ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Astro Tips: ಗ್ರಹ ದೋಷದಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಪ್ರತಿದಿನ ಬೆಳಿಗ್ಗೆ ಈ ಕ್ರಮಗಳನ್ನು ಅನುಸರಿಸಿ.!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಮ್ಮೆ ಗ್ರಹಗಳ ಅಶುಭ ಪರಿಣಾಮದಿಂದ ದುರಾದೃಷ್ಟ ಎದುರಾಗಬಹುದು. ಪ್ರತಿದಿನ ಬೆಳಿಗ್ಗೆ ತುಳಸಿ ಮುಂದೆ ದೀಪ ಹಚ್ಚುವುದು, ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು, ಕರದರ್ಶನ ಮಂತ್ರ ಹಾಗೂ ಗಾಯತ್ರಿ ಮಂತ್ರ ಪಠಿಸುವುದು ಮುಂತಾದ ಸರಳ ಆಚರಣೆಗಳನ್ನು ಪಾಲಿಸಿದರೆ ದುರಾದೃಷ್ಟದ ಪ್ರಭಾವ ಕಡಿಮೆಯಾಗುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ.

ದುರಾದೃಷ್ಟ ನಿವಾರಣೆಗೆ ಈ ಸರಳ ಕ್ರಮಗಳನ್ನು ಅನುಸರಿಸಿ

ಸಾಂದರ್ಭಿಕ ಚಿತ್ರ -

Profile
Sushmitha Jain Feb 10, 2026 7:00 AM

ಬೆಂಗಳೂರು: ಸಾಮಾನ್ಯವಾಗಿ “ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ, ಕೆಟ್ಟ ಕೆಲಸಕ್ಕೆ ಕೆಟ್ಟ ಫಲ” ಎಂಬ ನಂಬಿಕೆ ಇದೆ. ಆದರೆ ವಾಸ್ತವದಲ್ಲಿ, ಕೆಲವರು ಸತ್ಕರ್ಮಗಳನ್ನು ಮಾಡಿದರೂ ಕೂಡ ಜೀವನದಲ್ಲಿ ನಿರಂತರ ಅಡೆತಡೆಗಳು, ಕಷ್ಟಗಳು ಹಾಗೂ ದುರಾದೃಷ್ಟವನ್ನು ಎದುರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದಕ್ಕೆ ಕೆಲವೊಮ್ಮೆ ಗ್ರಹಗಳ ಅಶುಭ ಪರಿಣಾಮವೇ ಕಾರಣವಾಗಿರುತ್ತದೆ.
ನಮ್ಮ ಧಾರ್ಮಿಕ ಗ್ರಂಥಗಳಲ್ಲಿ, ಇಂತಹ ದುರಾದೃಷ್ಟವನ್ನು ದೂರಮಾಡಲು ಮತ್ತು ಗ್ರಹದೋಷಗಳ ಪ್ರಭಾವವನ್ನು ಕಡಿಮೆ ಮಾಡಲು ಕೆಲವು ಸರಳ ಆದರೆ ಪರಿಣಾಮಕಾರಿ ಕ್ರಮಗಳನ್ನು ವಿವರಿಸಲಾಗಿದೆ. ಅವುಗಳನ್ನು ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಪಾಲಿಸಿದರೆ ಶುಭ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಯಾವ ಕ್ರಮಗಳನ್ನು ಪಾಲಿಸಿದರೆ ಗ್ರಹ ದೋಷ ನಿವಾರಣೆಯಾಗುತ್ತದೆ..? ಎಂಬ ಮಾಹಿತಿ ಇಲ್ಲಿದೆ.

ತುಳಸಿ ಮುಂದೆ ದೀಪ ಹಚ್ಚುವುದು

ಹಿಂದೂ ಸಂಪ್ರದಾಯದಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ. ತುಳಸಿಯನ್ನು ಪೂಜಿಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಮನೆಯ ತುಳಸಿ ಗಿಡದ ಬಳಿ ಶುದ್ಧ ತುಪ್ಪದ ದೀಪವನ್ನು ಬೆಳಗುವುದರಿಂದ ದುರಾದೃಷ್ಟ ದೂರವಾಗುತ್ತದೆ ಹಾಗೂ ಮನೆಯಲ್ಲಿ ಐಶ್ವರ್ಯ ಮತ್ತು ಶಾಂತಿ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ.

