ದಿನ ಭವಿಷ್ಯ, ಜೂನ್ 9, 2026: ಜೀವನದಲ್ಲಿ ಇಂದು ಹೊಸ ಅಧ್ಯಾಯ ಆರಂಭ
Horoscope Today June 9th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಉತ್ತರ ಭಾದ್ರಪದ ನಕ್ಷತ್ರದ ಜೂನ್ 9ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವುದನ್ನು ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಇಂಟರ್‌ನೆಟ್ ಚಿತ್ರ -
ಬೆಂಗಳೂರು, ಜೂ. 9: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಭಾದ್ರಪದ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಗಳ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಮೇಷ ರಾಶಿಯವರಿಗೆ ಮಧ್ಯಾಹ್ನವರೆಗೂ ಅದೃಷ್ಟ ಕೈ ಹಿಡಿಯಲಿದೆ. ಆದರೆ ಮಧ್ಯಾಹ್ನ ಬಳಿಕ ಮನಸ್ಸಿಗೆ ಸ್ವಲ್ಪ ನೋವು ಉಂಟಾಗುವ ಸಾಧ್ಯತೆ ಇದೆ. ಮುಖ್ಯ ನಿರ್ಧಾರಗಳನ್ನು ಮಧ್ಯಾಹ್ನ ಬಳಿಕ ತೆಗೆದುಕೊಳ್ಳಬೇಡಿ.
ವೃಷಭ ರಾಶಿ: ಈ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಅನೇಕ ವಿಚಾರಗಳ ಬಗ್ಗೆ ಯೋಚನೆ ಮಾಡುತ್ತೀರಿ. ಮಧ್ಯಾಹ್ನ ಬಳಿಕ ಎಲ್ಲವೂ ನಿಮ್ಮ ಪರವಾಗಿ ಕೆಲಸ ಕಾರ್ಯಗಳು ನಡೆಯುವುದರಿಂದ ದೊಡ್ಡದಾದ ಬದಲಾವಣೆಯನ್ನು ನೀವು ಕಾಣಬಹುದು.
ಮಿಥುನ ರಾಶಿ: ಈ ರಾಶಿಯವರಿಗೆ ಇಂದು ಮಧ್ಯಾಹ್ನವರೆಗೂ ಅನೇಕ ರೀತಿಯ ಯೋಚನೆಗಳು ಕಾಡಬಹುದು. ಮಧ್ಯಾಹ್ನ ಬಳಿಕ ಒಮ್ಮೆಲೆ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಾಣುತ್ತೀರಿ.
ಕಟಕ ರಾಶಿ: ಕಟಕ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ಯೋಚನೆಗಳು ಕಾಡುತ್ತಿರುತ್ತವೆ. ಮಧ್ಯಾಹ್ನ ಬಳಿಕ ಸ್ವಲ್ಪ ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಹಿಂದಿನ ಎರಡು ಮೂರು ದಿನಗಳ ನೋವು ಕಡಿಮೆಯಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಧ್ಯಾಹ್ನವರೆಗೂ ಎಲ್ಲವೂ ನಿಮ್ಮ ಪರವಾಗಿ ನಡೆಯುತ್ತಿರುತ್ತದೆ. ಎಲ್ಲರೂ ನಿಮಗೆ ಸಹಕಾರ ನೀಡುತ್ತಿರುತ್ತಾರೆ. ಮಧ್ಯಾಹ್ನ ಬಳಿಕ ಎಲ್ಲರೂ ದೂರವಾದಂತೆ ಭಾಸವಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರು ಮಧ್ಯಾಹ್ನವರೆಗೂ ಮಿತ್ರರ ಜತೆ ಸಮಯ ಕಳೆಯುತ್ತೀರಿ. ಶತ್ರುಗಳು ನಿಮ್ಮನ್ನು ಹಿಮ್ಮೆಟ್ಟಿಸಬಹುದು. ಮಧ್ಯಾಹ್ನ ಬಳಿಕ ಪ್ರೇಮ, ಪ್ರೀತಿಯಲ್ಲಿ ನೆಮ್ಮದಿ ಕಾಣುತ್ತೀರಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೆ ಹಣಕಾಸಿನ ಬಗ್ಗೆ ಬೇಸರ ಉಂಟಾಗಬಹುದು. ಮಧ್ಯಾಹ್ನ ಬಳಿಕ ಶತ್ರುಗಳು ಹಿಮ್ಮೆಟ್ಟಬಹುದು. ಮನಸ್ಸಿಗೆ ನೆಮ್ಮದಿ ಕೂಡ ಸಿಗುತ್ತದೆ.
ರೈಲಿನಲ್ಲೇ ಮಿನಿ ಕನ್ಸರ್ಟ್: ಅಹಮದಾಬಾದ್-ಲಖನೌ ಪ್ರಯಾಣಿಕರಿಂದ ಫುಲ್ ಮಸ್ತಿ
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಆಸ್ತಿ-ಪಾಸ್ತಿ ವಿಚಾರ ಹಾಗೂ ಮನೆಯ ವಿಚಾರವಾಗಿ ಸಂಸಾರದ ತಾಪತ್ರಯಗಳು ಕಾಡುತ್ತಿರುತ್ತವೆ. ಮಧ್ಯಾಹ್ನ ಬಳಿಕ ನಿಮ್ಮ ಬುದ್ದಿವಂತಿಕೆ ಉಪಯೋಗಿಸಿಕೊಂಡು ಅನೇಕ ಕೆಲಸವನ್ನು ಯಶಸ್ವಿಯಾಗಿ ನಡೆಸುತ್ತೀರಿ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ರೀತಿಯ ಸಹಕಾರ ಪ್ರಾಪ್ತಿಯಾಗುತ್ತದೆ. ಮಧ್ಯಾಹ್ನ ಬಳಿಕ ಎಲ್ಲರೂ ನಿಮ್ಮಿಂದ ದೂರ ಹೋಗುವಂತೆ ಭಾಸವಾಗುತ್ತದೆ. ಮನೆಯಲ್ಲೂ ನಿಮಗೆ ಬೇಸರ ಉಂಟಾಗುವ ಸಾಧ್ಯತೆ ಇದೆ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮಧ್ಯಾಹ್ನ ಬಳಿಕ ಆತ್ಮವಿಶ್ವಾಸ ತುಂಬಾ ಚೆನ್ನಾಗಿರುತ್ತದೆ. ಕೆಲಸ ಕಾರ್ಯದಲ್ಲೂ ಅತೀ ಹೆಚ್ಚಿನ ಯಶಸ್ಸು ನೀವು ಕಾಣಬಹುದು.
ಕುಂಭ ರಾಶಿ: ಈ ರಾಶಿಯವರು ಮಧ್ಯಾಹ್ನವರೆಗೂ ವೈಯಕ್ತಿಕವಾಗಿ ಸಮಯ ಕಳೆಯುತ್ತೀರಿ. ಮಧ್ಯಾಹ್ನ ಬಳಿಕ ನಿಮ್ಮ ಕುಟುಂಬದ ಜತೆ ಸಮಯ ಕಳೆಯುತ್ತೀರಿ.
ಮೀನ ರಾಶಿ: ಮೀನ ರಾಶಿಯವರಿಗೆ ಮಧ್ಯಾಹ್ನವರೆಗೂ ಮನಸ್ಸಿಗೆ ಬೇಸರ ಇರಬಹುದು. ಮಧ್ಯಾಹ್ನ ಬಳಿಕ ಎಲ್ಲ ಅಡಚಣೆ ನಿವಾರಣೆ ಆಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.