Horoscope Today January 29th: ಕುಜನ ಪ್ರಭಾವ: ಈ ರಾಶಿಗೆ ಇಂದು ಕೆಲಸ ಕಾರ್ಯದಲ್ಲಿ ಯಶಸ್ಸಿನ ಸುರಿಮಳೆ!
ನಿತ್ಯ ಭವಿಷ್ಯ ಜನವರಿ 29, 2026: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು ಮಘೆ ಮಾಸೆ, ಶುಕ್ಷ ಪಕ್ಷದ, ಏಕಾದಶಿ ತಿಥಿ, ಮೃಗಶಿರಾ ನಕ್ಷತ್ರದ ಜನವರಿ 29ನೇ ತಾರೀಖಿನ ಗುರುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ..
ಸಂಗ್ರಹ ಚಿತ್ರ -
ಬೆಂಗಳೂರು: ಇಂದು ವಿಶ್ವವಸು ನಾಮ ಸಂವತ್ಸರದ ಉತ್ತರಾಯನ ಶಿರದೃತು, ಮಘೆ ಮಾಸೆ, ಶುಕ್ಷ ಪಕ್ಷದ,ಮೃಗಶಿರಾ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದಂತೆ ನಿಮ್ಮ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.
ಮೇಷ ರಾಶಿ: ಇಂದು ಮೃಗಶಿರಾ ನಕ್ಷತ್ರ ಇದ್ದು ಇದರ ಅಧಿಪತಿ ಕುಜ ಹಾಗಾಗಿ ಹೆಚ್ಚಿನವರಿಗೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ..ಮೇಷ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇದ್ದು ಬಂಧು- ಬಾಂಧವರಿಂದ ಅತೀ ಹೆಚ್ಚಿನ ಪ್ರೀತಿ,ವಿಶ್ವಾಸವನ್ನು ನೀವು ಕಾಣಬಹುದು
ವೃಷಭ ರಾಶಿ: ಇಂದು ವೃಷಭ ರಾಶಿ ಅವರಿಗೆ ಸಂಸಾರಿಕ ತಾಪತ್ರ ಯಗಳು ಇಂದು ಜಾಸ್ತಿ ಯಾಗಬಹುದು.ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿ ಇರುವುದು ಅವಶ್ಯಕ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರಿಗೆ ಉತ್ತಮವಾದ ದಿನವಾಗಿದೆ. ಹಿಂದಿನ ದಿನದಲ್ಲಿ ಇದ್ದ ವೈಮನಸ್ಸುಗಳು ಇಂದು ದೂರವಾಗುತ್ತವೆ.
ಕಟಕ ರಾಶಿ: ಕಟಕ ರಾಶಿ ಅವರಿಗೆ ಕ್ಲೇಷ ಉಂಟಾಗುವ ದಿನವಾಗಿದೆ. ಮುಖ್ಯವಾದ ಸಂಬಂಧದಲ್ಲಿ ನಿಮಗೆ ಒಡಕು ಉಂಟಾಗಬಹುದು. ಇದರಿಂದ ಬೇಸರ ಉಂಟಾಗುವ ಸಾಧ್ಯತೆ ಇರುತ್ತದೆ.
ಸಿಂಹ ರಾಶಿ: ಸಿಂಹ ರಾಶಿ ಅವರಿಗೆ ಅತೀ ಉತ್ತಮವಾದ ದಿನವಾಗಿದೆ.ಇಷ್ಟಾರ್ಥ ಸಿದ್ದಿಯಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮಿತ್ರರಿಂದ ಧನ ಆಗಮನ ಕೂಡ ಉಂಟಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದ ಬಗ್ಗೆ ಹೆಚ್ಚಿನ ಗಮನವನ್ನು ನೀಡುತ್ತೀರಿ. ಕಾರ್ಯಕ್ಷೇತ್ರದ ಯಶಸ್ಸು ನಿಮಗೆ ಇಂದು ಅತೀ ಮುಖ್ಯ ವಾಗುತ್ತದೆ
ತುಲಾ ರಾಶಿ: ತುಲಾ ರಾಶಿಗೆ ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ಮನಸ್ಸಿನ ನೋವು ಮಾಯವಾಗುತ್ತದೆ. ಹಿಂದೆ ಇದ್ದ ಸಮಸ್ಯೆ ಬಗೆಹರಿದು ಮುಂದಿನ ಕೆಲಸಕ್ಕೆ ಮಾರ್ಗದರ್ಶನ ಪ್ರಾಪ್ತಿಯಾಗುತ್ತದೆ.ಆದರೆ ಭಗವಂತನ ಅನುಗ್ರಹ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಕಷ್ಟಕರವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಪ್ರೀತಿ ಪಾತ್ರರಿಂದ ಯಾವುದೇ ರೀತಿಯ ಸಹಕಾರ ಕೂಡ ನಿಮಗೆ ಸಿಗುವುದಿಲ್ಲ
ಧನಸ್ಸು ರಾಶಿ: ಧನಸ್ಸು ರಾಶಿ ಅವರಿಗೆ ಉತ್ತಮವಾದ ದಿನ ವಾಗಿದೆ. ಎಲ್ಲ ರೀತಿಯಿಂದಲೂ ಸಹಕಾರ ಸಿಗಲಿದ್ದು ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಸಿಗುತ್ತದೆ. ದಾಂಪತ್ಯದಲ್ಲಿ ಕೂಡ ಸುಖ ಕಾಣುತ್ತೀರಿ
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನ ವಾಗಿದೆ. ಆತ್ಮವಿಶ್ವಾಸ ತುಂಬಾ ಚೆನ್ನಾಗಿ ಇದ್ದು ಶತ್ರು ನಾಶ ಆಗಲಿದೆ.
ಕುಂಭರಾಶಿ: ಈ ರಾಶಿಯವರು ನಿಮ್ಮ ಬುದ್ದಿವಂತಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕು. ಆದರೆ ಅತೀ ಬುದ್ದಿವಂತಿಕೆ ತೋರಿಸಿದರೆ ನಿಮಗೆಯೇ ಹಾನಿ ಜಾಸ್ತಿ ಯಾಗುವ ಸಾಧ್ಯತೆ ಇದೆ. ಮಕ್ಕಳ ವಿಚಾರದಲ್ಲಿ ಇಂದು ತಾಳ್ಮೆ ಅಗತ್ಯ.
ಮೀನ ರಾಶಿ: ಮೀನ ರಾಶಿ ಅವರಿಗೆ ಸ್ವಲ್ಪ ಕಷ್ಟಕರವಾದ ದಿನವಾಗಿದೆ. ಮುಖ್ಯವಾದ ವಿಚಾರದಲ್ಲಿ ಇಂದು ಸಹಕಾರ ಸಿಗುವುದಿಲ್ಲ. ಆದ್ದರಿಂದ ಇಂದು ವಿವೇಕವಾಗಿ ಕೆಲಸ ಕಾರ್ಯಗಳನ್ನು ಮಾಡ ಬೇಕು.ಮುಖ್ಯ ನಿರ್ಧಾರ ಕೈಗೊಳ್ಳಲು ಎರಡು ದಿನ ಕಾಯುವುದು ಒಳ್ಳೆಯದು.