ಪ್ರತಿ ಬೆಳಿಗ್ಗೆ ಸೂರ್ಯನಿಗೆ ಅರ್ಘ್ಯ ಅರ್ಪಣೆ

ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನು ಗ್ರಹಗಳ ಅಧಿಪತಿ. ಅವನು ಶಕ್ತಿ, ಆರೋಗ್ಯ ಮತ್ತು ಪೂರ್ವಜರ ಆಶೀರ್ವಾದದ ಪ್ರತೀಕ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ಬಳಿಕ ತಾಮ್ರದ ಪಾತ್ರೆಯಲ್ಲಿ ನೀರನ್ನು ಹಿಡಿದು ಸೂರ್ಯನಿಗೆ ಅರ್ಪಿಸಿದರೆ ಗ್ರಹದೋಷ, ಪಿತೃ ದೋಷಗಳು ಶಮನವಾಗುತ್ತವೆ ಎಂದು ನಂಬಲಾಗುತ್ತದೆ. ಇದರಿಂದ ಜೀವನದಲ್ಲಿ ಪ್ರಗತಿ ಹಾಗೂ ಮಾನಸಿಕ ಶಕ್ತಿ ಹೆಚ್ಚಾಗುತ್ತದೆ.

Astro Tips: ಆಮೆ ಉಂಗುರ ಯಾವ ರಾಶಿಗೆ ಲಾಭ, ಯಾವ ರಾಶಿಗೆ ಅಶುಭ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೇಳೋದು ಏನು?

ಕೈಗಳನ್ನು ನೋಡಿ ಪಠಿಸುವ ಮಂತ್ರ

ಧಾರ್ಮಿಕ ಗ್ರಂಥಗಳ ಪ್ರಕಾರ ಮಾನವನ ಕೈಗಳಲ್ಲಿ ಲಕ್ಷ್ಮೀ, ಸರಸ್ವತಿ ಮತ್ತು ಗೋವಿಂದನ ವಾಸವಿದೆ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ಕೈಗಳನ್ನು ಸೇರಿಸಿ ನೋಡಿ ಈ ಮಂತ್ರವನ್ನು ಪಠಿಸುವುದು ಶುಭಕರವೆಂದು ಹೇಳಲಾಗಿದೆ. ಇದರಿಂದ ದುರಾದೃಷ್ಟ ದೂರವಾಗಿ ಶುಭಾರಂಭವಾಗುತ್ತದೆ.
ಮಂತ್ರ:
ಕರಾಗ್ರೇ ವಸತೇ ಲಕ್ಷ್ಮೀಃ ಕರಮಧೇ ಸರಸ್ವತಿ |
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ ||

ಗಾಯತ್ರಿ ಮಂತ್ರ ಪಠಣೆ

ಗಾಯತ್ರಿ ಮಂತ್ರವು ಅತ್ಯಂತ ಶಕ್ತಿಶಾಲಿ ಮಂತ್ರಗಳಲ್ಲಿ ಒಂದಾಗಿದೆ. ಪ್ರತಿದಿನ ಮುಂಜಾನೆ ಈ ಮಂತ್ರವನ್ನು ಪಠಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ, ಸಕಾರಾತ್ಮಕ ಚಿಂತನೆ ಹೆಚ್ಚಾಗುತ್ತದೆ ಮತ್ತು ಜೀವನದ ಅಡೆತಡೆಗಳು ನಿಧಾನವಾಗಿ ನಿವಾರಣೆಯಾಗುತ್ತವೆ ಎಂದು ನಂಬಲಾಗುತ್ತದೆ. ಇದು ದುಃಖ, ಬಡತನ ಮತ್ತು ನಕಾರಾತ್ಮಕತೆಯನ್ನು ದೂರಮಾಡುತ್ತದೆ ಎನ್ನಲಾಗಿದೆ.
ಮಂತ್ರ:
ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ||

ಮುಂಜಾನೆ ಎದ್ದಾಕ್ಷಣ ಈ ಸರಳ ಕ್ರಮಗಳನ್ನು ನಿಷ್ಠೆಯಿಂದ ಪಾಲಿಸಿದರೆ, ದುರಾದೃಷ್ಟದ ಪ್ರಭಾವ ಕಡಿಮೆಯಾಗುತ್ತದೆ ಹಾಗೂ ಗ್ರಹಗಳ ಅಶುಭ ಪರಿಣಾಮಗಳು ಶಮನವಾಗುತ್ತವೆ ಎನ್ನುವ ನಂಬಿಕೆಯಿದೆ. ಆದ್ದರಿಂದ ಪ್ರತಿದಿನ ಬೆಳಿಗ್ಗೆ ಈ ಆಚರಣೆಗಳನ್ನು ಮರೆಯದೇ ಮಾಡುವುದರಿಂದ ಜೀವನದಲ್ಲಿ ಶುಭ ಬದಲಾವಣೆ ಕಾಣಬಹುದು.