Astro Tips: ಸೋಮವಾರ ಶಿವನಿಗೆ ಈ ಒಂದು ವಸ್ತು ಅರ್ಪಿಸಿದರೆ ಸಂಕಷ್ಟ ತಪ್ಪಿದ್ದಲ್ಲ!
ಸೋಮವಾರವನ್ನು ಭಗವಾನ್ ಶಿವನಿಗೆ ಸಮರ್ಪಿತ ದಿನವೆಂದು ಹಿಂದೂ ಧರ್ಮದಲ್ಲಿ ಮಹತ್ವ ನೀಡಲಾಗಿದೆ. ಈ ದಿನ ಉಪವಾಸ ವ್ರತವನ್ನು ಆಚರಿಸಿ ಶಿವನನ್ನು ಶ್ರದ್ಧಾ–ಭಕ್ತಿಯಿಂದ ಪೂಜಿಸಿದರೆ, ಜೀವನದಲ್ಲಿನ ವಿಘ್ನ ಆತಂಕಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಸೋಮವಾರ ಶಿವನ ಪೂಜೆ ಮಾಡೋದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ
ಶಿವ -
ಬೆಂಗಳೂರು: ಸೋಮವಾರವನ್ನು (Monday) ಭಗವಾನ್ ಶಿವನಿಗೆ (Lord Shiva) ಸಮರ್ಪಿತ ದಿನವೆಂದು ಹಿಂದೂ ಧರ್ಮದಲ್ಲಿ(Hindu Religion) ಪರಿಗಣಿಸಲಾಗಿದೆ. ಈ ದಿನ ಉಪವಾಸ ವ್ರತವನ್ನು(Fasting) ಆಚರಿಸಿ, ಶುಭ ಸಮಯದಲ್ಲಿ ಶಿವನ ಆರಾಧನೆ ಮಾಡುವುದರಿಂದ ವಿಶೇಷ ಫಲ ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಗಳು(Astrology) ಹೇಳುತ್ತದೆ. ಈ ದಿನ ಧಾರ್ಮಿಕ ಗ್ರಂಥಗಳ ದಾನಕ್ಕೂ ಹೆಚ್ಚಿನ ಮಹತ್ವವಿದ್ದು, ಸೋಮವಾರದಂದು ಉಪವಾಸ ವ್ರತವನ್ನು ಪಾಲಿಸಿ ಶಿವನ ಪೂಜೆ ಮಾಡುವ ವೇಳೆ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಿದರೆ, ಭಕ್ತರ ಜೀವನದಲ್ಲಿನ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. ಇದರಿಂದ ದೈಹಿಕ, ಮಾನಸಿಕ ತೊಂದರೆಗಳು ನಿವಾರಣೆಯಾಗುತ್ತವೆ ಹಾಗೂ ಅಂತ್ಯಕಾಲದಲ್ಲಿ ಮೋಕ್ಷ ಲಭಿಸುತ್ತದೆ ಎನ್ನಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ(Astro Tips) ಈ ದಿನ ನಿಷ್ಠೆಯಿಂದ ಮಾಡಿದ ಪೂಜೆಯ ಫಲ ದ್ವಿಗುಣವಾಗುತ್ತದೆ .
ಸೋಮವಾರ ವ್ರತ ಮತ್ತು ಪೂಜೆ ಪಾಲಿಸಬೇಕಾದ ನಿಯಮಗಳು:
ಸೋಮವಾರದ ಪೂಜೆಯ ವೇಳೆ ಕೇಸರಿ, ಹಳದಿ ಅಥವಾ ಕೆಂಪು ಬಣ್ಣದ ವಸ್ತ್ರಗಳನ್ನು ಧರಿಸುವುದು ಶುಭಕರ.
ದೇವರಿಗೆ ಅರ್ಪಿಸುವಾಗ ಸಂಪೂರ್ಣ ಅಕ್ಷತೆಯನ್ನು ಮಾತ್ರ ಬಳಸಬೇಕು. ಮುರಿದ ಅಥವಾ ಒಡೆದ ಅಕ್ಷತೆಯನ್ನು ಅರ್ಪಿಸಬಾರದು. ಅದರಿಂದ ಹಾನಿ.
