ದಿನ ಭವಿಷ್ಯ, ಮೇ 9, 2026: ಈ ರಾಶಿಗೆ ಇಂದು ಆರ್ಥಿಕವಾಗಿ ಲಾಭ ತರುವ ದಿನ!
Horoscope Today May 9th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷದ, ಸಪ್ತಮಿ ತಿಥಿ ,ಶ್ರವಣ ನಕ್ಷತ್ರದ ಮೇ 9 ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..
ಇಂಟರ್ ನೆಟ್ ಚಿತ್ರ -
ಬೆಂಗಳೂರು: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷದ, ಸಪ್ತಮಿ ತಿಥಿ ಶ್ರವಣ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಇಲ್ಲಿದೆ.
ಮೇಷ ರಾಶಿ: ಮೇಷ ರಾಶಿಗೆ ಇಂದು ಉತ್ತಮವಾದ ದಿನವಾಗಿದ್ದು ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಆದರೆ ಇಂದು ಭಾವುಕತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಸ್ನೇಹಿತರ ಜೊತೆ ಅತೀ ಭಾವುಕತೆಯಿಂದ ಮಾತನಾಡುತ್ತೀರಿ.
ವೃಷಭ ರಾಶಿ: ಈ ರಾಶಿಗೆ ಇಂದು ಭಾಗ್ಯೋದಯವಾದ ದಿನವಾಗಿದೆ. ಮನಸ್ಸಿಗೆ ನೆಮ್ಮದಿ ಪ್ರಾಪ್ತಿಯಾಗಲಿದ್ದು ಹಿರಿಯರ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಮುಖ್ಯವಾದ ವಿಚಾರದಲ್ಲೂ ಯಶಸ್ಸು ಪ್ರಾಪ್ತಿಯಾಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿ ಇರುವವರು ಇಂದು ಪ್ರೀತಿ ಪ್ರೇಮ ವಿಚಾರವಾಗಿ ಬಹಳ ಭಾವುಕರಾಗುತ್ತೀರಿ. ಮನಸ್ಸಿಗೆ ಬಹಳ ನೋವಾಗುವ ಸಂದರ್ಭವನ್ನು ಎದುರಿಸಬೇಕಾಗಿ ಬರಬಹುದು. ಮುಖ್ಯವಾದ ಯಾವುದೇ ನಿರ್ಧಾರ ಮಾಡಲು ಹೋಗಬೇಡಿ
ಕಟಕ ರಾಶಿ: ಕಟಕ ರಾಶಿ ಅವರಿಗೆ ಇಂದು ಉತ್ತಮವಾದ ದಿನವಾಗಿದೆ. ಪ್ರೀತಿ ಪಾತ್ರರಿಂದ ನೆಮ್ಮದಿ ಕಾಣುತ್ತಿರಿ. ದಾಂಪತ್ಯದಲ್ಲೂ ಹೊಂದಾಣಿಕೆ ಇರುತ್ತದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಕೆಲಸ ಕಾರ್ಯದಲ್ಲಿ ಅತೀ ಹೆಚ್ಚು ಯಶಸ್ಸು ಸಿಗುತ್ತದೆ. ಆದರೆ ಅತೀ ಭಾವುಕತೆಯಿಂದ ದಿನ ಕಳೆಯುತ್ತೀರಿ. ಶತ್ರುಗಳನ್ನು ಕೂಡ ನೀವು ಹಿಮ್ಮೆಟ್ಟಬಹುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕಷ್ಟಕರವಾದ ದಿನವಾಗಿದೆ. ದಾಂಪತ್ಯದಲ್ಲಿ ದೊಡ್ಡದಾದ ಬಿರುಕು ಇಂದು ಕಾಡಬಹುದು. ಆದ್ದರಿಂದ ಯೋಚಿಸಿ ನಿರ್ಧಾರ ಮಾಡುವುದು ಒಳಿತು
ತುಲಾ ರಾಶಿ: ತುಲಾ ಅವರಿಗೆ ಉತ್ತಮವಾದ ದಿನವಾಗಿದೆ. ಆದರೆ ಮನೆಯ ವಿಚಾರವಾಗಿ ದೊಡ್ಡದಾದ ನಿರ್ಧಾರ ನೀವು ತೆಗೆದುಕೊಳ್ಳಬಹುದು. ಇದರಿಂದ ಮನಸ್ಸಿಗೆ ಬೇಸರ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.
Vastu Tips: ಸುಗಂಧರಾಜ ಗಿಡ ಮನೆಯಲ್ಲಿ ನೆಟ್ಟರೆ ಸೌಭಾಗ್ಯ: ವಾಸ್ತು ಪ್ರಕಾರ ಯಾವ ದಿಕ್ಕು ಸೂಕ್ತ?
ವೃಶ್ಚಿಕ ರಾಶಿ: ಈ ರಾಶಿಗೆ ಇಂದು ಉತ್ತಮವಾದ ದಿನವಾಗಿದೆ. ಮನೆಯ ವಿಚಾರದಲ್ಲೂ ನೆಮ್ಮದಿ ಸಿಗಲಿದೆ. ಮಾಧ್ಯಮದಲ್ಲಿ ಕೆಲಸ ಮಾಡೋರಿಗೆ ಇಂದು ಲಾಭದಾಯಕ ದಿನವಾಗಿದೆ.
ಧನಸ್ಸು ರಾಶಿ: ಧನಸ್ಸು ರಾಶಿಗೆ ಇಂದು ಸಂಸಾರದ ತಾಪತ್ರ ಯಗಳು ಜಾಸ್ತಿಯಾಗಬಹುದು. ಅದೇ ರೀತಿ ಮನೆಯಲ್ಲಿ ಕಿರಿ ಕಿರಿ ಉಂಟಾಗುವ ಸಾಧ್ಯತೆಗಳು ಇರಬಹುದು. ಯಾರ ಜೊತೆಗೂ ಇಂದು ವಾದ ಮಾಡಲು ಹೋಗಬೇಡಿ
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮವಾದ ದಿನವಾಗಿದೆ. ಹಿಂದಿನ ದಿನದಲ್ಲಿ ಇದ್ದ ನೋವೆಲ್ಲ ಮಯವಾಗುತ್ತದೆ. ಕಾರ್ಯಕ್ಷೇತ್ರದಲ್ಲೂ ಅತೀ ಹೆಚ್ಚಿನ ಯಶಸ್ಸು ಸಿಗುತ್ತದೆ.
ಕುಂಭರಾಶಿ: ಈ ರಾಶಿಯವರಿಗೆ ಮನೆಯಲ್ಲಿ ಬೇಸರ ಉಂಟಾಗಬಹುದು. ಮುಖ್ಯವಾದ ಮಿತ್ರತ್ವದಲ್ಲಿ ಒಡಲು ಕಾಣುವ ಸಾಧ್ಯತೆ ಕೂಡ ಇರಬಹುದು.
ಮೀನ ರಾಶಿ: ಮೀನ ರಾಶಿಗೆ ಉತ್ತಮವಾದ ದಿನವಾಗಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಮಿತ್ರರ ಜೊತೆ ಇಂದು ಖುಷಿಯಾದ ಸಮಯವನ್ನು ನೀವು ಕಳೆಯುತ್ತೀರಿ.