Narendra Modi Bhavishya 2026: ನರೇಂದ್ರ ಮೋದಿಗೆ ಈ ವರ್ಷ ಅಪಾಯ ಇದೆಯೇ? ಜ್ಯೋತಿಷ್ಯರ ಎಚ್ಚರಿಕೆ ಏನು?
2026ರ ಹೊಸ ವರ್ಷ ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರಿಗೆ ವಿಶೇಷವಾಗಿರಲಿದೆ. ಅದರಲ್ಲೂ ರಾಜಕೀಯ ಗಣ್ಯ ವಕ್ತಿಗಳ ಗ್ರಹಗತಿಯಲ್ಲಿ ಏನೆಲ್ಲ ಬದಲಾವಣೆ ಇದೆ ಎಂದು ತಿಳಿಯಲು ಹೆಚ್ಚಿನವರಿಗೆ ಕುತೂಹಲ ಇದ್ದೆ ಇರುತ್ತದೆ. ಹಾಗಾಗಿ ಈ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಭವಿಷ್ಯ ಹೇಗೆ ಇರಲಿದೆ? ಮೋದಿ ಅವರ ಜೀವನದಲ್ಲಿ ಶನಿ, ಗುರು, ಚಂದ್ರ, ರಾಹು ಕೇತುಗಳ ಪಾತ್ರ ಏನು? ಎಂಬ ಕುರಿತು ಜ್ಯೋತಿಷ ಪರಿಣತ ಮಹಾಬಲಮೂರ್ತಿ ಕೊಡ್ಲೆಕೆರೆ ವಿವರಿಸಿದ್ದಾರೆ.
ನರೇಂದ್ರ ಮೋದಿ ಅವರ ವರ್ಷ ಭವಿಷ್ಯ -
ಬೆಂಗಳೂರು, ಜ. 4: 2026ರ ಹೊಸ ವರ್ಷ ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರಿಗೆ ವಿಶೇಷವಾಗಿರಲಿದೆ. ಅದರಲ್ಲೂ ರಾಜಕೀಯ ಗಣ್ಯ ವಕ್ತಿಗಳ ಗ್ರಹಗತಿಯಲ್ಲಿ ಏನೆಲ್ಲ ಬದಲಾವಣೆ ಆಗಲಿದೆ ಎಂದು ತಿಳಿಯಲು ಹೆಚ್ಚಿನವರಿಗೆ ಕುತೂಹಲ ಇದ್ದೆ ಇರುತ್ತದೆ. ಈ ವರ್ಷ ಪ್ರಧಾನಿ ಮೋದಿ ಅವರ ಭವಿಷ್ಯ ಹೇಗೆ ಇರಲಿದೆ? ಮೋದಿ ಅವರ ವರ್ಚಸ್ಸು ರಾಷ್ಟ್ರ ಮಟ್ಟದಲ್ಲಿ, ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹೆಚ್ಚಬಹುದಾ ಅಥವಾ ಕುಗ್ಗಬಹುದಾ? ವೈಯಕ್ತಿಕವಾಗಿ ಮೋದಿ ಅವರ ಆರೋಗ್ಯದ ಮೇಲೆ ರಾಶಿ ಚಕ್ರದ ಪರಿಣಾಮ ಏನಾದರು ಇದೆಯಾ? ಈ ವರ್ಷ ಮೋದಿ ಅವರ (Narendra Modi) ಜೀವನದಲ್ಲಿ ಶನಿ, ಗುರು, ಚಂದ್ರ, ರಾಹು ಕೇತುಗಳ ಪಾತ್ರ ಏನು? ಎಂಬ ಕುರಿತು ಜ್ಯೋತಿಷ್ಯ ಪರಿಣತ ಮಹಾಬಲಮೂರ್ತಿ ಕೊಡ್ಲೆಕೆರೆ ವಿಶ್ವವಾಣಿ ಸಂದರ್ಶನದಲ್ಲಿ ತಿಳಿಸಿಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರದ್ದು ವೃಶ್ಚಿಕ ರಾಶಿಯಾಗಿದ್ದು, ಪಂಚಮ ಶನಿಯ ಪ್ರಭಾವ ಕಂಡು ಬರಲಿದೆ. ಚಂದ್ರನಿಂದ ಐದನೇ ಮನೆಯಲ್ಲಿ ಶನಿ ಇರುವಾಗ ಪಂಚಮ ಶನಿ ಕಾಟ ಉಂಟಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು, ಒತ್ತಡಗಳು ಹೆಚ್ಚಾಗಿ ಕಾಡುವ ಸಾಧ್ಯತೆ ಇರುತ್ತದೆ ಎಂದು ಜ್ಯೋತಿಷ್ಯರು ಎಚ್ಚರಿಕೆ ನೀಡಿದ್ದಾರೆ
ಮಂಗಳನ ದೆಸೆಯಿಂದ ಒಳಿತು!