ಶಿವನ ಪೂಜೆಯಲ್ಲಿ ಬಿಲ್ವಪತ್ರೆ, ಅಕ್ಷತೆ, ಶ್ರೀಗಂಧ, ಧಾತುರಾ ಮತ್ತು ಎಕ್ಕದ ಹೂವಿಗೆ ವಿಶೇಷ ಪ್ರಾಮುಖ್ಯತೆ ಇದೆ. ಇವುಗಳನ್ನು ಅರ್ಪಿಸಿದರೆ ಶಿವನು ಶೀಘ್ರ ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ.
Astro Tips: ಈ ರತ್ನಗಳನ್ನು ಒಟ್ಟಿಗೆ ಧರಿಸಿದರೆ ಸಮಸ್ಯೆಗಳು ಎದುರಾಗುತ್ತದೆ ಎಚ್ಚರ!
ಮಹಾಮೃತ್ಯುಂಜಯ ಮಂತ್ರ:
ಸೋಮವಾರದ ಪೂಜೆಯಲ್ಲಿ ಈ ಮಂತ್ರ ಪಠಣಕ್ಕೆ ವಿಶೇಷ ಮಹತ್ವವಿದೆ
“ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ।
ಊರ್ವಾರೂಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್ ॥”
ಸೋಮವಾರದಂದು ಮಾಡಬಾರದ ಕೆಲಸಗಳು
ಉಪವಾಸದ ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು.
ಜೂಜು, ಕಳ್ಳತನ, ಸುಳ್ಳು ಹೇಳುವಂತಹ ಕೆಟ್ಟ ಚಟಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.
ಶಿವನಿಗೆ ತುಳಸಿ ಎಲೆಗಳನ್ನು ಅರ್ಪಿಸಬಾರದು.
ಸೋಮವಾರದ ವಿಶೇಷ ಪರಿಹಾರ ಕ್ರಮಗಳು:
ಶಿವನನ್ನು ಪೂಜಿಸಿದ ನಂತರ ನಿಮ್ಮ ಮನದ ಆಶಯಗಳನ್ನು ಹೇಳಿ, ಸಂಜೆ ವೇಳೆ ಒಂದು ಬಿಲ್ವಪತ್ರೆಯನ್ನು ಅರ್ಪಿಸಿ ದೀಪವನ್ನು ಬೆಳಗಿಸಿದರೆ ಇಚ್ಛೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.
ಶಿವನಿಗೆ ಬಿಲ್ವಪತ್ರೆ ಹಾಗೂ ಖೀರ್‌ನ್ನು ನೈವೇದ್ಯವಾಗಿ ಅರ್ಪಿಸುವುದರಿಂದ ಅವನು ಶೀಘ್ರ ಸಂತುಷ್ಟನಾಗುತ್ತಾನೆ ಎಂದು ಹೇಳಲಾಗುತ್ತದೆ.
ಈ ದಿನ ಮಹಾಲಕ್ಷ್ಮಿ ದೇವಿಗೆ ಅಕ್ಕಿಯಿಂದ ತಯಾರಿಸಿದ ಸಿಹಿ ಪದಾರ್ಥ, ಅಕ್ಕಿ ಪಾಯಸ ಅಥವಾ ಹಾಲಿನಿಂದ ಮಾಡಿದ ಬಿಳಿ ಬಣ್ಣದ ಸಿಹಿಯನ್ನು ದಾನ ಮಾಡಿದರೆ, ಲಕ್ಷ್ಮೀದೇವಿಯ ಕೃಪೆಯಿಂದ ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ವಿಶ್ವಾಸವಿದೆ.
ವಾರದ ಮೊದಲ ದಿನವಾಗಿರುವ ಸೋಮವಾರವನ್ನು ಶಿವನ ದಿನವೆಂದು ಕರೆಯಲಾಗುತ್ತದೆ. ಈ ದಿನ ಶ್ರದ್ಧೆ ಹಾಗೂ ಭಕ್ತಿಯಿಂದ ಶಿವನ ಆರಾಧನೆ ಮಾಡಿದರೆ, ಜೀವನದ ಸಂಕಷ್ಟಗಳಿಂದ ಮುಕ್ತಿ ದೊರೆಯುತ್ತದೆ. ಶಿವನಿಗೆ ಪ್ರಿಯವಾದ ವಸ್ತುಗಳನ್ನು ಸಮರ್ಪಿಸಿ ಮಂತ್ರ ಜಪ ಮಾಡಿದರೆ, ಶಿವನ ಅನುಗ್ರಹವನ್ನು ಸುಲಭವಾಗಿ ಪಡೆಯಬಹುದು.