Horoscope Today December 11th: ಕೇತುವಿನಿಂದ ಈ ರಾಶಿಗೆ ವೃತ್ತಿ ಪ್ರಗತಿಯ ಜೊತೆ ಆರ್ಥಿಕ ಲಾಭ
ನಿತ್ಯ ಭವಿಷ್ಯ ಡಿಸೆಂಬರ್ 11, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ಹಿಮದೃತು ಮಾರ್ಗಶಿರಾ ಮಾಸೆ, ಕೃಷ್ಣ ಪಕ್ಷದ, ಸಪ್ತಮಿ ತಿಥಿ, ಮಘಾ ನಕ್ಷತ್ರದ ಡಿಸೆಂಬರ್ 11 ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿ ಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಸಂಗ್ರಹ ಚಿತ್ರ -
ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾ ಯನ ಹಿಮದೃತು ಮಾರ್ಗಶಿರಾ ಮಾಸೆ ಕೃಷ್ಣ ಪಕ್ಷದ, ಸಪ್ತಮಿ ತಿಥಿ, ಮಘಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಮಘಾ ನಕ್ಷತ್ರದ ಅಧಿಪತಿ ಕೇತು ಆಗಿದ್ದಾನೆ. ಹಾಗಾಗಿ ಸಿಟ್ಟು ಕೋಪ ಹೆಚ್ಚಾಗುವ ಸಾಧ್ಯತೆ ಹೆಚ್ಚಿನವರಿಗೆ ಇರುತ್ತದೆ. ಮೇಷ ರಾಶಿಯವರಿಗೆ ಇಂದು ಸ್ವಲ್ಪ ಕ್ಲಿಷ್ಟಕರವಾದ ದಿನವಾಗಿದೆ. ಹಣಕಾಸಿನ ವಿಚಾರದಲ್ಲೂ ಕಷ್ಟಕರವಾದ ದಿನವಾಗಿದೆ. ಮನಸ್ಸಿಗೆ ಸ್ವಲ್ಪ ಬೇಸರ ಉಂಟಾಗುವ ದಿನ ಆಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿ ಅವರು ನಿಮ್ಮ ತಾಯಿಯ ಆರೋಗ್ಯ ಹಾಗೂ ಆಸ್ತಿ ಪಾಸ್ತಿ ವಿಚಾರವಾಗಿ ಗಮನ ನೀಡಬೇಕಾಗುತ್ತದೆ. ಮನೆಯ ಬಗ್ಗೆಯೇ ಹೆಚ್ಚಿನ ಕಾಳಜಿಯನ್ನು ನೀವು ವಹಿಸಬೇಕಾಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮ ವಾದ ದಿನವಾಗಿದ್ದು ಸಾಮಾಜಿಕ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಎಲ್ಲ ಕೆಲಸ ಕಾರ್ಯದಲ್ಲೂ ನಿಮಗೆ ಜಯ ಪ್ರಾಪ್ತಿ ಯಾಗುತ್ತದೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಮನೆಯ ವಿಚಾರವಾಗಿ ಸ್ವಲ್ಪ ಕ್ಷೇಷ ಉಂಟಾಗಬಹುದು. ಹಾಗಾಗಿ ಕುಟುಂಬದ ಸಂತೋಷವನ್ನು ನೀವು ವಹಿಸಬೇಕಾಗುತ್ತದೆ. ಎಲ್ಲರ ಜೊತೆ ಸಹನೆ ಯಿಂದ ನೀವು ವರ್ತಿಸಬೇಕಾಗುತ್ತದೆ.
Vastu Tips: ನಿಮ್ಮ ಮನೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತಿದ್ದರೆ, ಈ ವಿಗ್ರಹಗಳನ್ನು ಮನೆಗೆ ತಂದು ಇಡಿ
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದೆ. ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ಎರಡು ಮೂರು ದಿನಗಳಲ್ಲಿ ಇದ್ದ ಕ್ಷೇಷ ಮಯವಾಗಲಿದೆ. ಮನಸ್ಸಿನ ತುಮೂಲ ಎಲ್ಲವೂ ಬಗೆಹರೆಯಲಿದ್ದು ಸಂತೋಷ ಪ್ರಾಪ್ತಿ ಯಾಗುತ್ತದೆ
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ಕ್ಲಿಷ್ಟಕರವಾದ ದಿನವಾಗಿದ್ದು ಮುಖ್ಯವಾದ ಯಾವುದೇ ಕೆಲಸ ಕಾರ್ಯಗಳು ಇಂದು ಬೇಡ. ಯಾವುದೇ ಮೀಟಿಂಗ್ ,ಇಮೇಲ್ ಇತ್ಯಾದಿ ಯಾವುದು ಇಂದು ಮಾಡುವುದು ಒಳಿತಲ್ಲ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಷ್ಟಾರ್ಥ ಸಿದ್ದಿ ಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಗುಂಪು ಕೆಲಸದಿಂದ ಧನಲಾಭ ಆಗಲಿದೆ. ಮಿತ್ರರಿಂದಲೂ ಒಳಿತು ಆಗಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಭಾಗ್ಯೋದಯವಾದ ದಿನವಾಗಿದ್ದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಮನೆಯ ಕೆಲಸ ಹಾಗೂ ಕಾರ್ಯ ಕ್ಷೇತ್ರದ ಜವಾಬ್ದಾರಿಯನ್ನು ನೀವು ನಿಭಾಯಿಸಬೇಕಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ..ಇಂದು ಭಾಗ್ಯೋದಯವಾದ ದಿನವಾಗಲಿದ್ದು ಯಶಸ್ಸು ಕಾಣುತ್ತೀರಿ. ಆದರೆ ಇಂದು ಭಗವಂತನ ಆಶೀರ್ವಾದ ನಿಮಗೆ ಬಹಳಷ್ಟು ಮುಖ್ಯವಾಗುತ್ತದೆ.
ಮಕರ ರಾಶಿ: ಈ ದಿನ ಮಕರ ರಾಶಿ ಅವರಿಗೆ ಸ್ವಲ್ಪ ಕ್ಲಿಷ್ಟಕರವಾದ ದಿನವಾಗಿದೆ. ಮುಖ್ಯವಾದ ಯಾವುದೇ ನಿರ್ಧಾರ ಇಂದು ಬೇಡ. ಪ್ರೀತಿ ಪಾತ್ರರಿಂದ ಯಾವುದೇ ನೆಮ್ಮದಿ ನಿಮಗೆ ಸಿಗುವುದಿಲ್ಲ.
ಕುಂಭರಾಶಿ: ಕುಂಭ ರಾಶಿ ಅವರಿಗೂ ಬಹಳಷ್ಟು ಉತ್ತಮವಾದ ದಿನ ವಾಗಿದೆ. ನಿಮ್ಮ ಆತ್ಮವಿಶ್ವಾಸ ಚೆನ್ನಾಗಿ ಇರಲಿದ್ದು ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗುತ್ತದೆ
ಮೀನ ರಾಶಿ: ಮೀನ ರಾಶಿ ಅವರಿಗೂ ಉತ್ತಮವಾದ ದಿನ ವಾಗಿದೆ.ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಶಸ್ಸಿನ ಜೊತೆಗೆ ಆರೋಗ್ಯದಲ್ಲೂ ಸುಧಾರಣೆ ಯಾಗಲಿದೆ.