayalam Movie: ಬೋಲ್ಡ್ ದೃಶ್ಯಗಳಿಂದಾಗಿ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ ಈ ಮಲಯಾಳಂ ಸಿನಿಮಾ
Malayalam Movie: ಮಲಯಾಳಂ ಚಿತ್ರ(Malayalam Film)ರಂಗದ ಬೋಲ್ಡ್ ರೊಮ್ಯಾಂಟಿಕ್ ಥ್ರಿಲ್ಲರ್(Romantic thriller)‘ಚತುರಂ’ (Chaturam) ಒಟಿಟಿ(OTT)ಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಕಡಿಮೆ ಬಂಡವಾಳದ ಚಿತ್ರಗಳು ಭಾರತೀಯ ಚಿತ್ರೋದ್ಯಮದಲ್ಲಿ ಗಮನಾರ್ಹ ಪ್ರಭಾವ ಬೀರುತ್ತಿರುವ ಈ ಸಂದರ್ಭದಲ್ಲಿ, ‘ಚತುರಂ’ ತನ್ನ ಕಥಾಹಂದರ ಮತ್ತು ಎಮೋಷನಲ್ ಡ್ರಾಮದಿಂದ ವಿಶೇಷ ಸ್ಥಾನ ಪಡೆದಿದೆ.



ಮಲಯಾಳಂ ಚಿತ್ರ(Malayalam Film)ರಂಗದ ಬೋಲ್ಡ್ ರೊಮ್ಯಾಂಟಿಕ್ ಥ್ರಿಲ್ಲರ್(Romantic thriller)‘ಚತುರಂ’ (Chaturam) ಒಟಿಟಿ(OTT)ಯಲ್ಲಿ ಸಖತ್ ಸದ್ದು ಮಾಡುತ್ತಿದೆ. ಕಡಿಮೆ ಬಂಡವಾಳದ ಚಿತ್ರಗಳು ಭಾರತೀಯ ಚಿತ್ರೋದ್ಯಮದಲ್ಲಿ ಗಮನಾರ್ಹ ಪ್ರಭಾವ ಬೀರುತ್ತಿರುವ ಈ ಸಂದರ್ಭದಲ್ಲಿ, ‘ಚತುರಂ’ ತನ್ನ ಕಥಾಹಂದರ ಮತ್ತು ಎಮೋಷನಲ್ ಡ್ರಾಮದಿಂದ ವಿಶೇಷ ಸ್ಥಾನ ಪಡೆದಿದೆ. ಸೈನಾ ಪ್ಲೇ ಒಟಿಟಿ ವೇದಿಕೆಯಲ್ಲಿ ತೆಲುಗು ಡಬ್ಬಿಂಗ್ನೊಂದಿಗೆ ಲಭ್ಯವಿರುವ ಈ ಚಿತ್ರ, ವೀಕ್ಷಕರನ್ನು ಸೆಳೆಯುತ್ತಿದೆ .

2022 ರಲ್ಲಿ ಬಿಡುಗಡೆಯಾದ ‘ಚತುರಂ’ ಚಿತ್ರವು ಇತ್ತೀಚೆಗೆ ಮತ್ತೆ ಸದ್ದು ಮಾಡೋಕೆ ಶುರು ಮಾಡಿದೆ. ಸಿದ್ಧಾರ್ಥ್ ಭಾರತನ್ ನಿರ್ದೇಶನದ ಈ ಚಿತ್ರದಲ್ಲಿ ಸ್ವಾಸಿಕಾ, ರೋಷನ್ ಮ್ಯಾಥ್ಯೂ ಮತ್ತು ಅಲೆನ್ಸಿಯರ್ ಲೇ ಲೋಪೆಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೋಚಕ ಕಥಾವಸ್ತು ಮತ್ತು ಭಾವನಾತ್ಮಕವಾಗಿ ತೀವ್ರವಾದ ಕ್ಷಣಗಳಿಂದ ಕೂಡಿರುವ ಈ ಚಿತ್ರ, ವಿಶೇಷವಾಗಿ ಸಾಂಪ್ರದಾಯಿಕವಲ್ಲದ ಕಥೆಯನ್ನು ಇಷ್ಟಪಡುವವರನ್ನು ಆಕರ್ಷಿಸುತ್ತಿದೆ.

