ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Vastu Tips: ಮನೆಯಲ್ಲಿ ಶಾಂತಿ - ಸಕಾರಾತ್ಮಕತೆ ಹೆಚ್ಚಿಸಲು ಬುದ್ಧನನ್ನು ಮನೆಯ ಯಾವ ಮೂಲೆಯಲ್ಲಿ ಇಡಬೇಕು?

ವಾಸ್ತು ಪ್ರಕಾರ, ಅನೇಕರು ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇರಿಸಿಕೊಂಡಿರುತ್ತಾರೆ. ಮನೆಯಲ್ಲಿ ಬುದ್ಧನ ಪ್ರತಿಮೆ ಇದ್ದರೆ ಮನೆ ಹಾಗೂ ಮನಸ್ಸು ಶಾಂತವಾಗಿರುತ್ತದೆ ಎಂದು ವಾಸ್ತು ಹೇಳುತ್ತದೆ. ಆದರೆ ಇವೆಲ್ಲವೂ ಸಂಭವಿಸಲು ನೀವು ಬುದ್ಧನ ಪ್ರತಿಮೆಯನ್ನು ಎಲ್ಲಿ ಇಟ್ಟಿದೀರಿ ಎಂಬುದು ಬಹಳ ಮುಖ್ಯ ಆಗುತ್ತದೆ.

ಮನೆಯ ಈ ಮೂಲೆಯಲ್ಲಿ ಬುದ್ದನ ವಿಗ್ರಹ ಇಡಿ

Profile Sushmitha Jain Mar 3, 2025 8:40 AM

ವಾಸ್ತು ಶಾಸ್ತ್ರದ ಪ್ರಕಾರ, ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಅಶಾಂತಿ, ನಕಾರಾತ್ಮಕತೆ ಅಥವಾ ಕುಟುಂಬದಲ್ಲಿ ಕಲಹ ಜಗಳದ ಸಮಸ್ಯೆಗಳು ಇದ್ದರೆ, ಮನೆಯಲ್ಲಿ ಬುದ್ಧವನ್ನು ಇಟ್ಟುಕೊಳ್ಳುವುದು ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಹಾಗಂತ ಮನೆಯಲ್ಲಿ ನಿಮಗೆ ಇಷ್ಟ ಬಂದ ಜಾಗದಲ್ಲಿ ಬುದ್ಧನ ಪ್ರತಿಮೆಯನ್ನು ಇಡುವಂತಿಲ್ಲ. ಅದನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಮುಖ್ಯ. ಹಾಗಾದ್ರೆ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಎಲ್ಲಿ ಇಡಬಹುದು ಮತ್ತು ಎಲ್ಲಿ ಇಡಬಾರದು ಎಂದು ತಿಳಿಯೋಣ

ವಾಸ್ತು ಪ್ರಕಾರ, ಅನೇಕರು ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇರಿಸಿಕೊಂಡಿರುತ್ತಾರೆ. ಮನೆಯಲ್ಲಿ ಬುದ್ಧನ ಪ್ರತಿಮೆ ಇದ್ದರೆ ಮನೆ ಹಾಗೂ ಮನಸ್ಸು ಶಾಂತವಾಗಿರುತ್ತದೆ ಎಂದು ವಾಸ್ತು ಹೇಳುತ್ತದೆ. ಆದರೆ ಇವೆಲ್ಲವೂ ಸಂಭವಿಸಲು ನೀವು ಬುದ್ಧನ ಪ್ರತಿಮೆಯನ್ನು ಎಲ್ಲಿ ಇಟ್ಟಿದೀರಿ ಎಂಬುದು ಬಹಳ ಮುಖ್ಯ ಆಗುತ್ತದೆ. ವಾಸ್ತು ಪ್ರಕಾರ ಬುದ್ಧನ ವಿಗ್ರಹವನ್ನು ಪೂರ್ವಾಭಿಮುಖವಾಗಿ ಮನೆಯ ದೇವರ ಕೋಣೆಯಲ್ಲಿ ಇರಿಸಿದರೂ ಇದರಿಂದ ಮನೆ ಮನದಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ.

ಮನೆಯ ಪ್ರವೇಶದ್ವಾರ

ಮನೆಯ ಎದುರಿನ ಬಾಗಿಲಿನ ಬಳಿ ಬುದ್ಧನ ಪ್ರತಿಮೆ ಇಡುವುದು ಒಳ್ಳೆಯದು. ಇದರಿಂದ ಬುದ್ಧನ ಪ್ರತಿಮೆ ಹೊರಗಿನಿಂದ ಬರುವ ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯುತ್ತದೆ. 

