Horoscope Today November 23rd: ಇಂದು ಮೂಲ ನಕ್ಷತ್ರದಿಂದ ಈ ರಾಶಿಗೆ ಕಾರ್ಯಕ್ಷೇತ್ರದಲ್ಲಿ ಭಾರೀ ಯಶಸ್ಸು!
ನಿತ್ಯ ಭವಿಷ್ಯ ನವೆಂಬರ್ 23, 2025: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಶರದೃತು, ಮಾರ್ಗಶಿರ ಮಾಸೆ,ಶುಕ್ಷ ಪಕ್ಷ, ತೃತೀಯ ತಿಥಿ, ಮೂಲ ನಕ್ಷತ್ರದ ನವೆಂಬರ್ 23ನೇ ತಾರೀಖಿನ ಭಾನುವಾರದ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.
ದಿನ ಭವಿಷ್ಯ(ಸಂಗ್ರಹ ಚಿತ್ರ) -
ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ದಕ್ಷಿಣಾ ಯನ ಶರದೃತು ಮಾರ್ಗಶಿರ ಮಾಸೆ, ಶುಕ್ಷ ಪಕ್ಷದ ತೃತೀಯ ತಿಥಿ, ಮೂಲ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ (Daily Horoscope) ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ವಕ್ರಿ ಬುಧ ತುಲಾ ರಾಶಿಯನ್ನು ಪ್ರವೇಶ ಮಾಡ್ತಾ ಇದ್ದಾನೆ. ಇದರ ಪರಿಣಾಮ ಕೂಡ ಎಲ್ಲ ರಾಶಿಗೂ ಬೀರಲಿದೆ. ಮೇಷ ರಾಶಿಯವರು ಇತರರ ಜೊತೆ ಮಾತುಕತೆ ಮಾಡುವಾಗ ಜಾಗೂರೂಕರಾಗಿ ಇರಬೇಕಾಗುತ್ತದೆ. ನೀವು ಆಡುವ ಮಾತಿನಿಂದ ಸ್ವಲ್ಪ ಕಷ್ಟಕರವಾಗಬಹುದು. ಹಾಗಾಗಿ ಬಹಳ ವಿನಯತೆಯಿಂದ ನೀವು ಇರಬೇಕಾಗುತ್ತದೆ.
ವೃಷಭ ರಾಶಿ: ವೃಷಭ ರಾಶಿ ಅವರಿಗೆ ಇಂದು ಅತ್ಯುತ್ತಮವಾದ ದಿನವಾಗಿದೆ. ಗೋಚರ ಅತೀ ಉತ್ತಮವಾಗಿದ್ದು ಬುಧ ವಕ್ರಿಯಾಗಿದ್ದಾನೆ. ಹಾಗಾಗಿ ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗಲಿದ್ದು ಶತ್ರುಗಳಿಂದಲೂ ಜಯವನ್ನು ಕಾಣುತ್ತೀರಿ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಬುಧ ತುಲಾ ರಾಶಿಯನ್ನು ಪ್ರವೇಶ ಮಾಡಲಿದ್ದು ಪ್ರೇಮ ದಾಂಪತ್ಯ ವಿಚಾರದಲ್ಲಿ ತೊಂದರೆ ಆಗಬಹುದು. ಹಾಗೆಯೇ ಹಣಕಾಸಿನ ವಿಚಾರದಲ್ಲೂ ವೆಚ್ಚಗಳು ಜಾಸ್ತಿಯಾಗಬಹುದು.
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ನೆಮ್ಮದಿ ಇರಲಿದ್ದು ಸಂಸಾರದಲ್ಲೂ ಖುಷಿ ಕಾಣಲಿದೆ. ನಿಮ್ಮ ತಾಯಿಯ ಜೊತೆ ಇಂದು ಸೌಹಾರ್ದ ಪ್ರಾಪ್ತಿಯಾಗುತ್ತದೆ.
ಇದನ್ನು ಓದಿ:Vastu Tips: ತಪ್ಪಿಯೂ ಮನೆಯ ಮುಖ್ಯ ದ್ವಾರದ ಮುಂದೆ ಈ ಮೂರು ವಸ್ತುಗಳು ಇರದಂತೆ ನೋಡಿಕೊಳ್ಳಿ..!
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ತುಲಾ ರಾಶಿಗೆ ಬುಧ ಬರುವುದರಿಂದ ಸಾಮಾಜಿಕ ಚಟುವಟಿಕೆ ಯಲ್ಲಿ ತೊಂದರೆ ಕಾಡಬಹುದು. ಮಾತುಕತೆಯಿಂದ ನೀವು ತೊಂದರೆಗೆ ಸಿಲುಕಿ ಕೊಳ್ಳಬಹುದು.
ಕನ್ಯಾ ರಾಶಿ: ಕನ್ಯಾ ರಾಶಿ ಅವರಿಗೆ ತುಲಾ ರಾಶಿಗೆ ಬುಧ ಬರುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಸಂಸಾರದಲ್ಲೂ ನೆಮ್ಮದಿ ಸಿಗುತ್ತದೆ. ಧನ ಆಗಮನ ಕೂಡ ಆಗುವ ಸಾಧ್ಯತೆ ಇದೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ.ನೀವು ಆಡುವ ಮಾತಿನಿಂದ ಬಹಳಷ್ಟು ತೊಂದರೆಗೆ ಸಿಲುಕಬಹುದು. ನಿಮಗೆ ಬೇಕಾದವರಿಂದ ಸಹಕಾರ ಸಿಗದೆ ಇರಬಹುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಷ್ಟಕರವಾದ ಗೋಚರ ಇರಲಿದೆ. ಕೆಲವು ಮಿತೃತ್ವದಲ್ಲಿ ಒಡಕು ಉಂಟಾಗಬಹುದು. ಹಾಗಾಗಿ ಬಹಳಷ್ಟು ವಿನಯತೆಯಿಂದ ನೀವು ವರ್ತಿಸಬೇಕಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಮಾತಿನಿಂದ, ಗುಂಪು ಕೆಲಸದಿಂದ ಧನ ಆಗಮನವಾಗಲಿದೆ ಹಾಗೂ ಇಷ್ಟಾರ್ಥ ಸಿದ್ದಿಯಾಗಲಿದೆ.
ಮಕರ ರಾಶಿ: ಮಕರ ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದ್ದು ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.ಬುಧ ನಿಮಗೆ ಅತೀ ಮುನ್ನಡೆಯನ್ನು ತಂದು ಕೊಡಲಿದ್ದಾನೆ.
ಕುಂಭರಾಶಿ: ಕುಂಭ ರಾಶಿ ಅವರಿಗೆ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ನಿಮಗೆ ಯಶಸ್ಸು ಸಿಗಲಿದೆ.
ಮೀನ ರಾಶಿ: ಮೀನ ರಾಶಿ ಅವರಿಗೆ ತುಲಾ ಬುಧ ರಾಶಿಯನ್ನು ಪ್ರವೇಶ ಮಾಡುವುದರಿಂದ ಮನಸ್ಸಿಗೆ ಖುಷಿ ಸಿಗುತ್ತದೆ. ಕೆಲವು ವಿಚಾರದಲ್ಲಿ ನಿಮಗೆ ಈ ಹಿಂದೆ ತೊಂದರೆ ಉಂಟಾಗಿದ್ದರೆ ಅದು ಬಗೆಹರಿದು ಸಮಸ್ಯೆ ನಿವಾರಣೆಯಾಗಲಿದೆ.