ಚಿತ್ರದ ಕಥೆ ಎಲ್ಧೋಜ್ ಎಂಬ ವ್ಯಾಪಾರಿಯ ಸುತ್ತ ಸುತ್ತುತ್ತದೆ. ಆತನ ಮೊದಲ ಪತ್ನಿ ತೊರೆದು ಹೋದ ಬಳಿಕ ಆತ ಸೆಲಿನಾಳನ್ನು ಮದುವೆಯಾಗುತ್ತಾನೆ. ಆದರೆ, ಕಾರಣವಿಲ್ಲದೇ ಎಲ್ಧೋಜ್ ಸೆಲಿನಾಳಗೆ ಕಿರುಕುಳ ನೀಡುತ್ತಿರುತ್ತಾನೆ. ಒಂದು ಅಪಘಾತದಿಂದ ಎಲ್ಧೋಜ್ ಹಾಸಿಗೆ ಹಿಡಿದಾಗ, ಬಾಲ್ಥಝಾರ್ ಎಂಬ ಯುವಕ ಆಸರೆಗಾಗಿ ಅವರ ಮನೆಗೆ ಬರುತ್ತಾನೆ. ಕಾಲಾನಂತರದಲ್ಲಿ ಸೆಲಿನಾ ಮತ್ತು ಬಾಲ್ಥಝಾರ್ ನಡುವೆ ಪ್ರೇಮ ಮೂಡುತ್ತದೆ. ಈ ಸಂಬಂಧದಿಂದ ಶಕ್ತಿ ಪಡೆದ ಸೆಲಿನಾ, ತನಗೆ ಕಿರುಕುಳ ನೀಡುತ್ತಿದ್ದ ಗಂಡನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸುತ್ತಾಳೆ.

ನೈಜ ಘಟನೆಗಳಿಂದ ಪ್ರೇರಿತವಾದ ‘ಚತುರಂ’, ಪ್ರೀತಿ, ರೋಮಾಂಚನ ಮತ್ತು ಭಾವನಾತ್ಮಕ ಆಳವನ್ನು ವಿಶಿಷ್ಟವಾಗಿ ಬೆರೆಸಿದೆ. ಪಾತ್ರದಾರಿಗಳ ಉತ್ತಮ ನಟನೆ ವೀಕ್ಷಕರ ಮನಸ್ಸನ್ನು ಗೆದ್ದಿದೆ. ಚಿತ್ರದಲ್ಲಿ ಹಲವಾರು ಬೋಲ್ಡ್ ದೃಶ್ಯಗಳಿದ್ದು, ಇವು ಕಥೆಯ ಗಾಢತೆಗೆ ಪೂರಕವಾಗಿವೆ.

IMDbಯಲ್ಲಿ 6.2 ರೇಟಿಂಗ್ ಪಡೆದಿರುವ ‘ಚತುರಂ’, ಪ್ರೀತಿಯಿಂದ ಕೂಡಿದ ಥ್ರಿಲ್ಲರ್ಗಳನ್ನು ಇಷ್ಟಪಡುವವರು ಕಡ್ಡಾಯವಾಗಿ ನೋಡಲೇ ಬೇಕಾದ ಸಿನಿಮಾವಾಗಿದೆ. ಸಾಂಪ್ರದಾಯಿಕ ಸಿನಿಮಾದ ಗಡಿ ಮೀರಿದ, ಎಮೋಷನಲ್ ಡ್ರಾಮವನ್ನ ಇಷ್ಟಪಡುವವರು ಮಿಸ್ ಮಾಡದೆ ‘ಚತುರಂ’ ಸಿನಿಮಾವನ್ನು ನೋಡಲೇಬೇಕು.