ಲಿವಿಂಗ್‌ ರೂಮ್‌

ವಾಸ್ತು ಪ್ರಕಾರ ಬುದ್ಧನ ಪ್ರತಿಮೆಯನ್ನು ಲಿವಿಂಗ್‌ ಹಾಲ್‌ನ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಉತ್ತಮ. ಇದು ಶಾಂತಿಯನ್ನು ಉಂಟು ಮಾಡುತ್ತದೆ. ಹಾಗೇ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದೇವರ ಕೋಣೆ 

ಅನೇಕ ಜನರು ತಾವು ಪ್ರಾರ್ಥಿಸುವ ಕೋಣೆಯಲ್ಲಿ ಧ್ಯಾನ ಮಾಡುವ ಬುದ್ಧನ ಕಲಾಕೃತಿಯನ್ನು ಇಡುತ್ತಾರೆ. ಇದು ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುವುದಲ್ಲದೇ, ಸಕಾರಾತ್ಮಕ ಶಕ್ತಿ ಮತ್ತು ವಿಶ್ರಾಂತಿಯನ್ನು ನೀಡುತ್ತದೆ. ನೀವು ಮೂರ್ತಿಯನ್ನು ಪೂರ್ವಕ್ಕೆ ಎದುರಾಗಿರುವ ಮೂಲೆಯಲ್ಲಿ ಇಡಬಹುದು, ಏಕೆಂದರೆ ಅದು ಜ್ಞಾನೋದಯವನ್ನು ಪ್ರತಿನಿಧಿಸುತ್ತದೆ. ಪೂಜೆ ಮಾಡುವ ಕೋಣೆಯಲ್ಲಿ ಬುದ್ಧನನ್ನು ಸಹ ಇರಿಸಬಹುದು. ಆದಾಗ್ಯೂ, ಅದನ್ನು ಕಣ್ಣಿನ ಮಟ್ಟದಲ್ಲಿ ಇಡಲು ಮರೆಯದಿರಿ, ಪ್ರಬುದ್ಧ ಗುರುವನ್ನು ಕಣ್ಣಿನ ಮಟ್ಟಕ್ಕಿಂತ ಕೆಳಗಿಡುವುದು ಒಳ್ಳೆಯದಲ್ಲ.

ಈ ಸುದ್ದಿಯನ್ನು ಓದಿ: Vastu Tips: ಈ ದಿಕ್ಕಿನಲ್ಲಿ ದಾಸವಾಳ ಗಿಡ ನೆಟ್ಟರೆ ಹೆಚ್ಚುತ್ತೆ ಸಂಪತ್ತು

ಮಕ್ಕಳ ಕೋಣೆಯಲ್ಲಿ

ಮಕ್ಕಳ ಅಧ್ಯಯನ ಕೊಠಡಿಯಲ್ಲಿ ಭಗವಾನ್ ಬುದ್ಧನ ಪ್ರತಿಮೆಯನ್ನು ಪೂರ್ವಾಭಿಮುಖವಾಗಿ ಆದರೆ ಇರಿಸಬಹುದು. ಇದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ, ಮತ್ತು ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ ಎಂದು ನಂಬಲಾಗಿದೆ. 

ಈ ತಪ್ಪು ಮಾಡಬೇಡಿ

ಆದರೆ ಯಾವುದೇ ಕಾರಣಕ್ಕೂ ಅಪ್ಪಿತಪ್ಪಿಯೂ ಬುದ್ಧನ ವಿಗ್ರಹವನ್ನು ನೆಲದ ಮೇಲೆ ಇಡಬೇಡಿ. ಯಾವಾಗಲೂ ನೆಲದಿಂದ 3-4 ಅಡಿ ಎತ್ತರದಲ್ಲಿ ಇರಿಸಿ. ಇದರಿಂದ ಶತ್ರುಗಳಿಂದ ಮುಕ್ತಿ ದೊರೆಯುತ್ತದೆ ಮತ್ತು ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ಇನ್ನು ಮಲಗುವ ಕೋಣೆಯಲ್ಲಿ ಇರಿಸುವುದನ್ನು ತಪ್ಪಿಸಿ, ಇದು ವಿಶ್ರಾಂತಿ ಶಕ್ತಿಯನ್ನು ಅಡ್ಡಿಪಡಿಸಬಹುದು. ಹಾಗೇ ಸಂಘರ್ಷದ ಶಕ್ತಿಗಳಿಂದಾಗಿ ಬಾತ್ರೂಮ್ ಅಥವಾ ಅಡುಗೆಮನೆಯಿಂದ ದೂರವಿರಿಸಿ.