ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Narak Chaturdashi 2025: ನರಕ ಚತುರ್ದಶಿಯ ಪೌರಾಣಿಕ ಹಿನ್ನೆಲೆ ಏನು? ಪೂಜೆ ವಿಧಾನ, ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

ನರಕ ಚತುರ್ದಶಿ ಹಬ್ಬವನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಈ ವಿಶೇಷ ದಿನವು ಅನೇಕ ಧಾರ್ಮಿಕ ಆಚರಣೆಗಳು, ನಂಬಿಕೆಗಳ ಪ್ರತೀಕವಾಗಿದ್ದು, ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಇದೆ. ನರಕ ಚತುದರ್ಶಿಯ ಕುರಿತಾದ ಒಂದಿಷ್ಟು ಮಾಹಿತಿ ಇಲ್ಲಿದೆ.

ನರಕ ಚತುರ್ದಶಿ ದಿನ ಹಿನ್ನಲೆ ಏನು ಗೊತ್ತಾ?

ನರಕ ಚತುರ್ದಶಿ -

Profile
Sushmitha Jain Oct 19, 2025 11:30 PM

ಬೆಂಗಳೂರು: ಸನಾತನ ಧರ್ಮದಲ್ಲಿ ಪ್ರತಿಯೊಂದು ಆಚಾರ - ವಿಚಾರಗಳಿಗೆ, ಸಂಸ್ಕೃತಿ - ಪದ್ಧತಿಗೆ, ಹಬ್ಬ ಹರಿದಿನಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಅದಕ್ಕೆ ದೀಪಾವಳಿಯು ಹೊರತಾಗಿಲ್ಲ. ಅಂಧಕಾರ ಕಳೆದು ಬೆಳಕಿನೆಡೆಗೆ ನಮ್ಮ ಜೀವನದ ಪಥವನ್ನು ಕೊಂಡೊಯ್ಯುವ ಶಕ್ತಿ ಈ ಹಬ್ಬಕ್ಕಿದೆ. ಈಗಾಗಲೇ ಎಲ್ಲೆಡೆ ದೀಪಾವಳಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದ್ದು, ಹಬ್ಬದ ಸಿದ್ಧತೆಗಳು ಭರದಿಂದ ಸಾಗಿದೆ.

ಸುಮಾರು ನಾಲ್ಕು ದಿನಗಳ ಕಾಲ ಆಚರಿಸುವ ಈ ಹಬ್ಬದ ಎರಡನೇ ದಿನ ನರಕ ಚತುದರ್ಶಿ ಹಬ್ಬಕ್ಕೆ ಮೀಸಲಾಗಿದ್ದು, ಇದನ್ನು ಹಲವೆಡೆ ಚೋಟಿ ದೀಪಾವಳಿ ಎಂದೂ ಕರೆಯುತ್ತಾರೆ. ಯಮ ದೇವನಿಗೆ ಗೌರವವನ್ನು ಸಲ್ಲಿಸುವುದಕ್ಕಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕೃಷ್ಣ, ಕಾಳಿ ಮತ್ತು ಸತ್ಯಭಾಮಾ ರಾಕ್ಷಸ ರಾಜ ನರಕಾಸುರನನ್ನು ಸೋಲಿಸಿದಂತೆ ಇದು ಕೆಟ್ಟದು ದೂರಾಗಿ ಒಳ್ಳೆಯದನ್ನು ಸ್ಮರಿಸುವ ಹಬ್ಬ. ಈ ದಿನವನ್ನು ವಿವಿಧ ರಾಜ್ಯಗಳಲ್ಲಿ ಭಿನ್ನವಾಗಿ ಆಚರಿಸಲಾಗುತ್ತದೆ. ನರಕ ಚತುರ್ದಶಿ ಹಬ್ಬವನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ದೀಪವನ್ನು ಬೆಳಗಿಸುವ ಮೂಲಕ ದುಷ್ಟ ಶಕ್ತಿಗಳನ್ನು ದೂರವಿಡಲು ಮತ್ತು ಯಮನಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಈ ವರ್ಷ ನರಕ ಚತುದರ್ಶಿ ಹಬ್ಬದ ಕುರಿತಾದ ಮಾಹಿತಿ ಇಲ್ಲಿದೆ...

ನರಕ ಚತುರ್ದಶಿ ಯಾವಾಗ?

ಹಿಂದು ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ಅಕ್ಟೋಬರ್‌ 19, ಮಧ್ಯಾಹ್ನ 1:51 ನರಕ ಚತುರ್ದಶಿಯ ಮುಹೂರ್ತ ಪ್ರಾರಂಭವಾಗುತ್ತದೆ. ಇದು ಮರುದಿನ 20ರಂದು ಸಂಜೆ 3:44 ಕ್ಕೆ ಕೊನೆಗೊಳ್ಳುತ್ತದೆ.

