ದಿನ ಭವಿಷ್ಯ, ಜುಲೈ 14, 2026: ಇಂದು ಈ ರಾಶಿಗೆ ವೈಯಕ್ತಿಕ ವಿಚಾರದ ನಿರ್ಧಾರದಲ್ಲಿ ಗೊಂದಲ ಏರ್ಪಡುವ ಸಾಧ್ಯತೆ!
Horoscope Today July 14th ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣೆ ಪಕ್ಷದ, ಅಮಾವಾಸ್ಯ ತಿಥಿ ಪುನರ್ವಸು ನಕ್ಷತ್ರದ, ಜುಲೈ 14ನೇ ತಾರೀಖಿನ ಮಂಗಳವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಕೃಷ್ಣೆ ಪಕ್ಷದ, ಪುನರ್ವಸು ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.
ಮೇಷ ರಾಶಿ: ಈ ರಾಶಿಗೆ ಇಂದು ಮನೆಯ ವಿಚಾರ ಹಾಗೂ ಆಸ್ತಿ ಪಾಸ್ತಿ ವಿಚಾರವಾಗಿ ಮುಖ್ಯ ಗಮನ ನೀಡಬೇಕು.ಹಾಗೂ ಕೋರ್ಟ್ ಕಛೇರಿ ವ್ಯವಹಾರ ಬಗ್ಗೆಯೂ ಜಾಗೃತರಾಗಿ ಇರಬೇಕಾಗುತ್ತದೆ.
ವೃಷಭ ರಾಶಿ: ಈ ರಾಶಿಯವರಿಗೆ ಅತ್ಯುತ್ತಮವಾ ದಿನವಾಗಿದೆ. ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಹಾಗೂ ಸೇಲ್ಸ್ ಮಾರ್ಕೆಟಿಂಗ್ ವ್ಯವಹಾರದಲ್ಲೂ ಯಶಸ್ಸು ಕಾಣುತ್ತೀರಿ. ನಿಮ್ಮ ಮಾತಿನಿಂದಲೇ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ.
ಮಿಥುನ ರಾಶಿ: ಇಂದು ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಮನೆಯಲ್ಲಿ ಖುಷಿ,ಸಮೃದ್ಧಿ ಇಂದು ಹೆಚ್ಚಾಗುತ್ತದೆ. ಕೆಲಸ ಕಾರ್ಯದಲ್ಲೂ ಹೆಚ್ಚಿನ ಯಶಸ್ಸು ನೀವು ಪಡೆಯಬಹುದು.
ಕಟಕ ರಾಶಿ: ಕಟಕ ರಾಶಿ ಅವರು ಇಂದು ವ್ಯಕ್ತಿತ್ವದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಇತರರ ಜೊತೆ ನೀವು ಸಂಯಮದಿಂದ ವರ್ತಿಸಬೇಕಾಗುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಇಂದು ಕಷ್ಟಕರವಾದ ದಿನವಾಗಿದೆ. ಸ್ನೇಹ ಸಂಬಂಧದಲ್ಲಿ ಒಡಕು ಕಾಣಬಹುದು. ಇದ್ದಕ್ಕಿದ್ದಂತೆ ಎಲ್ಲರೂ ನಿಮ್ಮಿಂದ ದೂರವಾಗುವಂತೆ ಭಾಸವಾಗಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲಿದ್ದು ದಾಂಪತ್ಯದಲ್ಲಿ ನೆಮ್ಮದಿ ಕಾಣುತ್ತೀರಿ.ಇತರರಿಂದ ಧನ ಆಗಮನದ ಸೂಚನೆಗಳು ಕೂಡ ಇವೆ.
ತುಲಾ ರಾಶಿ: ತುಲಾ ರಾಶಿ ಅವರಿಗೆ ಇಂದು ಜವಾಬ್ದಾರಿಗಳು ಹೆಚ್ಚಾಗುತ್ತವೆ. ಮುಖ್ಯವಾದ ಕೆಲಸ ಕಾರ್ಯದಲ್ಲಿ ನೀವು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.ಹಾಗಾಗಿ ಸ್ವಲ್ಪ ಒತ್ತಡ ಹೆಚ್ಚಾಗಬಹುದು.
ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಉತ್ತಮ ದಿನವಾಗಿದೆ. ಮನಸ್ಸಿನ ಬೇಸರ ಇಂದು ಮಾಯವಾಗುತ್ತದೆ. ಆದೇ ರೀತಿ ಹಿಂದೆ ಇದ್ದ ನೋವೆಲ್ಲ ಮಾಯವಾಗಬಹುದು.
ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಕಷ್ಟಕರವಾದ ದಿನವಾಗಿದೆ. ಪ್ರೇಮ ಪ್ರೀತಿ ಪ್ರಕರಣದಲ್ಲಿ ಇಂದು ತೊಂದರೆ ಎದುರಾಗಬಹುದು. ಮುಖ್ಯ ನಿರ್ಧಾರವನ್ನು ಕೈಗೊಳ್ಳಲು ಹೋಗಬೇಡಿ.
ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಅತೀ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಪ್ರೀತಿ ಪಾತ್ರರಿಂದ ಬಹಳಷ್ಟು ಅಕ್ಕರೆ ನಿಮಗೆ ಸಿಗುತ್ತದೆ.
ಕುಂಭರಾಶಿ: ಈ ರಾಶಿಯವರಿಗೆ ಉತ್ತಮವಾದ ದಿನವಾಗಿದೆ.. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಸಿಗುತ್ತದೆ.
ಮೀನ ರಾಶಿ: ಮೀನ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಬುದ್ದಿವಂತಿಕೆ ಉಪಯೋಗಿಸಿ ಮಾಡುವ ಕೆಲಸದಲ್ಲಿ ಯಶಸ್ಸು. ಆದರೆ ವೈಯಕ್ತಿಕ ವಿಚಾರದಲ್ಲಿ ಗೊಂದಲ ಉಂಟಾಗಬಹುದು..