ಪ್ರಧಾನಿ ಮೋದಿಗೆ ಮಂಗಳನ ದೆಸೆ ನಡೆಯುತ್ತಿದೆ. ಇದರೊಂದಿಗೆ ಬುಧನ ಭುಕ್ತಿ ಕೂಡ ನಡೆಯುತ್ತಿದೆ. ಹಾಗಾಗಿ ಮಂಗಳನಿಂದ ಒಳಿತು ಆಗುವ ಸಾಧ್ಯತೆ ಇದೆ. ಇವರು ಮಾತನಾಡದೆಯೇ ಹೆಚ್ಚು ರಾಜಕೀಯ ಸಂದರ್ಭದಲ್ಲಿ ನಿಲುವು ತೆಗೆದುಕೊಳ್ಳುತ್ತಾರೆ. ವಿದೇಶಾಂಗ ನೀತಿ ಅಥವಾ ರಾಜ ತಾಂತ್ರಿಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಹೆಚ್ಚು ಮಾತನಾಡದೇ ಇದ್ದರೂ ಇವರಿಗೆ ಉತ್ತಮ ನಿಲುವನ್ನು ನೀಡಿರುವುದೇ ಮಂಗಳನ ಸೂಚನೆ. ಮಂಗಳನು ಮೋದಿಗೆ ರಾಜ ಯೋಗವನ್ನು ನೀಡಿದ್ದಾನೆ. ಅವರು ಅಲ್ಪ ಮಾತನಾಡಿ ಹೆಚ್ಚು ನೈಪುಣ್ಯವಾಗಿ ಕೆಲಸ ಮಾಡುವ ಶಕ್ತಿ ಹೊಂದಿರುವುದಕ್ಕೆ ಈ ಮಂಗಳನೇ ಕಾರಣ. 2025ರ ಮಾರ್ಚ್‌ನಿಂದ ಆರಂಭವಾಗಿರುವ ಈ ಪ್ರಭಾವವು 2028ರ ಮಾರ್ಚ್‌ವರೆಗೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ನರೇಂದ್ರ ಮೋದಿಗೆ ಈ ವರ್ಷ ಅಪಾಯ ಇದೆಯೇ? ವಿಡಿಯೊ ನೋಡಿ:
ಈ ದೆಸೆಯಲ್ಲಿ ಬುಧನ ಭುಕ್ತಿ ನಡೆಯುವುದರಿಂದ ಸರ್ವತ್ವವಾದ ದುಷ್ಟತನವನ್ನು ಕೂಡ ನೀಡುತ್ತಿದ್ದಾನೆ. ಹಾಗಾಗಿ ಆರು ತಿಂಗಳ ಕಾಲ ಬಹಳಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಿರೋಧಿಗಳಿಂದ ಅವರ ಪ್ರಾಣಕ್ಕೆ ಸಮಸ್ಯೆವಾಗುವ ಸಾಧ್ಯತೆಗಳಿವೆ. ಈ ಬುಧನು ಶತ್ರುಗಳಿಗೆ ಮೋದಿ ಅವರನ್ನು ಕಂಗಾಲಾಗಿಸಲು ಅಥವಾ ಅವರ ಪ್ರಾಣಕ್ಕೆ ಹಾನಿ ಮಾಡಲು ಅವಕಾಶಗಳನ್ನು ಒದಗಿಸಿಕೊಡುತ್ತಾನೆ. ಇದನ್ನು ಕಾಪಾಡುವ ಶಕ್ತಿಯನ್ನು ಮಂಗಳ ಗ್ರಹನೇ ಒದಗಿಸಬೇಕಾಗುತ್ತದೆ.
ನಿಮ್ಮ ಮನೆಯ ಕಿಟಕಿ-ಬಾಗಿಲು ಈ ದಿಕ್ಕಿನಲ್ಲಿದೆಯೇ? ಹಾಗಾದರೆ ಕಂಟಕ ತಪ್ಪಿದ್ದಲ್ಲ!
ನರೇಂದ್ರ ಮೋದಿ ಅವರ ಜಾತಕದ ಇನ್ನೊಂದು ಪ್ರಧಾನ ಅಂಶ ಎಂದರೆ ಅದು ಶಶಿ ಮಂಗಳ ಯೋಗ. ಇದು ಅಪಾರ ಪ್ರಮಾಣದ ಧನ ಶಕ್ತಿಯನ್ನು ನೀಡುವಂತದ್ದು ಕೂಡ ಆಗಿದೆ. ಮೋದಿ ಅವರ ಅಧಿಕಾರಾವಧಿಯ ಬಗ್ಗೆ ಮಾಹಿತಿ ನೀಡಿದ ಅವರು, 2029ರ ಮೇವರೆಗೆ ಪ್ರಧಾನಿಯಾಗಿ ಮುಂದುವರಿಯುವ ಸಾಧ್ಯತೆಗಳಿದ್ದರೂ, 2026ರಿಂದಲೇ ಕೆಲವು ಅಡೆತಡೆ ಅಭಾವಗಳು ಬರುವ ಸಾಧ್ಯತೆ ಇದೆ. ಮುಖ್ಯವಾಗಿ 2028ರ ನವೆಂಬರ್‌ನಲ್ಲಿ ಬರುವ ಕುಜ-ರಾಹು ಸಂಧಿ ಸಮಯ ಅವರಿಗೆ ಅತ್ಯಂತ ಅಪಾಯಕಾರಿ. ಈ ಅವಧಿಯಲ್ಲಿ ಅವರು ಅಧಿಕಾರ ತ್ಯಜಿಸುವ ಅಥವಾ ಆರೋಗ್ಯ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
2026 ನರೇಂದ್ರ ಮೋದಿ ಅವರಿಗೆ ಒಂದು ಕಡೆ ಮಂಗಳ ಯಶಸ್ಸು ನೀಡಿದರೆ, ಇನ್ನೊಂದೆಡೆ ಪಂಚಮ ಶನಿ ಮತ್ತು ಬುಧನ ಭುಕ್ತಿಯಿಂದಾಗಿ ಅಪಾಯದ ಸೂಚನೆ ಇದೆ ಎಂದು ಮಹಾಬಲಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.