ಈ ಸುದ್ದಿಯನ್ನು ಓದಿ: Deepavali at Chikkaballapur: ದೀಪಾವಳಿ ಹಬ್ಬಕ್ಕೆ ಸಜ್ಜುಗೊಂಡ ಜಿಲ್ಲೆ : ಹಬ್ಬದ ಸಾಮಾನು ಖರೀದಿ ಜೋರು

ಪೌರಾಣಿಕ ಹಿನ್ನೆಲೆಯೇನು?:

ಭೂಮಿತಾಯಿಯ ಮಗನಾಗಿರುವ ರಾಕ್ಷಸ ನರಕಾಸುರ ಹಲವಾರು ರಾಜ್ಯಗಳನ್ನು ಆಳುತ್ತಿದ್ದ. ಆತನ ಆಡಳಿತ ಅಹಿತಕರ ಘಟನೆಗಳು, ಕಪಟ, ಮೋಸ ಹಾಗೂ ದುರಾಡಳಿತದಿಂದ ಕೂಡಿತ್ತು. ಪ್ರಜೆಗಳ ಹಿತಾಸಕ್ತಿ ಹಾಗೂ ರಾಜ್ಯದ ಸುಭಿಕ್ಷೆಯನ್ನು ಪರಿಗಣಿಸದೆ ದುರಂಕಾರದಿಂದ ಆಡಳಿತ ನಡೆಸುತ್ತಿದ್ದ. ಒಮ್ಮೆ ಆತನ ನೀಚ ಕಣ್ಣು ಸ್ವರ್ಗದ ಮೇಲೆ ಬಿತ್ತು. ಅಲ್ಲಿ ತನ್ನ ಪಾರುಪತ್ಯ ಹಾಗೂ ಆಡಳಿತ ನಡೆಸಬೇಕು ಎಂಬ ಆಸೆಪಟ್ಟು ಅದಕ್ಕಾಗಿ ಸ್ವರ್ಗದ ಅಧಿಪತಿ ಇಂದ್ರನ ವಿರುದ್ಧ ಯುದ್ಧವನ್ನು ಸಾರಿದ. ಇಂದ್ರನು ವಿಷ್ಣು ದೇವನಲ್ಲಿ ಸಹಾಯ ಯಾಚಿಸಿದ. ಆಗ ವಿಷ್ಣು ಕೃಷ್ಣನ ಅವತಾರದಲ್ಲಿ ಬಂದು ಸಹಾಯ ಮಾಡುವುದಾಗಿ ಭರವಸೆ ನೀಡಿದ.

ಆದರೆ ಬ್ರಹ್ಮನಿಂದ ಅದಾಗಲೇ ಹೆಂಗಸರನ್ನು ಹೊರತುಪಡಿಸಿ ಯಾರಿಂದಲೂ ಸೋಲು ಹೊಂದಬಾರದು ಎಂಬ ವರವನ್ನು ನರಕಾಸುರ ಪಡೆದುಕೊಂಡಿದ್ದ. ಹಾಗಾಗಿ ಆತನನ್ನು ಮಣಿಸಲು ಭಗವಾನ್ ವಿಷ್ಣು ಕೃಷ್ಣನ ಅವತಾರ ಏತುತ್ತಾನೆ. ಸಾರ್ತಿ ಎಂದು ಕರೆಯಲ್ಪಡುವ ಗರುಡನನ್ನು ಕರೆದು, ಅವನ ಹೆಂಡತಿ ಸತ್ಯಭಾಮೆಯ ಮೂಲಕ ನರಕಾಸುರನನ್ನು ಸೋಲಿಸಿ, ನರಕಾಸುರನನ್ನು ವಧೆ ಮಾಡಲಾಗುತ್ತದೆ. ದುಷ್ಟತನವನ್ನು ಸಂಹಾರ ಮಾಡಿ ವಿಜಯವನ್ನು ಪಡೆದ ದಿನವಾದ್ದರಿಂದ ಗೆಲುವಿನ ಸಂಕೇತವಾಗಿ ಹಬ್ಬವನ್ನು ಆಚರಿಸುತ್ತಾರೆ. ಈ ದಿನವನ್ನು ವಿವಿಧ ರಾಜ್ಯದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ.

ಪೂಜೆಯ ವಿಧಾನ ಹೇಗೆ?

ನರಕ ಚತುರ್ದಶಿಯಂದು ಸೂರ್ಯೋದಯಕ್ಕೆ ಮುನ್ನ ಎದ್ದು ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಿ ಶುಭ್ರ ಬಟ್ಟೆಯನ್ನು ಧರಿಸಬೇಕು. ನಂತರ ಯಮರಾಜನ ವಾಮನ ರೂಪ, ಶ್ರೀ ಕೃಷ್ಣ, ಕಾಳಿ ಮಾತೆ, ಭಗವಾನ್ ಶಿವ, ಹನುಮಂತ ಮತ್ತು ವಿಷ್ಣುವಿನ ವಿಶೇಷ ಪೂಜೆಯನ್ನು ಮಾಡಬೇಕು. ಈ ಎಲ್ಲ ದೇವರ ವಿಗ್ರಹಗಳನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಇಟ್ಟು ವಿಧಿ - ವಿಧಾನಗಳ ಪ್ರಕಾರ ಪೂಜಿಸಬೇಕು. ಧೂಪ ದೀಪಗಳನ್ನು ಬೆಳಗಿ, ಆರತಿ ಮಾಡಿ ದೇವರನ್ನು ಪ್ರಾರ್ಥಿಸಬೇಕು.
ನರಕ ಚತುರ್ದಶಿ ದಿನದಂದು ಯಮ ದೇವನನ್ನು ಪೂಜಿಸುವುದರಿಂದ ಕುಟುಂಬದ ಪ್ರತಿಯೊಬ್ಬ ಸದಸ್ಯರು ಅಕಾಲಿಕ ಮರಣದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ.