ಬಜೆಟ್ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಕರೆದ ಸಭೆಗೆ ಎರಡನೇ ಬಾರಿಗೂ ಸಂಸದ ಶಶಿ ತರೂರ್ ಗೈರು
ಪಕ್ಷದೊಳಗಿನ ಅಸಮಾಧಾನಗಳ ನಡುವೆ ನಾಲ್ಕು ದಿನಗಳಲ್ಲಿ ಎರಡು ಬಾರಿ ಕರೆದ ಕಾಂಗ್ರೆಸ್ ಸಭೆಗೆ ಸಂಸದ ಶಶಿ ತರೂರ್ ಗೈರು ಹಾಜರಾಗಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ಮಂಗಳವಾರ ಸಭೆ ಕರೆಯಲಾಗಿತ್ತು. ಆದರೆ ಈ ಸಭೆಗೆ ಶಶಿ ತರೂರ್ ಅವರು ಗೈರು ಹಾಜರಾಗಿದ್ದರು.
ಶಶಿ ತರೂರ್ (ಸಂಗ್ರಹ ಚಿತ್ರ) -
ನವದೆಹಲಿ: ಬಜೆಟ್ ಅಧಿವೇಶನಕ್ಕೂ (Budget Session) ಮುನ್ನ ಎರಡು ಬಾರಿ ಕರೆದ ಕಾಂಗ್ರೆಸ್ ಸಭೆಗೆ ಸಂಸದ ಶಶಿ ತರೂರ್ (Congress MP Shashi Tharoor) ಗೈರು ಹಾಜರಾಗಿದ್ದಾರೆ. ನಾಲ್ಕು ದಿನಗಳಲ್ಲಿ ಎರಡು ಬಾರಿ ಕರೆದಿರುವ ಸಭೆಗೂ ಶಶಿ ತರೂರ್ ಹಾಜರಾಗಿಲ್ಲ. ಬುಧವಾರದಿಂದ ಸಂಸತ್ತಿನ (Parliament) ಬಜೆಟ್ ಅಧಿವೇಶನ ಪಾರಂಭವಾಗಲಿದೆ. ಇದಕ್ಕೂ ಮೊದಲು ಅಧಿವೇಶನದ ಕಾರ್ಯತಂತ್ರವನ್ನು ಚರ್ಚಿಸಲು ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರ ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಈ ಸಭೆಗೆ ಶಶಿ ತರೂರ್ ಗೈರು ಹಾಜರಾಗಿರುವುದು ಈಗ ಚರ್ಚೆಯ ವಿಷಯವಾಗಿದೆ.
ಪಕ್ಷದೊಳಗಿನ ಅಸಮಾಧಾನದ ಬಳಿಕ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಗೆ ಶಶಿ ತರೂರ್ ಅವರು ಪಕ್ಷದ ಸಭೆಗೆ ಗೈರು ಹಾಜರಾಗಿದ್ದಾರೆ. ತರೂರ್ ಅವರು ದುಬೈನಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದು, ಹೀಗಾಗಿ ಅವರು ಸಭೆಗೆ ಹಾಜರಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಚಳಿಗೆ ಪತರುಗಟ್ಟಿದ ಜಮ್ಮು-ಕಾಶ್ಮೀರ; ಹಿಮ ಬಿರುಗಾಳಿ ಅಪ್ಪಳಿಸಿದ ಭಯಾನಕ ವಿಡಿಯೊ ವೈರಲ್
ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯ ರಾಹುಲ್ ಗಾಂಧಿ, ಪಿ ಚಿದಂಬರಂ, ಜೈರಾಮ್ ರಮೇಶ್, ಪ್ರಮೋದ್ ತಿವಾರಿ ಮತ್ತು ಮನೀಶ್ ತಿವಾರಿ ಸೇರಿದಂತೆ ಇತರ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಆದರೆ ತರೂರ್ ದುಬೈನಲ್ಲಿ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಅವರು ಮಂಗಳವಾರ ರಾತ್ರಿ ದೆಹಲಿಗೆ ಹಿಂತಿರುಗಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಂಡಿಲ್ಲ ಎನ್ನಲಾಗಿದೆ.
Had a thoroughly delightful conversation with @AmandeepBhanguV at the @EmiratesLitFest in Dubai on #AWonderlandOfWords! Wonderfully engaged audience, great questions on the stage & from the hall, and a line for signing books that stretched on for an hour (Including the lady in… pic.twitter.com/DGtBlNSgTI
— Shashi Tharoor (@ShashiTharoor) January 25, 2026
ಕೇರಳದಲ್ಲಿ ಏಪ್ರಿಲ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಕುರಿತು ಚರ್ಚಿಸಲು ಕಳೆದ ವಾರ ನಡೆಸಿದ ಸಭೆಯಲ್ಲೂ ಕೂಡ 2009 ರಿಂದ ತಿರುವನಂತಪುರಂ ಲೋಕಸಭಾ ಸದಸ್ಯರಾಗಿರುವ ತರೂರ್ ಭಾಗವಹಿಸಿರಲಿಲ್ಲ. ಪಕ್ಷದಲ್ಲಿ ತಮಗೆ ಗೌರವ ನೀಡಲಾಗುತ್ತಿಲ್ಲ ಎನ್ನುವ ಅಸಮಾಧಾನ ಅವರಿಗಿದೆ ಎನ್ನಲಾಗುತ್ತಿದೆ.
ಮುಂಬೈ ವಿಮಾನ ನಿಲ್ದಾಣದಿಂದ 400 ಮೀಟರ್ ದೂರ ಪ್ರಯಾಣಕ್ಕೆ 18,000 ರುಪಾಯಿ ವಸೂಲಿ ಮಾಡಿದ ಟ್ಯಾಕ್ಸಿ ಚಾಲಕ
ಕೇರಳಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದ ವೇಳೆ ತಮಗೆ ಅಗೌರವ ತೋರಲಾಗಿದೆ ಎಂದು ಅಸಮಾಧಾನಗೊಂಡಿದ್ದ ತರೂರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ನಡೆದ ಮೂರು ಪಕ್ಷದ ಸಭೆಗೆ ಗೈರು ಹಾಜರಾಗಿದ್ದರು. ಕಾಂಗ್ರೆಸ್ ನಾಯಕರು ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಕೇರಳ ಚುನಾವಣೆಗೂ ಮುನ್ನ ಈ ಸಮಸ್ಯೆಯನ್ನು ಬಗೆ ಹರಿಸಲು ಪಕ್ಷ ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ.